ಯಾಂತ್ರಿಕ ನಾಗರೀಕತೆಯಿಂದ ಪ್ರಕೃತಿಗೆ ವಿರುದ್ಧವಾಗಿದ್ದೇವೆ: ಶಂಕರ್ ದೇವನೂರುನಾವಿಂದು ಆರ್ಥಿಕ ಅವಿವೇಕತನ ಮತ್ತು ಯಾಂತ್ರಿಕ ನಾಗರೀಕತೆಯಲ್ಲಿ ಬದುಕುತಿದ್ದೇವೆ. ನಿಸರ್ಗವು ಸೌಂದರ್ಯ ಮಾತ್ರವಲ್ಲ. ನಮ್ಮೆಲ್ಲರ ಬದುಕಿನ ವ್ಯಕ್ತಿತ್ವದ ವಿಸ್ತಾರ. ಹುಟ್ಟುತ್ತ ಮಾನವ, ಬೆಳೆಯುತ್ತ ಸಾಧಕನಾಗಿ ಕೊನೆಯಲ್ಲಿ ಬೆಳಕಾಗಬೇಕು. ಇದು ಭಗವಂತ ಮನುಷ್ಯನಿಗೆ ಕೊಟ್ಟ ಮಹತ್ವದ ಸಂದೇಶ. ಬದುಕು ಬೆಳಕಾಗಬೇಕು. ಬದುಕು ಬಯಲಾಗಬೇಕು.