ಶ್ರೀರಂಗನಾಥ ದೇಗುಲದ ಹುಂಡಿಯಲ್ಲಿ 37,33,430 ರು. ಸಂಗ್ರಹ

| Published : Jul 05 2025, 12:18 AM IST

ಸಾರಾಂಶ

ಹುಂಡಿಗಳಲ್ಲಿ 12 ಗ್ರಾಂ ಚಿನ್ನ ಹಾಗೂ 120 ಗ್ರಾಂ ಬೆಳ್ಳಿ ದೊರೆತಿದೆ. ಇದಲ್ಲದೆ ವಿವಿಧ ದೇಶಗಳ ಕರೆನ್ಸಿಗಳು ಸಹ ದೊರೆತಿವೆ.

ಶ್ರೀರಂಗಪಟ್ಟಣ: ಪಟ್ಟಣದ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಭಕ್ತರ ಕಾಣಿಕೆ ಹುಂಡಿಗಳ ಎಣಿಕೆ ಕಾರ್ಯ ನಡೆದು 11 ಹುಂಡಿಗಳಿಂದ 37,33,430 ರು. ಸಂಗ್ರಹವಾಯಿತು. ಕಳೆದ ಮಾರ್ಚ್ 20 ರಂದು ಏಣಿಕೆ ನಡೆದಿತ್ತು. ಮೂರು ತಿಂಗಳ ನಂತರ ಎಲ್ಲಾ 11 ಹುಂಡಿಗಳನ್ನು ಸುರಿದು ದೇವಾಲಯ ಸಮಿತಿ ಅಧ್ಯಕ್ಷ ಸೋಮಶೇಖರ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಂ.ಪದ್ಮ ಅವರ ನೇತೃತ್ವದಲ್ಲಿ ಏಣಿಕೆ ಕಾರ್ಯ ನಡೆಯಿತು. ಹುಂಡಿಗಳಲ್ಲಿ 12 ಗ್ರಾಂ ಚಿನ್ನ ಹಾಗೂ 120 ಗ್ರಾಂ ಬೆಳ್ಳಿ ದೊರೆತಿದೆ. ಇದಲ್ಲದೆ ವಿವಿಧ ದೇಶಗಳ ಕರೆನ್ಸಿಗಳು ಸಹ ದೊರೆತಿವೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಹರ್ಷ ಹಾಗೂ ಸಿಬ್ಬಂದಿ ಜೊತೆಗೆ ದೇವಾಲಯದ ಸಿಬ್ಬಂದಿ, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹುಂಡಿ ಎಣಿಕೆಯಲ್ಲಿ ಕಾರ್ಯದಲ್ಲಿ ಭಾಗವಹಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ಹಣವನ್ನು ಜಮಾ ಮಾಡಲಾಗಿದೆ.

ದೇವಾಲಯ ಸಮಿತಿ ಸದಸ್ಯರು, ಇತರರು ಉಪಸ್ಥಿತರಿದ್ದರು.