ಸಾರಾಂಶ
ಸಂಸದ ಬಿ.ವೈ. ರಾಘವೆಂದ್ರ ಮಾತನಾಡಿ, ಜಿಲ್ಲೆಯಲ್ಲೇ ಅತಿ ಹೆಚ್ಚು ಸೇವೆ ಸಲ್ಲಿಸಿರುವ 2ನೇ ಬ್ಯಾಂಕ್ ಎಂಬ ಕೀರ್ತಿಗೆ ಬಸವೇಶ್ವರ ಸಹಕಾರ ಬ್ಯಾಂಕ್ ಪಾತ್ರವಾಗಿದೆ. ಸೂರಣಿಗಿ ಸಿದ್ದಪ್ಪ, ಡಾ.ಮುರುಘರಾಜ್, ಶಿವಯೊಗಪ್ಪ ಅವರ ಆಡಳಿತ ಅವಧಿ ಅಮೂಲ್ಯವಾಗಿದೆ. ಪ್ರಾಮಾಣಿಕವಾಗಿ ಸೇವೆ ಮಾಡಿದಾಗ ಸಾರ್ವಜನಿಕರ ಹಣದ ಹೂಡಿಕೆ ಬ್ಯಾಂಕಿನ ಬೆಳವಣಿಗೆಗೆ ಕಾರಣವಾಗುತ್ತದೆ. ಲಂಡನ್ ತೇಮ್ಸ್ ನದಿಯ ತೀರದಲ್ಲಿ ಬಸವಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಮೂರುವರೆ ಕೋಟಿ ಅನುದಾನ ಯಡಿಯೂರಪ್ಪ ಅವರು ನೀಡಿದ್ದಾರೆ. ಕ್ಷೇತ್ರದ ಜನರ ಋಣ ತೀರಿಸುವ ಕೆಲಸ ಯಡಿಯೂರಪ್ಪ ಮಾಡಿದ್ದಾರೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ
ಸಂಘಟನೆ, ಸಹಬಾಳ್ವೆ ಹಾಗೂ ಸ್ವಾವಲಂಬನೆ ಸಹಕಾರತತ್ವದ ಸ್ಥಂಬಗಳು. ಸಹಕಾರಿ ಕ್ಷೇತ್ರ ಸಾರ್ವಜನಿಕರಿಗೆ ಸೇವೆ ಮಾಡುವ ಮೆಟ್ಟಿಲು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಪಟ್ಟಣದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ಬಸವೇಶ್ವರ ಸಹಕಾರ ಬ್ಯಾಂಕ್‌ನ 111ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಶೇ.70ರಷ್ಟು ಜನತೆ ಗ್ರಾಮೀಣ ಬಾಗದವರು. ಖಾಸಗಿ ಬ್ಯಾಂಕುಗಳ ನೀತಿಗಳು ಜನತೆಯನ್ನು ತಲುಪುವುದು ಕಷ್ಟದ ಮಾತು. ಪತ್ತಿನ ಸಹಕಾರ ಸಂಘಗಳು, ಸಹಕಾರ ಬ್ಯಾಂಕುಗಳು ಇಂಥ ಸಮಸ್ಯೆಗಳನ್ನು ಸರಿಪಡಿಸಿ, ಸಾರ್ವಜನಿಕರಿಗೆ ಸ್ಥಳೀಯ ಭಾಷೆಗಳಲ್ಲಿ ಸೇವೆ ನೀಡುತ್ತಿರುವುದು ಗಮನಾರ್ಹ. ರಾಷ್ಟ್ರೀಕತ ಬ್ಯಾಂಕುಗಳಿಗೆ ಸರಿಸಮಾನವಾಗಿ ಸಹಕಾರಿ ಬ್ಯಾಂಕುಗಳು ದುಡಿಯುತ್ತಿವೆ ಎಂದು ಹೇಳಿದರು.ಕಾರ್ಯಕ್ರಮಕ್ಕೂ ಮುನ್ನ ಬ್ಯಾಂಕ್ ಆವರಣದಲ್ಲಿ ನಿರ್ಮಿಸಿರುವ ಶ್ರೀ ಜಗಜ್ಯೋತಿ ಬಸವೇಶ್ವರ ಕಂಚಿನ ಪುತ್ಥಳಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆನಾವರಣಗೊಳಿಸಿದರು.
