ಸಾರಾಂಶ
1824ರಲ್ಲಿ ಬ್ರಿಟಿಷರ ವಿರುದ್ಧ ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ವೀರಾವೇಶದಿಂದ ಹೋರಾಡಿದ ದಿಟ್ಟ ಮಹಿಳೆ. ರಾಣಿ ಚೆನ್ನಮ್ಮನ ಧೈರ್ಯ, ಸಾಹಸ ಎಲ್ಲರಿಗೂ ಮಾದರಿ.
ಗದಗ: ವೀರರಾಣಿ ಕಿತ್ತೂರು ಚೆನ್ನಮ್ಮ ಸ್ವಾಭಿಮಾನದ ಪ್ರತೀಕ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರೊಂದಿಗೆ ಧೈರ್ಯ, ಶೌರ್ಯದಿಂದ ಹೋರಾಡಿದ ವೀರಮಾತೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ನಗರದ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಿಟಿಷರು ಪ್ರತಿವರ್ಷ ಇಂತಿಷ್ಟು ಕಪ್ಪ(ಕರ) ನೀಡಬೇಕೆಂದು ವಿವಿಧ ರಾಜರುಗಳಿಗೆ ಕರಾರು ಹಾಕಿದ್ದರು. ಭಾರತದಲ್ಲಿಯ ರಾಜ್ಯಗಳ ರಾಜರಿಂದ ಬ್ರಿಟಿಷರು ಕಪ್ಪವನ್ನು ವಸೂಲು ಮಾಡುತ್ತಿದ್ದರು. ಆದರೆ ವೀರರಾಣಿ ಕಿತ್ತೂರು ಚೆನ್ನಮ್ಮ ಮಾತ್ರ ಬ್ರಿಟಿಷರಿಗೆ ನಿಮಗೇಕೆ ಕೊಡಬೇಕು ಕಪ್ಪ. ನೀವೇನು ಒಡಹುಟ್ಟಿದವರಾ? ಅಣ್ಣತಮ್ಮಂದಿರಾ? ನೀವೇನು ಉತ್ತಿ ಬಿತ್ತಿದ್ದೀರಾ ಎಂದು ಬ್ರಿಟಿಷರಿಗೆ ಎಚ್ಚರಿಕೆ ನೀಡಿದ್ದರು. 1824ರಲ್ಲಿ ಬ್ರಿಟಿಷರ ವಿರುದ್ಧ ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ವೀರಾವೇಶದಿಂದ ಹೋರಾಡಿದ ದಿಟ್ಟ ಮಹಿಳೆ. ರಾಣಿ ಚೆನ್ನಮ್ಮನ ಧೈರ್ಯ, ಸಾಹಸ ಎಲ್ಲರಿಗೂ ಮಾದರಿ ಎಂದರು.ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ವೀರರಾಣಿ ಕಿತ್ತೂರು ಚೆನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ವೀರಮಾತೆ. ದೇಶಭಕ್ತಿಯ ಸಂಕೇತ. ಭವ್ಯ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಪಸರಿಸಿದ ಕೀರ್ತಿ ವೀರರಾಣಿ ಚೆನ್ನಮ್ಮ ಅವರಿಗೆ ಸಲ್ಲುತ್ತದೆ ಎಂದರು.ಗಣ್ಯರಾದ ವಿಜಯಕುಮಾರ ಗಡ್ಡಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಸರ್ಕಾರದಿಂದ ಆಚರಿಸುತ್ತಿರುವುದು ಸಂತಸದ ವಿಷಯ. ಕನ್ನಡ ನಾಡಿನ ಜನರು ಹೆಮ್ಮೆ ಪಡುವ ವಿಷಯವಾಗಿದೆ. ಕಿತ್ತೂರು ರಾಣಿ ಚೆನ್ನಮ್ಮನವರು ಭಾರತದ ಸ್ವಾತಂತ್ರ್ಯದ ಪ್ರಪ್ರಥಮ ಮಹಿಳಾ ಹೋರಾಟಗಾರ್ತಿ. ಇವರ ಶೌರ್ಯ, ತ್ಯಾಗ ಎಲ್ಲ ಮಹಿಳೆಯರಿಗೂ ಪ್ರೇರಣೆ ಎಂದರು.
