ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಮೈಕ್ರೋ ಫೈನಾನ್ಸ್ ಹಾವಳಿಗೆ ಅನೇಕ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿವೆ. ಅವರಿಗೆ ಮುಕ್ತಿ ನೀಡುವ ಸಲುವಾಗಿ ರಾಜ್ಯ ಸರ್ಕಾರ ಮಹತ್ವದ ಆದೇಶ ಜಾರಿಗೊಳಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.ನಗರದ ಜಿಲ್ಲಾಧಿಕಾರಿ ನ್ಯಾಯಾಂಗ ಸಭಾಂಗಣದಲ್ಲಿ ಕಿರುಸಾಲ ಹಾಗೂ ಸಣ್ಣ ವ್ಯವಹಾರಗಳ ಅಧ್ಯಾದೇಶ ಜಾರಿ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿ, ಈ ಆಧ್ಯಾದೇಶವು ಜಾರಿಯಾದ ೩೦ ದಿನಗಳ ಒಳಗೆ ಮೈಕ್ರೋ ಫೈನಾನ್ಸ್ ಹಾಗೂ ಲೇವಾದೇವಿ ಸಂಸ್ಥೆಗಳು ಕಡ್ಡಾಯ ನೋಂದಣಿ ಮಾಡಿಕೊಳ್ಳಬೇಕು ಎಂದರು.
ಮನೆ ಜಪ್ತಿ ಮಾಡಿದರೆ ಕ್ರಮನಮ್ಮ ಕೋಲಾರ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಆಸ್ತಿ ಜಪ್ತಿ ಮನೆಗಳ ಜಪ್ತಿ ಸೇರಿದಂತೆ ಮನೆಗಳ ಮೇಲೆ ನೋಟಿಸ್ ಅಂಟಿಸುವುದು ಮುಂತಾದ ಇಂತಹ ಪ್ರಕರಣಗಳು ಕಂಡು ಬಂದಿಲ್ಲ ಒಂದು ವೇಳೆ ಕಂಡುಬಂದರೆ ಅವರ ವಿರುದ್ಧ ಆಧ್ಯಾದೇಶದಂತೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಒಟ್ಟು ೧೭ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನೋಂದಣಿ ಮಾಡಿಕೊಂಡಿದ್ದು ೯೮ ಶಾಖೆಗಳನ್ನು ಹೊಂದಿವೆ ಎಂದರು.
ಅಧ್ಯಾದೇಶ ಕಾಯ್ದೆಯ ಪ್ರಕಾರ ಮಾ.೧೧ರ ಒಳಗೆ ನೋಂದಣಿ ಮಾಡಿಕೊಳ್ಳಬೇಕಾಗಿದೆ. ಈ ಆಧ್ಯಾದೇಶದಂತೆ ಜಿಲ್ಲಾಧಿಕಾರಿಯನ್ನು ನೋಂಂದಣಾಧಿಕಾರಿಯಾಗಿ ಮಾಡಲಾಗಿದೆ. ನೋಂದಣಿ ಪರವಾನಿಗೆ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ ತದನಂತರ ರಿನೀವಲ್ ಮಾಡಿಕೊಳ್ಳಬೇಕು. ಅಧ್ಯಾದೇಶ ಉಲ್ಲಂಘನೆ ಮಾಡಿದ ಪ್ರಕರಣಗಳಿದ್ದಲ್ಲಿ, ಅಂತಹ ಸಂಸ್ಥೆಗಳ ಪರವಾನಿಗೆ ರದ್ದು ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದರು.ಬಡ್ಡಿ ದರ ಸ್ಪಷ್ಟಪಡಿಸಬೇಕುಕಿರುಸಾಲ ನೀಡುವ ಸಂಸ್ಥೆಗಳು ಯಾವುದೇ ಗ್ರಾಹಕರಿಗೆ ಸಾಲ ಕೊಡಬೇಕಾದಲ್ಲಿ, ಬಡ್ಡಿದರವನ್ನು ಸ್ಪಷ್ಟವಾಗಿ ತಿಳಿಸಬೇಕು. ಮರು ಪಾವತಿ ಮಾಡುವಾಗ ತಪ್ಪದೇ ರಸೀದಿ ನೀಡಬೇಕು. ವ್ಯವಹಾರ ಎಲ್ಲವೂ ಕನ್ನಡದಲ್ಲೇ ಕಡ್ಡಾಯವಾಗಿ ಮಾಡಬೇಕು. ನೊಂದಣಿಯಾದ ಸಾಲದ ಅಧಿಕೃತ ಕಚೇರಿ ಜಿಲ್ಲೆಯಲ್ಲಿ ತೆರದಿರಬೇಕು. ನೋಂದಣಿಯಾದ ಸಾಲಗಾರ ಕಂಪನಿ ಎಲ್ಲಾ ವಿವರಗಳನ್ನು ಒಳಗೊಂಡಂತೆ ವರ್ಷಕೊಮ್ಮೆ ಜಿಲ್ಲಾಧಿಕಾರಿ ಕಚೇರಿಗೆ ದಾಖಲೆ ಸಲ್ಲಿಸಬೇಕು. ಸಾಲ ವಸೂಲಾತಿಗಾಗಿ ಬಲವಂತದ ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದರು.
