ಸಾರಾಂಶ
ಪಿರಮಿಡ್ ಧ್ಯಾನ ಸರ್ವರಿಗೂ ಲಭಿಸಲಿ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಮೂರನೇ ಧ್ಯಾನ ಮಂದಿರವಾಗಿದ್ದು, ನಾದ ಧ್ಯಾನ ಯಜ್ಞ ವಿಶೇಷವಾಗಿರುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಧ್ಯಾನದ ಉಪಯೋಗ ಪಡೆದುಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ತಾಲೂಕಿನ ಜನತೆಯ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆಗಸ್ಟ್ 15ರಂದು ಬ್ರಹ್ಮಶ್ರೀ ಪತ್ರೀಜಿ ರವರ ಮಾರ್ಗದರ್ಶನದೊಂದಿಗೆ ದೊಡ್ಡಬಳ್ಳಾಪುರ ನಾದ ಧ್ಯಾನ ಯಜ್ಞ 3ರ ಅಡಿಯಲ್ಲಿ ಶ್ರೀ ನಾರಾಯಣ ಪಿರಮಿಡ್ ಧ್ಯಾನ ಮಂದಿರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಮಂದಿರದ ಮುಖ್ಯಸ್ಥ ಬಿ.ಎನ್. ಅಶ್ವತ್ಥ್ ನಾರಾಯಣ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಸಾಮಾನ್ಯ ಜನತೆ ಹಲವಾರು ತೊಂದರೆಗಳಿಂದ ಬಳಲುತ್ತಿದ್ದಾರೆ. ಸರ್ವ ಸಮಸ್ಯೆಗೂ ರಾಮಬಾಣದಂತೆ ಕೆಲಸ ಮಾಡುವ ಪಿರಮಿಡ್ ಧ್ಯಾನದ ತರಬೇತಿಯನ್ನು ಉಚಿತವಾಗಿ ನಮ್ಮ ಧ್ಯಾನ ಮಂದಿರದಲ್ಲಿ ಆಯೋಜಿಸಲಾಗಿದೆ. ನಾದ, ಧ್ಯಾನ, ಯಜ್ಞ 3ರ ಅಡಿಯಲ್ಲಿ ಆಸಕ್ತರಿಗೆ ಉಚಿತವಾಗಿ ಪಿರಮಿಡ್ ಧ್ಯಾನವನ್ನು ಮುಖ್ಯ ತರಬೇತುದಾರ ಅಯ್ಯಪ್ಪ ಪಿಂಡಿಯವರ ನೇತೃತ್ವದಲ್ಲಿ ಆಯೋಜಿಸಲಾಗಿದೆ ಎಂದರು.
ಮುಖ್ಯ ತರಬೇತುದಾರ ಅಯ್ಯಪ್ಪ ಪಿಂಡಿ ಮಾತನಾಡಿ, ಪಿರಮಿಡ್ ಧ್ಯಾನ ಸರ್ವರಿಗೂ ಲಭಿಸಲಿ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಮೂರನೇ ಧ್ಯಾನ ಮಂದಿರವಾಗಿದ್ದು, ನಾದ ಧ್ಯಾನ ಯಜ್ಞ ವಿಶೇಷವಾಗಿರುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಧ್ಯಾನದ ಉಪಯೋಗ ಪಡೆದುಕೊಳ್ಳಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ರಂಗರಾಜು, ಎಲ್. ಕೆ.ನಂದಕುಮಾರ್,ಧ್ಯಾನ ಮಂದಿರದ ಸಿಬ್ಬಂದಿ ಉಮೇಶಯ್ಯ, ಆರ್ ಶ್ರೀನಿವಾಸ್, ಲಿಂಗರಾಜು, ಅರುಣ್ ಕುಮಾರ್, ಎಚ್. ಬಿ.ದೊಡ್ಡರಂಗಪ್ಪ, ಎ.ಚಿತ್ರಶ್ರೀ, ಎನ್.ಸವಿತಾ ಸೇರಿ ಹಲವರು ಉಪಸ್ಥಿತರಿದ್ದರು.