ಸಂಸದ ಬಿ.ವೈ. ರಾಘವೆಂದ್ರ ಮಾತನಾಡಿ, ಜಿಲ್ಲೆಯಲ್ಲೇ ಅತಿ ಹೆಚ್ಚು ಸೇವೆ ಸಲ್ಲಿಸಿರುವ 2ನೇ ಬ್ಯಾಂಕ್ ಎಂಬ ಕೀರ್ತಿಗೆ ಬಸವೇಶ್ವರ ಸಹಕಾರ ಬ್ಯಾಂಕ್ ಪಾತ್ರವಾಗಿದೆ. ಸೂರಣಿಗಿ ಸಿದ್ದಪ್ಪ, ಡಾ.ಮುರುಘರಾಜ್, ಶಿವಯೊಗಪ್ಪ ಅವರ ಆಡಳಿತ ಅವಧಿ ಅಮೂಲ್ಯವಾಗಿದೆ. ಪ್ರಾಮಾಣಿಕವಾಗಿ ಸೇವೆ ಮಾಡಿದಾಗ ಸಾರ್ವಜನಿಕರ ಹಣದ ಹೂಡಿಕೆ ಬ್ಯಾಂಕಿನ ಬೆಳವಣಿಗೆಗೆ ಕಾರಣವಾಗುತ್ತದೆ. ಲಂಡನ್ ತೇಮ್ಸ್ ನದಿಯ ತೀರದಲ್ಲಿ ಬಸವಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಮೂರುವರೆ ಕೋಟಿ ಅನುದಾನ ಯಡಿಯೂರಪ್ಪ ಅವರು ನೀಡಿದ್ದಾರೆ. ಕ್ಷೇತ್ರದ ಜನರ ಋಣ ತೀರಿಸುವ ಕೆಲಸ ಯಡಿಯೂರಪ್ಪ ಮಾಡಿದ್ದಾರೆ ಎಂದು ಹೇಳಿದರು.ಬ್ಯಾಂಕಿನ ಅಧ್ಯಕ್ಷ ಕುಪ್ಪೇಲೂರು ವೇದಮೂರ್ತಿ ಮಾತನಾಡಿದರು. ಕೋರಿ ಟೋಪಿ ವಿರಕ್ತ ಮಠದ ಮ.ನಿ.ಪ್ರ, ಸಿದ್ದೇಶ್ವರ ಶ್ರೀ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಡಾ.ಮತ್ಯುಂಜಯ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಬ್ಯಾಂಕ್ ಷೇರುದಾರರಿಗೆ ನೀಡಲಾಗುವ ಬೆಳ್ಳಿನಾಣ್ಯವನ್ನು ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ವಿತರಿಸಲಾಯಿತು.ಉಪಾಧ್ಯಕ್ಷ ಮಹಾಗಣಪತಿ, ನಿರ್ದೇಶಕರಾದ ಗಂಗಮ್ಮ, ಡಾ. ಎಸ್.ಮುರುಘರಾಜ್, ನಿವೇದಿತಾ ರಾಜು, ಬಿ.ವಿ. ಶೇಷಗಿರಿ, ಚಂದ್ರಮೌಳೇಶ್ವರ, ಇಸಳೂರು ಉಮೇಶ್, ವಿ.ಸಿ. ಅಶೋಕ, ಪ್ರಭುಲಿಂಗಪ್ಪ, ನಟರಾಜ್ ಸೂರಣಗಿ, ರಾಜೇಶ್ ಕಷ್ಣಮೂರ್ತಿ, ಬಿ.ಡಿ.ಭೂಕಾಂತ್ ಇನ್ನಿತರರು ಇದ್ದರು.
- - - -27ಕೆ.ಎಸ್.ಎಚ್.ಆರ್1: ಶಿರಾಳಕೊಪ್ಪ ಪಟ್ಟಣದಲ್ಲಿ ಸೋಮವಾರ ಬಸವೇಶ್ವರ ಸಹಕಾರ ಬ್ಯಾಂಕ್ 111ನೇ ವರ್ಷದ ವಾರ್ಷಿಕೋತ್ಸವ ನಡೆಯಿತು. -27ಕೆ.ಎಸ್.ಎಚ್.ಆರ್01: ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ಆವರಣದಲ್ಲಿ ಪ್ರತಿಷ್ಠಾಪಿಸಲಾದ ಬಸವೇಶ್ವರ ಮೂತಿರ್ಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನಾವರಣ ಮಾಡಿದರು.