ಪರೀಶೀಲನಾ ಸಮಿತಿ ರಚನೆಅಧ್ಯಾದೇಶದ ಉಲ್ಲಂಘನೆ ಮಾಡಿದರೆ, ೧೦ ವರ್ಷಗಳ ವರೆಗೆ ಜೈಲುವಾಸ ೫ ಲಕ್ಷಗಳ ದಂಡವಿಧಿಸುವ ಅವಕಾಶಗಳಿವೆ ಸಾರ್ವಜನಿಕರಿಗೆ ಕಿರುಕಳ ನೀಡುವ ಪೈನಾನ್ಸ್ ಸಂಸ್ಥೆಗಳ ವಿರುದ್ಧ ಹೆಲ್ಪ್ ಲೈನ್ ಸಂಖ್ಯೆಗೆ ದೂರು ನೀಡಬಹುದಾಗಿದೆ. ಜಿಲ್ಲೆಯಲ್ಲಿ ಈ ಸಂಬಂಧ ಪರೀಶೀಲನಾ ಸಮಿತಿ ರಚಿಸಲಾಗುತ್ತದೆ. ಈ ಸಮಿತಿಯು ಲೇವಾದೇವಿ ಹಾಗೂ ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಮೇಲೆ ನಿಗಾವಹಿಸುತ್ತದೆ ಎಂದರು. ಪ್ರಾಥಮಿಕ ವರದಿ ದಾಖಲು
ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಮಾತನಾಡಿ, ಈ ಕಾಯ್ದೆಯ ಅಡಿಯಲ್ಲಿ ನಮಗೆ ಯಾವುದೇ ದೂರುಗಳು ಬಂದರೆ ಪ್ರಾಥಮಿಕ ವರದಿ ದಾಖಲಿಸಿಕೊಳ್ಳುವ ಅಧಿಕಾರ ಕೊಟ್ಟಿದೆ, ಒಂದು ವೇಳೆ ಗ್ರಾಹಕರು ಬಂದು ದೂರನ್ನು ನೀಡದೆ ಇದ್ದರೆ ಜಿಲ್ಲಾ ಸಮಿತಿಗೆ ಮಾಹಿತಿ ಬಂದರೆ. ಮಾಹಿತಿ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು. ಬೇರೆ ರಾಜ್ಯಗಳಿಂದ ಬಂದು ನಮ್ಮ ಭಾಗದಲ್ಲಿ ಹಣಕಾಸಿನ ವ್ಯವಹಾರ ಮಾಡುತ್ತಿದ್ದರೆ, ಅವರಿಗೆ ಯಾವುದೇ ಆಸ್ಪದ ನೀಡದೆ ಸುಮೊಟೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಹೋಗಿ ದೂರನ್ನು ಸಲ್ಲಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.ಸಹಾಯವಾಣಿ ಬಳಿಸಿಕೆಜಿಎಫ್ ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು ಮಾತನಾಡಿ, ಮೈಕ್ರೋ ಫೈನಾನ್ಸ್ ಸಾಲದ ವಸೂಲಿಗೆ ತಾವು ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಅವರಿಗೆ ಪೊಲೀಸ್ ತನಿಖೆ ಮಾಡಿಸಿ ಯಾವುದೇ ಪ್ರಕರಣಗಳು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಆಯ್ಕೆ ಮಾಡಿಕೊಳ್ಳಬೇಕು. ಯಾವುದೇ ತೊಂದರೆ ಾದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂ.೧೧೨ ಯನ್ನು ಬಳಸಿ ದೂರುಸಲ್ಲಿಸಬಹುದು ಎಂದು ತಿಳಿಸಿದರು.