ಸಾರಾಂಶ
ಮುದ್ದೇಬಿಹಾಳ: ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿಗಳ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ನಿರ್ಬಂಧ ಹೇರಿರುವ ಸರ್ಕಾರದ ತಿರ್ಮಾನವನ್ನು ಖಂಡಿಸುವುದಾಗಿ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹೇಳಿದರು.
ಮುದ್ದೇಬಿಹಾಳ: ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿಗಳ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ನಿರ್ಬಂಧ ಹೇರಿರುವ ಸರ್ಕಾರದ ತಿರ್ಮಾನವನ್ನು ಖಂಡಿಸುವುದಾಗಿ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹೇಳಿದರು.
ತಾಲೂಕಿನ ಬಸರಕೋಡ ಗ್ರಾಮದಲ್ಲಿ ವಿಜಯಪುರ ಜಿಲ್ಲೆಗೆ ಕನ್ಹೇರಿ ಶ್ರೀಗಳಿಗೆ ನಿರ್ಬಂಧ ಹೇರಿರುವ ಕ್ರಮ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ರಸ್ತೆ ತಡೆ ನಡೆಸಿ ಮತ್ತು ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕನ್ಹೇರಿ ಶ್ರೀಗಳನ್ನು ವಿಜಯಪುರಕ್ಕೆ ಬರದಂತೆ ನಿರ್ಬಂಧ ಹೇರಿರುವುದು ಹಿಂದೂ ಸಮಾಜಕ್ಕೆ ಅಪಮಾನ ಮಾಡಿದಂತಾಗಿದೆ. ಹಿಂದುತ್ವವಾದಿ, ರೈತರ, ಬಡವರ ಪರ ಚಿಂತನೆಯುಳ್ಳ ಸ್ವಾಮೀಜಿಗಳಿಗೆ ರಕ್ಷಣೆ ಕೊಡಲು ಸರ್ಕಾರಕ್ಕೆ ತಾಕತ್ತು ಇಲ್ಲದಿದ್ದಾಗ ರಾಜ್ಯದ ಜನರನ್ನು ಹೇಗೆ ರಕ್ಷಣೆ ಮಾಡುತ್ತಿರಿ?. ಮತಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರೀಯಗೊಂಡಿದೆ. ಹಿಂದೂ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಶಾಂತಿಯುತ ಹಾಗೂ ಕಾನೂನಾತ್ಮಕ ಹೋರಾಟ ನಡೆಸುವ ಮೂಲಕ ಶ್ರೀಗಳಿಗೆ ಬೆಂಬಲವಾಗಿ ನಿಲ್ಲಬೇಕಿದೆ. ಕೂಡಲೇ ಸರ್ಕಾರ ಹೇರಿರುವ ನಿರ್ಬಂಧವನ್ನು ಹಿಂಪಡೆದು ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಂದು ಎಚ್ಚರಿಸಿದರು.ಈ ವೇಳೆ ಮುಖಂಡಾದ ಕೇ.ವೈ.ಬಿರಾದಾರ, ಗುರುನಾಥ ಬಿರಾದಾರ, ರಾಜು ಮೇಟಿ, ಬಾಬು ಕೋಣ್ಣೂರ, ನಾಗರಾಜ ಕಮತರ, ಬಸವರಾಜ ಮಂಕಣಿ, ಮಂಜುನಾತಗೌಡ ಪಾಟೀಲ, ಬಸವರಾಜ ಚಿತ್ರಗಿ, ಗುರಪ್ಪ ಪತ್ತಾರ, ಕಾಳಪ್ಪ ಬಡಿಗೇರ, ಚಂದಪ್ಪ ಚಲವಾದಿ, ಮಲ್ಲಪ್ಪ ಮಾದರ, ಯಂಕಪ್ಪ ಬಂಡಿವಡ್ಡರ, ಸಂಗಯ್ಯ ಒಡಿಯರ್, ಅಪ್ಪು ವನಿಕ್ಯಾಳ, ಮಂಜುನಾಥ ಚಲವಾದಿ ಸೇರಿದಂತೆ ಹಲವರು ಇದ್ದರು.