ಪರಿಷತ್ ಚುನಾವಣೆ: ಜಿಲ್ಲೇಲಿ ಶೇ.೯೨ರಷ್ಟು ಮತದಾನ

| Published : Jun 04 2024, 12:32 AM IST

ಸಾರಾಂಶ

ಕರ್ನಾಟಕ ವಿಧಾನಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸೋಮವಾರ ಮತದಾನ ನಡೆದಿದ್ದು, ಚಾಮರಾಜನಗರ ಜಿಲ್ಲೆಗೆ ಸಂಬಂಧಿಸಿದಂತೆ ಶೇ.೯೨ರಷ್ಟು ಮತದಾನವಾಗಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕರ್ನಾಟಕ ವಿಧಾನಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸೋಮವಾರ ಮತದಾನ ನಡೆದಿದ್ದು, ಚಾಮರಾಜನಗರ ಜಿಲ್ಲೆಗೆ ಸಂಬಂಧಿಸಿದಂತೆ ಶೇ.೯೨ರಷ್ಟು ಮತದಾನವಾಗಿದೆ.

ತಾಲೂಕುವಾರು ಮತದಾನದ ವಿವರ: ಗುಂಡ್ಲುಪೇಟೆ ಶೇ.೯೩ ರಷ್ಟು, ಚಾಮರಾಜನಗರ ಶೇ. ೯೪, ಯಳಂದೂರು ಶೇ. ೯೦, ಕೊಳ್ಳೇಗಾಲ ಶೇ. ೯೧ ಹಾಗೂ ಹನೂರು ತಾಲೂಕಿನಲ್ಲಿ ಶೇ. ೯೧ರಷ್ಟು ಮತದಾನವಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ಶೇ. ೯೨ರಷ್ಟು ಮತದಾನವಾಗಿದೆ.

ಮತದಾರರ ವಿವರ:

ಗುಂಡ್ಲುಪೇಟೆ ತಾಲೂಕಿನಲ್ಲಿ ೩೦೬ ಪುರುಷರು, ೯೭ ಮಹಿಳೆಯರು ಸೇರಿದಂತೆ ಒಟ್ಟು ೪೦೩ ಮತದಾರರು, ಚಾಮರಾಜನಗರ ೩೮೪ ಪುರುಷರು, ೨೧೯ ಮಹಿಳೆಯರು ಸೇರಿದಂತೆ ಒಟ್ಟು ೬೦೩ ಮತದಾರರು, ಯಳಂದೂರು ೧೪೮ ಪುರುಷರು, ೫೪ ಮಹಿಳೆಯರು ಸೇರಿದಂತೆ ಒಟ್ಟು ೨೦೨ ಮತದಾರರು, ಕೊಳ್ಳೇಗಾಲ ೪೧೭ ಪುರುಷರು, ೩೦೭ ಮಹಿಳೆಯರು ಸೇರಿದಂತೆ ಒಟ್ಟು ೭೨೪ ಮತದಾರರು ಹಾಗೂ ಹನೂರು ತಾಲೂಕಿನಲ್ಲಿ ೧೯೩ ಪುರುಷರು, ೫೬ ಮಹಿಳೆಯರು ಸೇರಿದಂತೆ ಒಟ್ಟು ೨೪೯ ಮತದಾರರಿದ್ದು, ಜಿಲ್ಲೆಯಲ್ಲಿ ಒಟ್ಟು ೧೪೪೮ ಪುರುಷರು, ೭೩೩ ಮಹಿಳೆಯರು ಸೇರಿದಂತೆ ೨೧೮೧ ಮತದಾರರಿದ್ದಾರೆ.

ಮತ ಚಲಾಯಿಸಿದವರು:

ಈ ಪೈಕಿ ಗುಂಡ್ಲುಪೇಟೆ ತಾಲೂಕಿನಲ್ಲಿ ೨೯೦ ಪುರುಷರು, ೮೬ ಮಹಿಳೆಯರು ಸೇರಿದಂತೆ ಒಟ್ಟು ೩೭೬ ಮತದಾರರು, ಚಾಮರಾಜನಗರ ೩೬೭ ಪುರುಷರು, ೨೦೧ ಮಹಿಳೆಯರು ಸೇರಿದಂತೆ ಒಟ್ಟು ೫೬೮ ಮತದಾರರು, ಯಳಂದೂರು ೧೩೪ ಪುರುಷರು, ೪೮ ಮಹಿಳೆಯರು ಸೇರಿದಂತೆ ಒಟ್ಟು ೧೮೨ ಮತದಾರರು, ಕೊಳ್ಳೇಗಾಲ ೩೭೯ ಪುರುಷರು, ೨೮೦ ಮಹಿಳೆಯರು ಸೇರಿದಂತೆ ಒಟ್ಟು ೬೫೯ ಮತದಾರರು ಹಾಗೂ ಹನೂರು ತಾಲೂಕಿನಲ್ಲಿ ೧೭೭ ಪುರುಷರು, ೫೦ ಮಹಿಳೆಯರು ಸೇರಿದಂತೆ ಒಟ್ಟು ೨೨೭ ಮತದಾರರು ಮತ ಚಲಾಯಿಸಿದ್ದು, ಜಿಲ್ಲೆಯಲ್ಲಿ ಒಟ್ಟು ೧೩೪೭ ಪುರುಷರು, ೬೬೫ ಮಹಿಳೆಯರು ಸೇರಿದಂತೆ ೨೦೧೨ ಮಂದಿ ಮತ ಚಲಾಯಿಸಿದ್ದಾರೆ.