ಯದುವೀರ್ ಅವಿರೋಧ ಆಯ್ಕೆಯಾಗಲಿ: ಎಚ್. ವಿಶ್ವನಾಥ್ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿವೃದ್ಧಿಪರ ಕಾರ್ಯಗಳನ್ನು ಮರೆಯಲುಂಟೇ? ಅಂದಿನ ಕಾಲದಲ್ಲೇ ಶೋಷಿತ ಸಮಾಜಕ್ಕಾಗಿ ಶೇ. 80 ರಷ್ಟು ಮೀಸಲಾತಿ ನೀಡಿದ ರಾಜಪ್ರಭುತ್ವ ಅದಾಗಿತ್ತು. ನೀರಾವರಿ, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳ ಸ್ಥಾಪನೆ, ಕೆ.ಆರ್.ಎಸ್. ಡ್ಯಾಂ ನಿರ್ಮಾಣ, ಪ್ರಜಾಪ್ರತಿನಿಧಿ ಸಭೆ ಹೀಗೆ ಈ ಭಾಗದ ಜನರಿಗೆ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸಿ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.