ಜೂ.೨೩ರಂದು ಕವಿ ಎಚ್‌ಎಸ್‌ವಿ ನುಡಿ-ಗೀತನಮನ

| Published : Jun 19 2025, 11:48 PM IST

ಸಾರಾಂಶ

ಗೀತನಮನ ಕಾರ್ಯಕ್ರಮದಲ್ಲಿ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ನಗರ ಶ್ರೀನಿವಾಸ್‌ ಉಡುಪ, ಡಾ.ಅಪ್ಪಗೆರೆ ತಿಮ್ಮರಾಜು, ಪ್ರತಿಭಾಂಜಲಿ ಡೇವಿಡ್, ಬಿ.ವಿ.ಪ್ರವೀಣ್, ಧನಂಜಯ, ಶ್ರೀಧರ್, ಮಂಗಳಾ, ಜೋಗಿ ಸುನೀತಾ. ಡಾ.ವರ್ಷಾಹೂಗಾರ್, ಹಂಸರೇಖಾ, ಅಮೂಲ್ಯ ಪಾಲ್ಗೊಳ್ಳಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪು.ತಿ.ನರಸಿಂಹಾಚಾರ್ ಟ್ರಸ್ಟ್ ಮತ್ತು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯಿಂದ ಖ್ಯಾತ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರಿಗೆ ಪುಷ್ಪಪನಮನ, ನುಡಿನಮನ, ಗೀತನಮನ, ನೃತ್ಯನಮನ ಮತ್ತು ಜನ್ಮದಿನಾಚರಣೆ ಕಾರ್ಯಕ್ರಮವನ್ನು ಇಷ್ಟು ಕಾಲ ಒಟ್ಟಿಗಿದ್ದು... ಶೀರ್ಷಿಕೆಯಡಿ ಜೂ.೨೩ರಂದು ಸಂಜೆ ೫.೩೦ಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.

ಪುಷ್ಪನಮನವನ್ನು ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ನೆರವೇರಿಸುವರು. ಉದ್ಘಾಟನೆಯನ್ನು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಡಾ.ಪು.ತಿ.ನರಸಿಂಹಾಚಾರ್ ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ ವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಖ್ಯಾತ ಕವಿ ಬಿ.ಆರ್.ಲಕ್ಷ್ಮಣ ರಾವ್, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಚಿತ್ರಸಾಹಿತಿ ವಿ.ನಾಗೇಂದ್ರಪ್ರಸಾದ್, ಚುಟುಕು ಸಾಹಿತಿ ಎಚ್.ದುಂಡಿರಾಜ್, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ನಾಗರಾಜು ವಿ.ಭೈರಿ, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶಗೌಡ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಯ್ಯ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ನವೀನ್‌ಕುಮಾರ್, ಸೌತ್ ಮಲ್ಟಿಪಲ್ ಕೌನ್ಸಿಲ್ ಉಪಾಧ್ಯಕ್ಷ ಕೆ.ಟಿ.ಹನುಮಂತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಮತ್ತಿತರರು ಪಾಲ್ಗೊಳ್ಳುವರು ಎಂದರು.

ಗೀತನಮನ ಕಾರ್ಯಕ್ರಮದಲ್ಲಿ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ನಗರ ಶ್ರೀನಿವಾಸ್‌ ಉಡುಪ, ಡಾ.ಅಪ್ಪಗೆರೆ ತಿಮ್ಮರಾಜು, ಪ್ರತಿಭಾಂಜಲಿ ಡೇವಿಡ್, ಬಿ.ವಿ.ಪ್ರವೀಣ್, ಧನಂಜಯ, ಶ್ರೀಧರ್, ಮಂಗಳಾ, ಜೋಗಿ ಸುನೀತಾ. ಡಾ.ವರ್ಷಾಹೂಗಾರ್, ಹಂಸರೇಖಾ, ಅಮೂಲ್ಯ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ನೃತ್ಯ ನಮನದಲ್ಲಿ ನಂದಿಕೇಶ್ವರ ಭರತನಾಟ್ಯ ಕಲಾಶಾಲೆಯ ವಿದೂಷಿ ಶೈಲಜಾ ಭಾಗವಹಿಸುವರು. ವೃಂದ ಗಾಯನದಲ್ಲಿ ಐಶ್ವರ್ಯಅನಿ, ಧನಂಜಯ, ಸಿಂಧುಶ್ರೀ, ವಂದನಾ. ಕರಣ್, ಸಂತೋಷ್, ಸಾಯಿದೀಪ್ತಿ, ಅಮೃತಾ, ರಿಶಾಂಕ್, ಪ್ರತಿಭಾಂಜಲಿ ಸಸುಗಮ ಸಂಗೀತ ಅಕಾಡೆಮಿ ಗಾಯಕರು ಭಾಗವಹಿಸುವರು ಎಂದರು.

ಗೋಷ್ಠಿಯಲ್ಲಿ ಮೀರಾ ಶಿವಲಿಂಗಯ್ಯ, ಡೇವಿಡ್, ಡಾ.ಬಿ.ವಿ.ನಂದೀಶ್ ಇದ್ದರು.

ನಾಳೆ ಜಿಲ್ಲೆಗೆ ರಾಜ್ಯ ಮಾಹಿತಿ ಆಯುಕ್ತರ ಭೇಟಿ

ಮಂಡ್ಯ: ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾದ ಬದ್ರುದ್ದೀನ್ ಕೆ. ಮತ್ತು ಡಾ.ಹರೀಶ್ ಕುಮಾರ್ ಅವರು ಜೂನ್ 21ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಜಿಪಂ ಕಾವೇರಿ ಸಭಾಂಗಣದಲ್ಲಿ ಜಿಲ್ಲೆಯ ಅಧಿಕಾರಿಗಳು ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಕಾಯ್ದೆ 2005 ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಸಂವಾದ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ ಎಂದು ರಾಜ್ಯ ಮಾಹಿತಿ ಆಯುಕ್ತರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.