ಸಾರಾಂಶ
ಬಾಳೆಹೊನ್ನೂರುವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯ ಇಟ್ಟಿಗೆ ಸೀಗೋಡು ಸಮೀಪದಲ್ಲಿ ಮುಖ್ಯರಸ್ತೆ ವಿಸ್ತರಣೆಗಾಗಿ ಕಳೆದ ಕೆಲ ದಿನಗಳ ಹಿಂದೆ ಗುಂಡಿ ತೆಗೆದಿದ್ದು, ಅದನ್ನು ಇನ್ನೂ ಮುಚ್ಚದೇ ಇರುವುದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಬಿಜಿಎಸ್ ಕಾಲೇಜು ಮುಂಭಾಗದಿಂದ ಶಿವನಗರದವರೆಗೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯ ಇಟ್ಟಿಗೆ ಸೀಗೋಡು ಸಮೀಪದಲ್ಲಿ ಮುಖ್ಯರಸ್ತೆ ವಿಸ್ತರಣೆಗಾಗಿ ಕಳೆದ ಕೆಲ ದಿನಗಳ ಹಿಂದೆ ಗುಂಡಿ ತೆಗೆದಿದ್ದು, ಅದನ್ನು ಇನ್ನೂ ಮುಚ್ಚದೇ ಇರುವುದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಬಾಳೆಹೊನ್ನೂರಿನಿಂದ ಶೃಂಗೇರಿ, ಕೊಪ್ಪ, ಜಯಪುರ ಸಂಪರ್ಕ ಕಲ್ಪಿಸುವ ಇಟ್ಟಿಗೆ ಸೀಗೋಡಿನ ಬಿಜಿಎಸ್ ಕಾಲೇಜು ಮುಂಭಾಗದಿಂದ ಶಿವನಗರದವರೆಗೆ ಪ್ರಾಮ್ಸಿ ಯೋಜನೆಯಡಿ ರಸ್ತೆ ಅಗಲೀಕರಣ ಗೊಳಿಸಿ ಜಲ್ಲಿ ಹಾಕಲು ಇತ್ತೀಚೆಗೆ ಕಾಮಗಾರಿ ನಿರ್ವಹಣೆ ಪಡೆದ ಗುತ್ತಿಗೆದಾರರು ಜೆಸಿಬಿ ಮೂಲಕ ಗುಂಡಿ ತೆಗೆದಿದ್ದು, ಕಳೆದ ಹಲವು ದಿನಗಳಿಂದ ಇದನ್ನು ಮುಚ್ಚದೇ ಹಾಗೆಯೇ ಬಿಟ್ಟಿದ್ದಾರೆ.ಇದೀಗ ಮಳೆ ಆರಂಭಗೊಂಡಿರುವುದರಿಂದ ರಸ್ತೆ ವಿಸ್ತರಣೆಗೆ ಮಣ್ಣು ತೆಗೆದ ಜಾಗದಲ್ಲಿ ಸಂಪೂರ್ಣವಾಗಿ ಮಳೆ ನೀರು ನಿಂತಿದ್ದು, ಕೆಸರುಮಯವಾಗಿದೆ. ಕೆಲವು ಕಡೆಗಳಲ್ಲಿ ಧಾರಾಕಾರ ಮಳೆ ಬಂದಾಗ ಕೆಸರು ಮಿಶ್ರಿತ ಮಣ್ಣು, ಕಲ್ಲು ಸಂಪೂರ್ಣವಾಗಿ ತೊಳೆದುಕೊಂಡು ರಸ್ತೆಗೆ ಬಂದು ನಿಲ್ಲುತ್ತಿದೆ.
ಇದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇದರೊಂದಿಗೆ ಮಣ್ಣು ತೆಗೆದ ಜಾಗದಲ್ಲಿ ಯಾವುದೇ ಎಚ್ಚರಿಕೆ ಸೂಚನಾ ಫಲಕಗಳನ್ನು ಅಳವಡಿಸದೇ ಇದ್ದು, ರಾತ್ರಿ ವೇಳೆ ಯಾವುದಾದರೂ ವಾಹನಗಳು ಬದಿಗೆ ತೆರಳಿದರೆ ಗುಂಡಿಗೆ ಬೀಳುವುದು ಖಚಿತವಾಗಿದೆ.ಯಾವುದೇ ಅನಾಹುತಗಳು ಸಂಭವಿಸುವ ಮೊದಲು ಸಂಬಂಧಿಸಿದ ಗುತ್ತಿಗೆದಾರರು ಮಣ್ಣು ತೆಗೆದ ಗುಂಡಿಗೆ ಜಲ್ಲಿ ಹಾಕಿ ಮುಚ್ಚಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.೧೦ಬಿಹೆಚ್‌ಆರ್ ೨:
ಬಾಳೆಹೊನ್ನೂರು ಸಮೀಪದ ಇಟ್ಟಿಗೆ ಸೀಗೋಡು ಬಳಿ ಮುಖ್ಯರಸ್ತೆ ವಿಸ್ತರಣೆಗೆ ಗುಂಡಿ ತೆಗೆದು ಮುಚ್ಚದಿರುವುದರಿಂದ ಮಳೆಯ ನೀರು ಸಂಗ್ರಹವಾಗಿರುವುದು.