ಸಾರಾಂಶ
ಗಜೇಂದ್ರಗಡ: ಪಾಲಕರು ಮಕ್ಕಳ ಬಗ್ಗೆ ಮೌಲ್ಯಮಾಪನ ಮಾಡುವುದರ ಜತೆಗೆ ಅಭಿವೃದ್ಧಿ ಮತ್ತು ಬದಲಾವಣೆಗೆ ಶಿಕ್ಷಣ ಅವಶ್ಯ ಎಂಬುದು ಅರಿತುಕೊಳ್ಳುವ ಜರೂರತ್ತಿದೆ ಎಂದು ವಿಜಯಪುರ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ. ಐ.ಜೆ. ಮ್ಯಾಗೇರಿ ಹೇಳಿದರು.
ಸ್ವಾತಂತ್ರ‍್ಯ ದಿನಾಚರಣೆ, ಈದ್ ಮಿಲಾದ್ ಹಬ್ಬದ ಪ್ರಯುಕ್ತ ಅಂಜುಮನ್ ಇಸ್ಲಾಂ ಕಮಿಟಿ ಹಾಗೂ ಡಾ. ಅಬ್ದುಲ್ ಕಲಾಂ ಕ್ರಿಕೆಟ್ ಪ್ರಿಮಿಯರ್ ಲೀಗ್ ವತಿಯಿಂದ ಪಟ್ಟಣದ ಶಾದಿ ಮಹಲ್ ನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಕ್ರಿಕೆಟ್ ಬಹುಮಾನ, ಟ್ರೋಫಿ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.ಮೌಲ್ಯಯುತ ಶಿಕ್ಷಣವನ್ನು ನಾವು ನಮ್ಮ ಮಕ್ಕಳಿಗೆ ಕೊಡುಸುತ್ತಿದ್ದೇವಾ ಎಂಬುದನ್ನು ಮನವರಿಕೆ ಮಾಡಿಕೊಳ್ಳುವುದರ ಜತೆಗೆ ಮಕ್ಕಳ ಎಲ್ಲಿಗೆ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಮೌಲ್ಯಮಾಪನ ಏಕೆ ಮಾಡುತ್ತಿಲ್ಲ. ಶಿಕ್ಷಣ ಹಾಗೂ ಉದ್ಯೋಗದ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಬಗ್ಗೆ ಪಾಲಕರು, ಮುಖಂಡರು ತಮ್ಮ ಜವಾಬ್ದಾರಿ ಬಗ್ಗೆ ಚರ್ಚಿಸಬೇಕಿದೆ ಎಂದರು.
ರೋಣ ಸಿಪಿಐ ಎಸ್.ಎಸ್. ಬೀಳಗಿ ಮಾತನಾಡಿ, ಪಟ್ಟಣದಲ್ಲಿ ನಡೆದ ೨೧ ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಗೊಳಿಸಿ ಇಂದು ಪ್ರಶಸ್ತಿ ಪ್ರಧಾನ ಜತೆಗೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮೂಲಕ ಕ್ರೀಡೆ, ಶಿಕ್ಷಣಕ್ಕೆ ಪೋತ್ಸಾಹ ನೀಡುತ್ತಿರುವ ಸಂಘಟಿಕರ ಕಾರ್ಯ ಅನುಕರಣೀಯ ಎಂದರು.ಖಿದ್ಮಾ ಫೌಂಡೇಶನ್‌ನ ಅಮೀರ ಬನ್ನೂರಿ, ಪುರಸಭೆ ಸದಸ್ಯರಾದ ಮುರ್ತುಜಾ ಡಾಲಾಯತ್, ರಾಜು ಸಾಂಗ್ಲೀಕರ ಹಾಗೂ ವಕೀಲರಾದ ಎಂ.ಎಚ್. ಕೋಲಕಾರ, ದಾವಲ ತಾಳಿಕೋಟಿ, ಎಂ.ಬಿ. ಕಂದಗಲ್ ಮತ್ತು ಎ.ಡಿ. ಕೋಲಕಾರ ಮಾತನಾಡಿದರು.
ಕ್ರಿಕೆಟ್ ಟೂರ್ನಾಮೆಂಟ್‌ನಲ್ಲಿ ಗೆಲುವು ಸಾಧಿಸಿದ ತಂಡಗಳಿಗೆ, ಉತ್ತಮ ಆಟಗಾರರಿಗೆ ಹಾಗೂ ನಿರ್ಣಾಯಕರಾಗಿದ್ದ ರವಿ ಮಾಳೊತ್ತರ, ರವಿ ಜರತಾರಿ, ರಾಕೇಶ ಮಾರನಬಸರಿ, ರಾಘು ಕೊಣ್ಣರುಕರ, ಕಾಶಿ ಗುಗಲೋತ್ತರ ಸೇರಿದಂತೆ ೨೧ಕ್ಕೂ ಅಧಿಕ ಗಣ್ಯರಿಗೆ ಸನ್ಮಾನಿಸಲಾಯಿತು.ಈ ವೇಳೆ ಟಕ್ಕೇದ ದರ್ಗಾದ ಹಜರತ್ ನಿಜಾಮುದ್ದಿನಷಾ ಆಶ್ರಫಿ, ಅಂಜುಮನ ಇಸ್ಲಾಂ ಕಮಿಟಿ ಚೇರಮನ್ ಹಸನ ತಟಗಾರ, ಡಾ. ಅಬ್ದುಲ್ ಕಲಾಂ ಟ್ರಸ್ಟ್ನ ಅಧ್ಯಕ್ಷ ರಫೀಕ ತೋರಗಲ್, ಪಿ.ಎಸ್.ಐ ಸೋಮನಗೌಡ ಗೌಡ್ರ, ಎಸ್.ಎಂ. ಆರಗಿದ್ದಿ, ಬಾಷೇಸಾಬ ಕರ್ನಾಚಿ, ನಾಸಿರಲಿ ಸುರಪುರ, ಫಯಾಜ್ ತೋಟದ, ಇಮ್ರಾನ ಅತ್ತಾರ, ಹೈದರ ಹುನಗುಂದ, ಗಫರಸಾಬ್ ಡಾಲಾಯತ್, ಉಸ್ಮಾನ ಮೋಮಿನ್, ನಜೀರ ಸೌದಾಗರ, ಅಲಿ ಮುಧೋಳ, ಯುಸೂಫ್ ದಿಂಡವಾಡ, ಗೈಬು ನಿಶಾನದಾರ, ಶಾರುಖ ಅತ್ತಾರ, ಭಾಷಾ ಮುದಗಲ್, ಸಮೀರ ಅತ್ತಾರ ಸೇರಿ ಇತರರು ಇದ್ದರು.