ಸಾರಾಂಶ
ಮಾನ್ವಿ ಪಟ್ಟಣದ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನಕ್ಕೆ ಶಾಸಕ ಹಂಪಯ್ಯ ನಾಯಕ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಮಾನ್ವಿ
5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಾಯಂದಿರು ಎರಡು ಹನಿ ಪೋಲಿಯೋ ಲಸಿಕೆಯನ್ನು ಹಾಕಿಸುವ ಮೂಲಕ ಮಗುವಿಗೆ ಪೋಲಿಯೋ ಕಾಯಿಲೆ ಬರದಂತೆ ಹಾಗೂ ಅಂಗವಿಕಲತೆ ಉಂಟಾಗುವುದನ್ನು ತಪ್ಪಿಸಬಹುದು ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.ಪಟ್ಟಣದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯಿಂದ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ತಾಲೂಕಿನಾದ್ಯಂತ ಅರೋಗ್ಯ ಇಲಾಖೆ ವತಿಯಿಂದ ಉಚಿತವಾಗಿ ಪೋಲಿಯೋ ಲಸಿಕೆ ನೀಡಲಾಗುತ್ತಿದೆ. ಪಾಲಕರು ತಪ್ಪದೆ ತಮ್ಮ ಮಕ್ಕಳಿಗೆ ಲಸಿಕೆಯನ್ನು ಹಾಕಿಸಬೇಕು ಎಂದರು.
ಆರೋಗ್ಯಾಧಿಕಾರಿ ಡಾ.ಶರಣ ಬಸವರಾಜ, ಮುಖ್ಯ ವೈದ್ಯಾಧಿಕಾರಿ ಅರವಿಂದ್ ಕುಮಾರ್, ಮಕ್ಕಳ ತಜ್ಞರಾದ ಡಾ.ಶರಣಪ್ಪ, ಶಿಶುಅಭಿವೃದ್ದಿ ಅಧಿಕಾರಿ ಮನ್ಸೂರ್ ಅಹಮದ್, ಉಪ ತಹಸೀಲ್ದಾರ್ ವಿರುಪಣ್ಣ, ಪುರಸಭೆ ಅರೋಗ್ಯಾಧಿಕಾರಿ ಮಹೇಶ್, ಹಿರಿಯ ಪುರಸಭೆ ಸದಸ್ಯರಾದ ರಾಜಾ ಮಹೇಂದ್ರನಾಯಕ, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಬಾಬು ಚಿನ್ನು, ಸೇರಿದಂತೆ ಇನ್ನಿತರರು ಇದ್ದರು.ಹಿರೆಕೋಟ್ನೇಕಲ್: ತಾಲೂಕಿನ ಹಿರೆಕೋಟ್ನೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ಅಮರೇಶ ಹಾಗೂ ಉಪಾಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್ ಹಾಗೂ ಡಾ.ಹನುಮೇಶ್ ನಾಯಕ ಜಂಟಿಯಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರದ ಅಧಿಕಾರಿಗಳಾದ ಭೀಮೇಶಪ್ಪ, ಹನುಮಗೌಡ, ಮುನವರ ಅಲಿ, ವೆಂಕಯ್ಯ ಶೆಟ್ಟಿ, ನಾಗರತ್ನ, ಜಯಲಕ್ಷ್ಮೀ,ಅನಿತಾ, ಈಶಮ್ಮ ಇದ್ದರು.