ಸಾರಾಂಶ
ರಾಮಜನ್ಮಭೂಮಿ ಸೇರಿದಂತೆ ಹಿಂದಿನ ಬಹಳ ಹಳೆ ಕೇಸ್‌ಗಳನ್ನು ಪರಿಶೀಲನೆ ಮಾಡಿ ವಾಪಸ್ ಪಡೆಯಬೇಕೆಂದು ನಾನು ಹಿಂದೆಯೇ ಹೇಳಿದ್ದೆ. ಆ ಕೆಲಸ ಸರ್ಕಾರ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರಾಮಜನ್ಮಭೂಮಿ ಸೇರಿದಂತೆ ಹಿಂದಿನ ಬಹಳ ಹಳೆ ಕೇಸ್‌ಗಳನ್ನು ಪರಿಶೀಲನೆ ಮಾಡಿ ವಾಪಸ್ ಪಡೆಯಬೇಕೆಂದು ನಾನು ಹಿಂದೆಯೇ ಹೇಳಿದ್ದೆ. ಆ ಕೆಲಸ ಸರ್ಕಾರ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಆಗ್ರಹಿಸಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳು, ಹೋರಾಟಗಾರರ ಕೇಸ್ ವಾಪಸ್ ಪಡೆದ ಉದಾಹರಣೆಗಳು ಸಾಕಷ್ಟಿವೆ ಎಂದರು.
ಆದಷ್ಟು ಬೇಗ ಅಂಥ ಕೇಸ್ ವಾಪಸ್ ಪಡೆಯಬೇಕು ಎಂದ ಅವರು, ಕಾನೂನಿಗೆ ಅದರದೇ ಆದ ಗೌರವ ಇದೆ. ವಾರಂಟ್ ಆಗಿರುತ್ತವೆ, ಆದರೆ ಇದನ್ನೇ ರಾಜಕಾರಣ ಮಾಡಬಾರದು ಎಂದರು.ನಾನು 10 ತಿಂಗಳ ಮುಖ್ಯಮಂತ್ರಿಯಾಗಿದ್ದೆ. ಬಿಜೆಪಿ ಎಂಟು ವರ್ಷ ಆಡಳಿತ ನಡೆಸಿದರೂ ಇವುಗಳನ್ನು ವಾಪಸ್ ಪಡೆಯಲು ಆಗಲಿಲ್ಲ ಎಂದರು.
ಕೇಂದ್ರ ಸಚಿವರು ಬರೀ ಮಾತನಾಡುತ್ತಾರೆ. ಸಂತ್ರಸ್ತರ ಮನೆಗೆ ಹೋಗುವುದು ಮಾತ್ರ ಆಗುತ್ತದೆ. ಆದರೆ, ಕೇಸ್ ವಾಪಸ್ ಆಗಲ್ಲ ಎಂದು ಪರೋಕ್ಷವಾಗಿ ಜೋಶಿ ವಿರುದ್ಧ ಕಿಡಿಕಾರಿದರು.