ಸಾರಾಂಶ
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಹಾಗೂ ಎಂಎಸ್ಪಿ ಕಾನೂನನ್ನು ಜಾರಿಗೆ ತರಬೇಕು ಮತ್ತು ಕಬ್ಬಿನ ಪ್ರತಿ ಟನ್‌ಗೆ ಇರುವ ೧೫೦ ರುಪಾಯಿ ಬಾಕಿ ಹಣವನ್ನು ತಕ್ಷಣ ಕೋಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದಿಂದ ಸರ್ಕಾರದ ವಿರುಧ್ದ ಘೋಷಣೆಗಳನ್ನು ಕೂಗುತ್ತಾ ಗಣರಾಜ್ಯೋತ್ಸವ ದಿನಾಚರಣೆ ನಡೆಯುತ್ತಿದ್ದ ಜಿಲ್ಲಾ ಕ್ರೀಡಾಂಗಣಕ್ಕೆ ನುಗ್ಗಲು ಪ್ರಯತ್ನಿಸಿದ ರೈತರನ್ನು ಪೊಲೀಸರು ಬಂಧಿಸಿದರು.
ಎಂಎಸ್ಪಿ ಕಾನೂನುನ್ನು ಜಾರಿಗೆ ತರಲು ಒತ್ತಾಯ । ಗಣರಾಜ್ಯೋತ್ಸವ ನಡೆಯುತ್ತಿದ್ದ ಜಿಲ್ಲಾ ಕ್ರೀಡಾಂಗಣಕ್ಕೆ ನುಗ್ಗಲು ಹೋದ ವೇಳೆ ಬಂಧನ
ಕನ್ನಡಪ್ರಭ ವಾರ್ತೆ ಚಾಮರಾಜನಗರರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಹಾಗೂ ಎಂಎಸ್ಪಿ ಕಾನೂನನ್ನು ಜಾರಿಗೆ ತರಬೇಕು ಮತ್ತು ಕಬ್ಬಿನ ಪ್ರತಿ ಟನ್‌ಗೆ ಇರುವ ೧೫೦ ರುಪಾಯಿ ಬಾಕಿ ಹಣವನ್ನು ತಕ್ಷಣ ಕೋಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದಿಂದ ಸರ್ಕಾರದ ವಿರುಧ್ದ ಘೋಷಣೆಗಳನ್ನು ಕೂಗುತ್ತಾ ಗಣರಾಜ್ಯೋತ್ಸವ ದಿನಾಚರಣೆ ನಡೆಯುತ್ತಿದ್ದ ಜಿಲ್ಲಾ ಕ್ರೀಡಾಂಗಣಕ್ಕೆ ನುಗ್ಗಲು ಪ್ರಯತ್ನಿಸಿದ ರೈತರನ್ನು ಪೊಲೀಸರು ಬಂಧಿಸಿದರು.ಮೊದಲು ನಗರದ ನಂದಿ ಭವನದ ಮುಂದೆ ಜಮಾಯಿಸಿದ್ದ ಪ್ರತಿಭಟನಾಕಾರನ್ನು ಅಡಿಷನಲ್ ಎಸ್ಪಿ ಉದೇಶ್, ಮನವೊಲಿಸಿ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ನಡೆಯುತ್ತಿದ್ದು, ಮುಗಿದ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡುವುದಾಗಿ ಹೇಳಿದ್ದರು.
ಈ ವೇಳೆ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಹಾಗೂ ಎಂಎಸ್ಪಿ ಕಾನೂನನ್ನು ಜಾರಿಗೆ ತರಬೇಕು ಮತ್ತು ಕಬ್ಬಿನ ಬಾಕಿ ೧೫೦ ರುಪಾಯಿ ತಕ್ಷಣ ಕೋಡಿಸಬೇಕು ಆಗ್ರಹಿಸಿದರು. ಸದರಿ ವರ್ಷದ ಪ್ರತಿ ಟನ್ ಕಬ್ಬಿಗೆ ೪೦೦೦ ರು. ಗಳನ್ನು ನಿಗದಿ ಮಾಡಬೇಕು ಹಾಗೂ ಯತನ ಉತ್ಪಾದ ನೆಯನ್ನು ರಾಜ್ಯದಲ್ಲಿ ಜಾಸ್ತಿ ಮಾಡಬೇಕು ರೈತರ ಸ್ವತಃ ಉತ್ಪಾದನೆ ಮಾಡಿ ಕಂಪನಿಗಳಿಗೆ ಮಾರಾಟ ಮಾಡುವ ಯೋಜನೆ ರೂಪಿಸಬೇಕು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.ನಂತರ ಪೊಲೀಸ್ ಬಂದೋ ಬಸ್ತಿನಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ಕರೆದೊಯ್ಯಲಾಯಿತು, ಆದರೆ ಕ್ರೀಡಾಂಗಣಕ್ಕೆ ಹೋದ ತಕ್ಷಣ ಸರ್ಕಾರದ ವಿರುಧ್ದ ಹಾಗೂ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಲು ಮುಂದಾದಾಗ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.ಪ್ರತಿಭಟನೆಯಲ್ಲಿ ಹಾಲಿನ ನಾಗರಾಜು, ಮಹದೇವಸ್ವಾಮಿ, ಹರ್ಷ, ಕುಮಾರ್, ನಂದೀಶ್, ಮಂಜುನಾಥ್, ಮಹೇಶ್, ಪ್ರವೀಣ್ ಕುಮರ್, ಸಿದ್ದಪ್ಪ, ಮಹೇಂದ್ರ, ರಾಜೇಂದ್ರ, ಶಿವಸ್ವಾಮಿ, ಸಿದ್ದರಾಜು ಮತ್ತಿತರರು ಭಾಗವಹಿಸಿದ್ದರು.