ಪ್ರೊ. ಸೋಮಶೇಖರ ಕೆರಿಮನಿ ಉಪನ್ಯಾಸ ನೀಡಿ, ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ಹೋರಾಡಿದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ ಮಹಿಳೆ ಚೆನ್ನಮ್ಮ. ಇದು ನಮಗೆಲ್ಲ ಅಭಿಮಾನದ ಸಂಗತಿಯಾಗಿದೆ. ಭವ್ಯ ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯದ ಹೊಸ ಕಲ್ಪನೆ ನೀಡಿದ ಪುಣ್ಯಭೂಮಿಯೇ ಕಿತ್ತೂರು ಸಂಸ್ಥಾನ ಎಂದರು.ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಮಾತನಾಡಿದರು. ಜಾನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ ಹಾಗೂ ಬಸವರಾಜ ಹಡಗಲಿ ತಂಡದವರು ವೀರರಾಣಿ ಕಿತ್ತೂರ ಚನ್ನಮ್ಮ ಕುರಿತು ಜನಪದ ಗೀತೆ ಪ್ರಸ್ತುತಪಡಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಅಧಿಕಾರಿಗಳಾದ ಶ್ರೀನಿವಾಸಮೂರ್ತಿ ಕುಲಕರ್ಣಿ, ಆರ್.ಎಸ್. ಬುರುಡಿ, ಡಾ. ಬಸವರಾಜ ಬಳ್ಳಾರಿ, ಸಮಾಜದ ಗಣ್ಯರಾದ ಈರಣ್ಣ ಕರಿಬಿಷ್ಟಿ, ಎಫ್. ಮರಿಗೌಡ್ರ, ಶರಣಪ್ಪ ಗುಡಿಮನಿ, ಬಸಣ್ಣಪ್ಪ ಚಿಂಚಲಿ, ಅಯ್ಯಪ್ಪ ಅಂಗಡಿ, ಅಜ್ಜಣ್ಣ ಹಿರೇಮನಿ ಪಾಟೀಲ, ಶಿವು ಕವಲೂರು, ಮಹಾಬಲೇಶ ಶೆಟ್ಟರ, ರವಿ ಪಾಟೀಲ, ಮುರುಗೇಶ ಹಡಗಲಿ, ಎಸ್.ಎಸ್. ಹುರಕಡ್ಲಿ, ಪ್ರಶಾಂತ ನರೇಗಲ್ಲ, ಪರಪ್ಪ ಕಮತರ, ಚಿನ್ನೂರ, ಚನ್ನವೀರಪ್ಪ ಮಳಗಿ, ಮಹೇಶ ಕರಿಬಿಷ್ಠಿ, ವಿರುಪಾಕ್ಷಪ್ಪ ಮಟ್ಟಿ, ಸ್ವಾತಿ ಅಕ್ಕಿ, ಈರಮ್ಮ ತಾಳಿಕೋಟಿ ಜಯಶ್ರೀ ಉಗಲಾಟದ, ಜಯಾಶ್ರೀ ಅಣ್ಣಿಗೇರಿ, ವೀರಣ್ಣ ಮಾಳವಾಡ, ಮರಿಗೌಡ್ರ, ಸಿ.ಕೆ. ಮಾಳಶೆಟ್ಟಿ, ರಾಜು ಬಗಾಡೆ ಇತರರು ಇದ್ದರು. ಪ್ರೊ. ಬಾಹುಬಲಿ ಜೈನರ್ ಕಾರ್ಯಕ್ರಮ ನಿರ್ವಹಿಸಿದರು.;Resize=(128,128))
;Resize=(128,128))
;Resize=(128,128))