ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ತುಮ್ಕೋಸ್ ಸಂಸ್ಥೆಯಲ್ಲಿ ಮಂಗಳವಾರ ಅಡಕೆ ಖರೀದಿಯಲ್ಲಿ ಕಳಪೆ ಮತ್ತು ಗುಣಮಟ್ಟದ ವಿಚಾರವಾಗಿ ರೈತರು ಸಂಸ್ಥೆಯ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, ಈ ಪ್ರತಿಭಟನೆ ಬುಧುವಾರವೂ ಮುಂದುವರಿಯಿತು.ಅಡಕೆಯ ಗುಣಮಟ್ಟದ ಬಗ್ಗೆ ಪರ- ವಿರೋಧದ ಚರ್ಚೆಗಳು ನಡೆದು ಸಂಸ್ಥೆಯ ಅಧ್ಯಕ್ಷ ಆರ್.ಎಂ.ರವಿ, ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ನಡುವೆ ವಾಗ್ವಾದಗಳು, ತಳ್ಳಾಟ ಸಹ ಜರುಗಿತು. ಈ ವಿಚಾರವಾಗಿ ಸ್ಥಳಕ್ಕೆ ತಹಸೀಲ್ದಾರ್ ಶಂಕರಪ್ಪ, ಡಿವೈಎಸ್ಪಿ ಸ್ಯಾಮ್ ವರ್ಗಿಸ್ ಮತ್ತು ಸಿಬ್ಬಂದಿ ತುಮ್ಕೋಸ್ ಕಚೇರಿಗೆ ತೆರಳಿ ಮಂಗಳವಾರ ಮಾರಾಟಕ್ಕೆ ತಂದಿದ್ದ ರೈತ ರಾಜಪ್ಪ ಮತ್ತು ಸೋಮಶೇಖರ್ ಅವರ ಅಡಕೆ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು.
ಸಂಸ್ಥೆ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ಮಾತನಾಡಿ, ಕಳೆಪೆ ಮತ್ತು ಗುಣಮಟ್ಟದ ಅಡಕೆಗಳನ್ನು ಆರಿಸಿ ತೆಗೆಯಲು ತುಮ್ಕೋಸ್ ಸಂಸ್ಥೆಯ ಸಿಬ್ಬಂದಿಯನ್ನು ಬಳಸಿಕೊಳ್ಳಬಾರದು. ಹೊರಗಿನ ವ್ಯಕ್ತಿಗಳಿಂದ ಅಡಕೆಗಳ ಆರಿಸಬೇಕು. ಇಲ್ಲವಾದರೆ ರೈತರ ಮುಂದೆಯೇ ಕಳಪೆ ಮತ್ತು ಉತ್ತಮ ಗುಣಮಟ್ಟದ ಅಡಕೆ ಬೇರ್ಪಡಿಸಲಿ ಎಂದು ಹೇಳಿದರು.ಇದಕ್ಕೆ ಒಪ್ಪದ ಹಾಲಿ ಅಧ್ಯಕ್ಷ ಆರ್.ಎಂ. ರವಿ ಅವರು, ಸಂಸ್ಥೆ ಸಿಬ್ಬಂದಿಯಿಂದಲೇ ಅಡಕೆ ಆರಿಸುವ ಕೆಲಸ ಮಾಡಿಸುತ್ತೇವೆ ಎಂದು ಒತ್ತಿ ಹೇಳೀದರು. ಆಗ ಇಬ್ಬರ ಮಧ್ಯೆ ವಾಗ್ವಾದ ಉಂಟಾಗಿಯಿತು. ಅಲ್ಲದೆ, ಕಚೇರಿಯ ಮುಂಭಾಗವೇ ಒಬ್ಬರಿಗೊಬ್ಬರು ತಳ್ಳಾಡಿಕೊಂಡರು. ಪರಿಸ್ಥಿತಿ ವಿಕೋಪಕ್ಕೆ ತಲುಪುತ್ತಿದ್ದ ಕಾರಣ ಎಚ್ಚೆತ್ತ ಪೊಲೀಸ್ ಸಿಬ್ಬಂದಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.
ತುಮ್ಕೋಸ್ ಕಚೇರಿ ಮುಂದೆ ಜಮಾವಣೆಗೊಂಡಿದ್ದ ನೂರಾರು ಸದಸ್ಯರು ಅಧ್ಯಕ್ಷರಿಗೆ ಮತ್ತು ಕೆಲ ನಿರ್ದೇಶಕರಿಗೆ ಧಿಕ್ಕಾರಗಳನ್ನು ಕೂಗಿ, ಪ್ರತಿಭಟನೆಯನ್ನು ಮುಂದುವರಿಸಿದರು.- - - -18ಕೆಸಿಎನ್‌ಜಿ1:
ಚನ್ನಗಿರಿ ತುಮ್ಕೋಸ್ ಕಚೇರಿ ಮುಂಭಾಗ ಸಂಸ್ಥೆಯ ಹಾಲಿ ಮತ್ತು ಮಾಜಿ ಅಧ್ಯಕ್ಷರ ನಡುವೆ ತಳ್ಳಾಟ, ವಾಕ್ಸಮರ ನಡೆಯಿತು.-18ಕೆಸಿಎನ್ಜಿ2: ತುಮ್ಕೋಸ್ ಕಚೇರಿ ಮುಂದೆ ಅಡಕೆ ಬೆಳೆಗಾರರು ಪ್ರತಿಭಟನೆ ನಡೆಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))