ಅರಬೈಲ್‌ ಬಳಿ ಕಾಳಿಂಗ ಸರ್ಪ ಪತ್ತೆ

| Published : Oct 05 2024, 01:45 AM IST

ಸಾರಾಂಶ

ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕೆಲಸಗಾರರಿಗೆ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಅವರು ಸ್ನೇಕ್ ಸೂರಜ್‌ನ ನೆರವು ಪಡೆದು, ಕಾಳಿಂಗ ಸರ್ಪವನ್ನು ರಕ್ಷಿಸಿದ್ದಾರೆ.

ಯಲ್ಲಾಪುರ: ತಾಲೂಕಿನ ಅರಬೈಲ್ ಸಮೀಪದ ಮೂಲೆಪಾಲಿನ ಗಿರೀಶ ಭಟ್ಟರ ತೋಟದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ೧೦ ಅಡಿ ಉದ್ದದ ಕಾಳಿಂಗ ಸರ್ಪವನ್ನು ಸ್ನೇಕ್ ಸೂರಜ್ ಸೆರೆಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದರು. ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕೆಲಸಗಾರರಿಗೆ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಅವರು ಸ್ನೇಕ್ ಸೂರಜ್‌ನ ನೆರವು ಪಡೆದು, ಕಾಳಿಂಗ ಸರ್ಪವನ್ನು ರಕ್ಷಿಸಿದ್ದಾರೆ. ವಿಶೇಷತೆ ಎಂದರೆ ಇದು ಸೂರಜ್ ಅವರ ೧೫ನೇ ಕಾಳಿಂಗ ಸರ್ಪದ ಯಶಸ್ವಿ ರಕ್ಷಣಾ ಕಾರ್ಯಾಚರಣೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಹರೀಶ ಮಡಿವಾಳ, ಚಂದ್ರಕಾಂತ ನಾಯ್ಕ, ಗೋಪಾಲ ಗೌಡ, ಸೋಮಶೇಖರ್ ನಾಯ್ಕ ಸಹಕರಿಸಿದ್ದರು.ಬೈಕ್‌- ಕಾರು ಡಿಕ್ಕಿ: ಸವಾರ ಸಾವು

ಕುಮಟಾ: ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಪಟ್ಟಣದ ವಿವೇಕನಗರ ಬಳಿ ಹೆಗಡೆ ರಸ್ತೆಯಲ್ಲಿ ನಡೆದಿದೆ.ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಫೀಲ್ಡ್ ಅಸಿಸ್ಟಂಟ್ ಕೆಲಸ ಮಾಡುತ್ತಿದ್ದ ವಿವೇಕ ನಗರದ ವಿಷ್ಣು ದೇವು ಮುಕ್ರಿ(೫೨) ಮೃತಪಟ್ಟ ವ್ಯಕ್ತಿ.ಗುರುವಾರ ರಾತ್ರಿ ವಿಷ್ಣು ಮುಕ್ರಿ ಬೈಕ್‌ನಲ್ಲಿ ಸಾಗುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾರು ಬೈಕ್‌ಗೆ ಗುದ್ದಿದೆ. ವಿಷ್ಣು ಮುಕ್ರಿ ಕಾಲು ಹಾಗೂ ತಲೆಗೆ ತೀವ್ರತರದ ಗಾಯವಾಗಿದ್ದು, ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿತ್ತು. ಗಾಯಾಳು ಜೀವರಕ್ಷಣೆ ಅಸಾಧ್ಯ ಎಂಬ ಕಾರಣಕ್ಕೆ ಮರಳಿ ಕುಮಟಾಕ್ಕೆ ತಂದು, ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ನೀಡಲಾಗುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾರೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.