ಬಜೆಟ್ ನಲ್ಲಿ ಆಸ್ತಿ ತೆರಿಗೆ ಮತ್ತೆ ಶೇ.2 ರಷ್ಟು ಹೆಚ್ಚಳ

| Published : Feb 18 2024, 01:32 AM IST

ಸಾರಾಂಶ

ಇಂಡಿ ಪುರಸಭೆಯ 2024-25 ನೇ ಸಾಲಿನ ಆಯ್ಯ-ವ್ಯಯ ಮಂಡನೆಯಾಗಿದ್ದು, ಪುರಸಭೆ ಆಡಳಿತಾಧಿಕಾರಿ ಎಸಿ ಅಬೀದ್‌ ಗದ್ಯಾಳ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಸಮ್ಮುಖದಲ್ಲಿ ₹46.67 ಕೋಟಿ ಗ್ರಾತ್ರದ ₹ 4.07 ಲಕ್ಷ ಉಳಿತಾಯ ಬಜೆಜ್ ಮಂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಇಂಡಿ

ಇಂಡಿ ಪುರಸಭೆಯ 2024-25 ನೇ ಸಾಲಿನ ಆಯ್ಯ-ವ್ಯಯ ಮಂಡನೆಯಾಗಿದ್ದು, ಪುರಸಭೆ ಆಡಳಿತಾಧಿಕಾರಿ ಎಸಿ ಅಬೀದ್‌ ಗದ್ಯಾಳ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಸಮ್ಮುಖದಲ್ಲಿ ₹46.67 ಕೋಟಿ ಗ್ರಾತ್ರದ ₹ 4.07 ಲಕ್ಷ ಉಳಿತಾಯ ಬಜೆಜ್ ಮಂಡಿಸಿದ್ದಾರೆ. ಆಡಳಿತಾಧಿಕಾರಿ ಕಚೇರಿಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ಹಮ್ಮಿಕೊಂಡ ಕಳೆದ ಬಾರಿಯ ಬಜೆಟ್ ಗಿಂತ ₹13.29 ಕೋಟಿ ಹೆಚ್ಚುವರಿ ಗಾತ್ರದ ಬಜೆಟ್ ಮಂಡಿಸಿದರು.

ಆಸ್ತಿ ತೆರಿಗೆ ಶೇ.2 ಹೆಚ್ಚಳ:

ಪಟ್ಟಣದ ಸರ್ವತೋಮುಖ ಅಭಿವೃದ್ಧಿಯನ್ನ ಗುರಿಯಾಗಿರಿಸಿಕೊಂಡು ಮಂಡಿಸಲಾದ ಈ ಬಜೆಟ್ ಪುರಸಭೆಯ ಬಹುದೊಡ್ಡ ಆದಾಯದ ಮೂಲವಾದ ಆಸ್ತಿ ತೆರಿಗೆಯನ್ನು ಪ್ರಸಕ್ತ ವರ್ಷ ಮತ್ತೆ ಶೇ.2 ರಷ್ಟು ಹೆಚ್ಚಿಸಲಾಗಿದೆ. ಇದರಿಂದ ಸಾರ್ವಜನಿಕರ ಮೇಲೆ ತೆರಿಗೆ ಬಾರ ಬಿದ್ದಿದ್ದು, ನಾಗರಿಕರಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಇನ್ನಿತರೆ ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗಿದೆ. ಆಸ್ತಿ ತೆರಿಗೆ, ಕಟ್ಟಡಗಳ ಬಾಡಿಗೆ, ವಾಣಿಜ್ಯ ಸಂಕೀರ್ಣಗಳ ಬಾಡಿಗೆ, ರಾಜಸ್ವಗಳು, ನೈರ್ಮಲೀಕರಣ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ಕಟ್ಟಡ ಕಾಯ್ದೆಗಳಿಗೆ ಸಂಬಂಸಿದ ಶುಲ್ಕ, ಕುಡಿಯುವ ನೀರು ಸರಬರಾಜು, ವ್ಯಾಪಾರ ಪರವಾನಿಗೆ ಶುಲ್ಕ, ಲೋಕೊಪಯೋಗಿ ಕಾಮಗಾರಿಗಳಾದ ಸಾಮಾನ್ಯ, ರಸ್ತೆ ಅಗೆತ ಶುಲ್ಕಗಳು, ಜನನ, ಮರಣ ಪ್ರಮಾಣ ಪತ್ರ ಶುಲ್ಕಗಳು, ಕೊಳಚೆ ಪ್ರದೇಶಾಭಿವೃದ್ದಿ ಉಪಕರ ಸೇರಿದಂತೆ ಸ್ವೀಕೃತಿಗಳು ಹಾಗೂ ಮುನ್ಸಿಪಲ್‌ ಬಾಡಿಗೆ, ಸಾಮಾನ್ಯ ಆಡಳಿತ, ದುರಸ್ತಿಗಳು, ನಿರ್ವಹಣೆ, ರಸ್ತೆ ಕಲ್ಲು ಹಾಸುಗಳು ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ಚರಂಡಿಗಳು, ತೆರೆದ ಚರಂಡಿಗಳು, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆ ದಾಸ್ತಾನು ವೆಚ್ಚಗಳು, ನಾಗರಿಕ ಸೌಕರ್ಯಗಳು-ಒಳಚರಂಡಿ, ಉದ್ಯಾನವನ ದುರಸ್ತಿ, ಸ್ಮಶಾನ ಅಭಿವೃದ್ದಿ, ನೀರು ಸರಬರಾಜು ಸೇರಿ ಹಲವು ವೆಚ್ಚಗಳ ಆಯ್ಯ-ವ್ಯಯಗಳ ಮುಖ್ಯಾಂಶಗಳನ್ನು ಒಳಗೊಂಡ ಬಜೆಟ್ ನ್ನು ಮಂಡಿಸಲಾಗಿದೆ.ಆಸ್ತಿ ತೆರಿಗೆ, ಕಟ್ಟಡಗಳಿಂದ ಬಾಡಿಗೆ, ರಾಜಸ್ವಗಳು, ನೈರ್ಮಲೀಕರಣ ಘನತ್ಯಾಜ್ಯ ನಿರ್ವಹಣೆ, ಕಟ್ಟಡ ಕಾಯ್ದೆಗಳ ಶುಲ್ಕ,ನಾಗರಿಕ ಸೌಕರ್ಯಗಳಿಂದ, ವ್ಯಾಪಾರ ಪರವಾನಿಗೆ ಶುಲ್ಕ, ರಸ್ತೆ ಅಗೆತ ಶುಲ್ಕ, ಜನನ, ಮರಣ ಪ್ರಮಾಣಪತ್ರ ಶುಲ್ಕ, ಜಾಹಿರಾತು ತೆರಿಗೆಯಿಂದ ಅನುದಾನ ಸ್ವೀಕೃತಿ ಮಾಡಿಕೊಳ್ಳಲಾಗುತ್ತದೆ.ಈ ಬಜೆಟ್ ನಲ್ಲಿ ಮನೆ, ನಲ್ಲಿ, ಆಸ್ತಿ ತೆರಿಗೆಯಲ್ಲಿ ಯಾವುದೇ ಕಡಿತ ಇಲ್ಲ. ಪ್ರಸಕ್ತ ವರ್ಷ ಶೇ.2 ರಷ್ಟು ತೆರಿಗೆ ಹೆಚ್ಚಿಸಿ ಮತ್ತಷ್ಟು ನಾಗರಿಕರಿಗೆ ಬಾರ ಮಾಡಿ ಹೊರಿಸಿದ್ದು, ಪಟ್ಟಣ ಪ್ರಮುಖ ರಸ್ತೆಗಳಲ್ಲಿ ನಾಗರಿಕರಿಗೆ ಅನುಕೂಲವಾಗುವಂತೆ ಶೌಚಾಲಯ, ಮೂತ್ರಾಲಯಗಳ ವ್ಯವಸ್ಥೆ ಅಳವಡಿಸಿರುವುದಿಲ್ಲ. ಹೀಗಾಗಿ ಇದು ಸಾಮಾನ್ಯ ನಾಗರಿಕರ ಬಬಜೆಟ್ ಅಲ್ಲ. ಇದು ಪುರಸಭೆ ಲಾಭಕ್ಕಾಗಿ ಮಂಡಿಸಿದ ಬಜೆಟ್ ಆಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಲೆಕ್ಕಾಧಿಕಾರಿ ಅಸ್ಲಮ ಖಾದಿಮ, ಇಂಜನೀಯರ್ ಅಶೋಕ ಚಂದನ್, ಕಚೇರಿ ವ್ಯವಸ್ಥಾಪಕ ಪ್ರವೀಣ ಸೋನಾರ, ಕಂದಾಯ ಅಧಿಕಾರಿ ಸದಾಶಿವ ನಿಂಬಾಳಕರ, ಆರೋಗ್ಯಾಧಿಕಾರಿ ಶಿವು ಸೋಮನಾಯಕ, ಸುಭಾನಿ ಕಸಬ, ಚಂದು ಕಾಲೇಬಾಗ, ಹುಚ್ಚಪ್ಪ ಶಿವಶರಣ ಮೊದಲಾದವರು ಸಭೆಯಲ್ಲಿ ಇದ್ದರು.ನಗರ ಸೌಂದರ್ಯಕ್ಕೆ ಆದ್ಯತೆ:

ಮೆಗಾ ಮಾರುಕಟ್ಟೆ ನಿರ್ಮಾಣ, ಗಾರ್ಡನ್‌ಗಳ ಅಭಿವೃದ್ದಿ, ಪಟ್ಟಣದ ಒಳರಸ್ತೆಗಳ ಅಭಿವೃದ್ದಿ, ಚರಂಡಿ, ಬೀದಿ ದೀಪ ಸೇರಿದಂತೆ ನಗರ ಸೌಂದರ್ಯಕರಣಕ್ಕೆ ಬಜೆಟನಲ್ಲಿ ಆಧ್ಯತೆ ನೀಡಲಾಗಿದೆ. ಸ್ಮಶಾನ ಅಭಿವೃದ್ದಿ, ನೀರು ಸರಬರಾಜು, ಸಾರ್ವಜನಿಕ ಆರೋಗ್ಯ, ಮಳೆ ನೀರಿನ ಚರಂಡಿಗಳು, ತೆರೆದ ಚರಂಡಿಗಳು, ನಾಗರಿಕ ಸೌಕರ್ಯಗಳ ಅಭಿವೃದ್ದಿಗೆ ಹೆಚ್ಚು ಗಮನ ಹರಿಸಲಾಗಿದೆ.