ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡದೆ ವೈಯಕ್ತಿಕ ಟೀಕೆ ಮಾಡುತ್ತಿರುವ ಮಾಜಿ ಸಚಿವ ಸಾ.ರಾ. ಮಹೇಶ್ ಅವರ ಕೆಟ್ಟ ರಾಜಕೀಯ ಚಾಳಿ ಸರಿಯಲ್ಲ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ತಾಲೂಕಿನ ಸೌತನಹಳ್ಳಿ ಗ್ರಾಮದಲ್ಲಿ 15 ಲಕ್ಷ ರು. ಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅ. 15 ರಂದು ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದ ಅಟೋ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದಲ್ಲಿ ತಮ್ಮ ವಿರುದ್ದ ಮಾಜಿ ಸಚಿವರು ಮಾಡಿದ ಟೀಕೆಗಳಿಗೆ ಶಾಸಕರು ಪ್ರತ್ಯುತ್ತರ ನೀಡಿದರು.ನಮ್ಮ ಕುಟುಂಬದ ಬಗ್ಗೆ ಟೀಕೆ ಮಾಡುವ ಯಾವುದೇ ನೈತಿಕ ಹಕ್ಕು ಸಾ.ರಾ. ಮಹೇಶ್ ಅವರಿಗಿಲ್ಲ, ನಾನು ಮತ್ತು ನನ್ನ ತಂದೆ ಕ್ಷೇತ್ರದಲ್ಲಿ ರಾಜಕೀಯ ಮಾಡುತ್ತಿದ್ದಾಗ ನೀವು ಇಲ್ಲಿ ಇರಲೇ ಇಲ್ಲ ಎಂದು ವ್ಯಂಗ್ಯವಾಡಿದರಲ್ಲದೆ, ದೊಡ್ಡಸ್ವಾಮೇಗೌಡರ ಕುಟುಂಬದ ಶಕ್ತಿ ಮತ್ತು ಯೋಗ್ಯತೆ ನಮ್ಮ ಜನರಿಗೆ ತಿಳಿದಿದೆ ಎಂದು ಆತ್ಮವಿಶ್ವಾಸದಿಂದ ನುಡಿದರು.ನಮ್ಮ ಸೋದರತ್ತೆ ಯಶೋದಾ ಕುಮಾರ್ ಅವರು ಹೆಬ್ಬಾಳು ಜಿಪಂ ಕ್ಷೇತ್ರದಿಂದ 21 ವರ್ಷಗಳ ಹಿಂದೆಯೇ ಸದಸ್ಯರಾಗಿದ್ದರು, ಅನಂತರ ನಾನು ಸಹ ಎರಡು ಬಾರಿ ಸಾಲಿಗ್ರಾಮ ಜಿಪಂ ಕ್ಷೇತ್ರದ ಸದಸ್ಯನಾಗಿ ನಿರಂತರವಾಗಿ ಜನ ಸೇವೆ ಮಾಡಿ ಅನಂತರ ಮತದಾರರ ಆಶೀರ್ವಾದದಿಂದ ಬಹು ಮತಗಳ ಅಂತರದಿಂದ ಶಾಸಕನಾಗಿ ಆಯ್ಕೆಯಾಗಿದ್ದು, ನಿಮ್ಮ ಯಾವುದೇ ಗೊಡ್ಡು ಬೆದರಿಕೆಗೆ ಹೆದರುವವನಲ್ಲ ಎಂದರು.ಕೆ.ಆರ್. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ, ಇಒ ವಿ.ಪಿ. ಕುಲದೀಪ್, ಬಿಇಒ ಆರ್. ಕೃಷ್ಣಪ್ಪ, ಪಂಚಾಯತ್ ರಾಜ್ ಎಇಇ ಎಲ್. ವಿನುತ್, ಎಇ ರವಿಕುಮಾರ್ ಇದ್ದರು.