ಸಾರಾಂಶ
ಅನುಗ್ರಹ ಯೋಜನೆಯಡಿ ಜಿಲ್ಲೆಯ ಕುರಿಗಾರರಿಗೆ ಬರಬೇಕಾದ ಪರಿಹಾರದ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಭೂಮಿಪುತ್ರ ರೈತ ಸಂಘದಿಂದ ಬುಧವಾರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಹಾವೇರಿ: ಅನುಗ್ರಹ ಯೋಜಯಡಿ ಜಿಲ್ಲೆಯ ಕುರಿಗಾರರಿಗೆ ಬರಬೇಕಾದ ಪರಿಹಾರದ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಭೂಮಿಪುತ್ರ ರೈತ ಸಂಘದಿಂದ ಬುಧವಾರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಅನುಗ್ರಹ ಯೋಜನೆಯಡಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಡಿಯಲ್ಲಿ ಡಿಸೆಂಬರ್ ೨೦೨೧ರಿಂದ ಮಾರ್ಚ್ ೨೦೨೩ರ ವರೆಗೆ ಜಿಲ್ಲೆಯಲ್ಲಿ ಒಟ್ಟು ೧೬೮೦೫ ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಅದರಲ್ಲಿ ದೊಡ್ಡ ಕುರಿಗಳು ೧೪೯೫೩ ಮತ್ತು ದೊಡ್ಡ ಮೇಕೆಗಳು ೨೮೭೫ ಸೇರಿದಂತೆ ಒಟ್ಟು ೧೭೮೨೮ ಹಾಗೂ ೩೫೫ ಕುರಿ ಮರಿಗಳು ಮತ್ತು ೧೮೧ ಮೇಕೆ ಮರಿಗಳು ಸೇರಿದಂತೆ ಒಟ್ಟು ೫೩೬ ಮರಿಗಳು ಮೃತಪಟ್ಟಿದ್ದವು. ಅದಕ್ಕೆ ಪರಿಹಾರ ರೂಪದಲ್ಲಿ ಒಟ್ಟು ₹೯.೦೮ ಕೋಟಿ ಬಿಡುಗಡೆ ಆಗಬೇಕಾಗಿತ್ತು. ಆದರೆ, ಈ ವರೆಗೂ ಅನುಗ್ರಹ ಯೋಜನೆಯಡಿ ಬಿಡುಗಡೆ ಆಗಬೇಕಾಗಿದ್ದ ಮೂರು ವರ್ಷಗಳ ಪರಿಹಾರದ ಹಣ ಬಿಡುಗಡೆ ಆಗಿಲ್ಲ. ಕೂಡಲೇ ಸರ್ಕಾರದಿಂದ ಫಲಾನುಭವಿಗಳಿಗೆ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಡಳಿತ ಭವನದ ಮುಂದೆ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಭೂಮಿಪುತ್ರ ರೈತಸಂಘ ಜಿಲ್ಲಾಧ್ಯಕ್ಷ ಫಕ್ಕಿರಗೌಡ ಗಾಜಿಗೌಡರ, ಕಾರ್ಯದರ್ಶಿ ಸಂಗಮೇಶ ನಾಗನೂರ, ಕಾರ್ಯಾಧ್ಯಕ್ಷ ನೀಲಪ್ಪ ಹುಲಗಮ್ಮನವರ ಸೇರಿದಂತೆ ಇತರರು ಇದ್ದರು.
೧೪ಎಚ್‌ವಿಆರ್೩ಭೂಮಿಪುತ್ರ ರೈತ ಸಂಘದಿಂದ ಬುಧವಾರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.