ಸಾರಾಂಶ
ಬೆಂಗಳೂರು: ಸುನ್ನಿ ಸಂಘಟನೆಗಳ ಅಧೀನದಲ್ಲಿ ಖುದ್ದೂಸಾಬ್ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ರೂಹಾನಿ ಇಜ್ತಿಮಾದ ಭಾಗವಾಗಿ ನಡೆದ ಗ್ರ್ಯಾಂಡ್ ಇಫ್ತಾರ್ ಸಂಗಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಜನರು ಭಾಗವಹಿಸಿದರು.
ಇದು ಬೆಂಗಳೂರಿನ ಅತಿ ದೊಡ್ಡ ಇಫ್ತಾರ್ ಸಂಗಮದಲ್ಲೊಂದಾಗಿತ್ತು. ವಿವಿಧ ಮದರಸಾಗಳಿಂದ ತರಲಾದ ಸಿಹಿ ತಿಂಡಿಗಳ ಸಂಗ್ರಹವು ಇಫ್ತಾರನ್ನು ಹೆಚ್ಚು ಆಕರ್ಷಣೆಗೊಳಿಸಿತು. ಇಫ್ತಾರ್‌ನಲ್ಲಿ ಪ್ರಸಿದ್ಧ ವಿದ್ವಾಂಸ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್, ಡಾ.ಅಬ್ದುಲ್ ಹಕೀಮ್ ಅಝ್ಹರಿ, ಎನ್.ಕೆ.ಎಂ ಶಾಫಿ ಸಅದಿ, ಜನಾಬ್ ಉಸ್ಮಾನ್ ಶರೀಪ್ ಸೇರಿದಂತೆ ಪ್ರಮುಖರು ಹಾಜರಿದ್ದರು.ಆತ್ಮೀಯ ಸಂಘಮದ ಭಾಗವಾಗಿ ಸಂಜೆ ನಡೆದ ಫ್ಯಾಮಿಲಿ ಮೀಟ್‌ನಲ್ಲಿ ನೂರಾರು ಕುಟುಂಬಗಳು ಭಾಗವಹಿಸಿದ್ದವು.
ಸೈಯ್ಯದ್ ಇಬ್ರಾಹಿಂ ಬಾಫಾಕಿ ಪ್ರಾರ್ಥನೆಯೊಂದಿಗೆ ಸಭೆಗೆ ಚಾಲನೆ ನೀಡಿದರು. ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಉದ್ಘಾಟಿಸಿದರು. ಫಾಝಿಲ್ ನೂರಾನಿ ಕ್ಯಾಲಿಕಟ್ ವಿಷಯ ಮಂಡಿಸಿದರು. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಎಸ್.ಎಂ.ಎ. ಅಧ್ಯಕ್ಷರಾದ ಹಕೀಮ್ ಆರ್.ಟಿ. ನಗರ, ಎಸ್.ಅಬ್ದುರ್ರಹ್ಮಾನ್ ಹಾಜಿ, ಅನಸ್ ಸಿದ್ದೀಕಿ ಮತ್ತು ಜಾಫರ್ ನೂರಾನಿ ಉಪಸ್ಥಿತರಿದ್ದರು.