ಸಾರಾಂಶ
ಬಾದಾಮಿ: ತಾಲೂಕು ಮಟ್ಟದ ಮಹಾಯೋಗಿ ವೇಮನರ 612ನೇ ಜಯಂತ್ಯುತ್ಸವ ಹಾಗೂ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಅಡಿಗಲ್ಲು ಸಮಾರಂಭ ಭಾನುವಾರ ಬೆಳಗ್ಗೆ 10.30ಕ್ಕೆ ತಾಲೂಕಿನ ಕಗಲಗೊಂಬ ಗ್ರಾಮದ ಶ್ರೀ ರಾಮಾನಂದ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಮ ವೇಮ ಚಾರಿಟಬಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ.ಪೈಲ್ ಹಾಗೂ ಕಾರ್ಯದರ್ಶಿ ಎಸ್.ಎ.ಭರಮಗೌಡ್ರ ತಿಳಿಸಿದರು. ಶುಕ್ರವಾರ ನಗರದ ಶ್ರೀ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಾದಾಮಿ: ತಾಲೂಕಾಮಟ್ಟದ ಮಹಾಯೋಗಿ ವೇಮನರ 612ನೇ ಜಯಂತ್ಯುತ್ಸವ ಹಾಗೂ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಅಡಿಗಲ್ಲು ಸಮಾರಂಭ ಭಾನುವಾರ ಬೆಳಗ್ಗೆ 10.30ಕ್ಕೆ ತಾಲೂಕಿನ ಕಗಲಗೊಂಬ ಗ್ರಾಮದ ಶ್ರೀ ರಾಮಾನಂದ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಮ ವೇಮ ಚಾರಿಟಬಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ.ಪೈಲ್ ಹಾಗೂ ಕಾರ್ಯದರ್ಶಿ ಎಸ್.ಎ.ಭರಮಗೌಡ್ರ ತಿಳಿಸಿದರು.
ಶುಕ್ರವಾರ ನಗರದ ಶ್ರೀ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಗಲಗೊಂಬದ ಶ್ರೀ ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆ ಹಾಗೂ ಹೇಮ ವೇಮ ಚಾರಿಟಬಲ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಶ್ರೀ ವೇಮನಾನಂದ ಶ್ರೀಗಳು, ಸ್ವರೂಪಾನಂದ ಶ್ರೀಗಳು, ಜಗನ್ನಾಥ ಶ್ರೀಗಳು ಸಾನ್ನಿಧ್ಯ, ಬೀಳಗಿ ಶಾಸಕ ಜೆ.ಟಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಸಾರಿಗೆ ಸಚಿವ ರಾಮಲಿಂಗರಡ್ಡಿ, ಕಾನೂನು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಸಚಿವ ಎಸ್.ಆರ್. ಪಾಟೀಲ, ಶಾಸಕರಾದ ಎಚ್.ವೈ.ಮೇಟಿ, ಭೀಮಸೇನ ಚಿಮ್ಮನಕಟ್ಟಿ, ವಿಪ ಸದಸ್ಯರಾದ ಪಿ.ಎಚ್.ಪೂಜಾರ, ಎಚ್.ಆರ್. ನಿರಾಣಿ, ಸುನೀಲಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ಅಜಯಕುಮಾರ ಸರನಾಯಕ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಎಂ.ಕೆ.ಪಟ್ಟಣಶೆಟ್ಟಿ, ಎಸ್.ಪಿ.ಅಮರನಾಥರಡ್ಡಿ, ರಾಜ್ಯ ರಡ್ಡಿ ಜನಸಂಘದ ನಿರ್ದೇಶಕರಾದ ಎಂ.ಎ.ಕೃಷ್ಣಾರೆಡ್ಡಿ(ಕಿಟ್ಟಿ), ಶೇಖರರಡ್ಡಿ, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಎಸ್.ಆರ್. ಮೆಳ್ಳಿ, ಬಿ.ಟಿ. ಬೆನಕಟ್ಟಿ, ಶಶಿಕಲಾ ಯಡಹಳ್ಳಿ, ಡಿ.ಪಿ. ಅಮಲಝರಿ, ಸವಿತಾ ದಂಡನ್ನವರ ಭಾಗವಹಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಡಿ.ಪಿ. ಅಮಲಝರಿ, ಪದಾಧಿಕಾರಿಗಳಾದ ವಿ.ಎಸ್. ದೇಸಾಯಿ, ಎಸ್.ಕೆ.ಗೌಡರ, ಎಸ್.ಕೆ. ಪಾಟೀಲ, ಸಿ.ಎಸ್. ಹೊಸಗೌಡರ, ಎಸ್.ಎಂ. ಪಾಟೀಲ, ಸಿ.ವಿ. ಚನವೀರಗೌಡರ, ಬಿ.ವಿ.ಮೇಟಿ, ಕೃಷ್ಣಾ ಪಾಟೀಲ, ಬಿ.ಜಿ. ಸಂಗನಗೌಡ್ರ ಉಪಸ್ಥಿತರಿದ್ದರು.