ಅನಾಮಧೇಯ ಗೋರಿ ತೆರವುಗೊಳಿಸಲು ಆಗ್ರಹ

| Published : Dec 19 2023, 01:45 AM IST

ಅನಾಮಧೇಯ ಗೋರಿ ತೆರವುಗೊಳಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕೊಲ್ಹಾರ ಪಟ್ಟಣದ ವಾರ್ಡ್ ಸಂಖ್ಯೆ 5ರ ಸಮುದಾಯ ಭವನದ ಮುಂಭಾಗ ಅನಾಮಧೇಯ ವ್ಯಕ್ತಿಯ ಗೋರಿ ನಿರ್ಮಿಸಿದ್ದು, ಕೂಡಲೇ ಗೋರಿ ತೆರವುಗೊಳಿಸುವಂತೆ ವಿಶ್ವ ಹಿಂದೂ ಪರಿಷತ್ ಭಜರಂಗದಳದ ನೇತೃತ್ವದಲ್ಲಿ ಪಟ್ಟಣ ಪಂಚಾಯತ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಪಟ್ಟಣದ ವಾರ್ಡ್ ಸಂಖ್ಯೆ 5ರ ಸಮುದಾಯ ಭವನದ ಮುಂಭಾಗ ಅನಾಮಧೇಯ ವ್ಯಕ್ತಿಯ ಗೋರಿ ನಿರ್ಮಿಸಿದ್ದು, ಕೂಡಲೇ ಗೋರಿ ತೆರವುಗೊಳಿಸುವಂತೆ ವಿಶ್ವ ಹಿಂದೂ ಪರಿಷತ್ ಭಜರಂಗದಳದ ನೇತೃತ್ವದಲ್ಲಿ ಪಟ್ಟಣ ಪಂಚಾಯತ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಜಿಲ್ಲಾ ಕಾರ್ಯದರ್ಶಿ ಸುನೀಲ್ ಜಮಖಂಡಿ ಮಾತನಾಡಿ, ಶುಭ ಕಾರ್ಯಗಳನ್ನು ನೆರವೇರಿಸಲು ಸರ್ಕಾರ ಪಟ್ಟಣದ ವಾರ್ಡ್ ಸಂಖ್ಯೆ 5ರಲ್ಲಿ ಸುಮಾರು ವರ್ಷಗಳ ಹಿಂದೆ ಸಮುದಾಯ ಭವನ ನಿರ್ಮಿಸಿದ್ದು, ಸಮುದಾಯ ಭವನದ ಮುಂಭಾಗ ಅನಾಮಧೇಯ ವ್ಯಕ್ತಿಯ ಗೋರಿ ನಿರ್ಮಿಸಲಾಗಿದೆ. ಇದರಿಂದ ಶುಭ ಕಾರ್ಯಗಳು ನಡೆಯಲು ಸಮಸ್ಯೆ ಉಂಟಾಗುತ್ತಿದೆ.

ಸನಾತನ ಸಂಪ್ರದಾಯದ ಶುಭ ಕಾರ್ಯಗಳನ್ನು ನೆರವೇರಿಸುವ ವೇಳೆ ಗೋರಿ ಮುಂದಿರುವುದು ಅಶುಭವೆಂದು ಪರಿಗಣಿಸಲಾಗುತ್ತಿದೆ. ಹೀಗಾಗಿ ಕೂಡಲೇ ಗೋರಿ ತೆರವುಗೊಳಿಸಿ ಶುಭ ಕಾರ್ಯಗಳಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ವಿಶ್ವ ಹಿಂದೂ ಹಿಂದೂ ಪರಿಷತ್, ಭಜರಂಗದಳ ತಾಲೂಕು ಅಧ್ಯಕ್ಷ ಮಹೇಶ್ ತುಂಬರಮಟ್ಟಿ, ಕಾರ್ಯದರ್ಶಿ ವಿಜಯಕುಮಾರ ಕರಣೆ, ಮಲ್ಲಿಕಾರ್ಜುನ ದೇಸಾಯಿ, ರಾಜು ವಡ್ಡರ, ಹಣಮಂತ ಮುಳವಾಡ, ಯಮನಾಜಿ ಕರಣೆ, ಅನೀಲ್ ಬಾಟಿ, ಈರಣ್ಣ ಗಡ್ಡಿ, ಕುಮಾರ ಹಿರೇಮಠ ಸಹಿತ ಅನೇಕರು ಉಪಸ್ಥಿತರಿದ್ದರು.