ಸಅದಿಯ್ಯ 55ನೇ ವಾರ್ಷಿಕ ಸಮ್ಮೇಳನದ ಲೋಗೋ ಬಿಡುಗಡೆ

| Published : Jul 07 2024, 01:17 AM IST

ಸಾರಾಂಶ

ಶಾಸಕ ಅಡ್ವಕೇಟ್ ಸಿ.ಎಚ್ ಕುಞಂಬು, ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ, ಸೆಯ್ಯಿದ್ ಜಾಫರ್ ಸ್ವಾದಿಕ್ ಮಾನಿಕ್ಕೋತ್, ಇಸ್ಮಾಯಿಲ್ ಸಅದಿ ಪಾರಪ್ಪಳ್ಳಿ ಸೇರಿ ಪ್ರಮುಖರು ಉಪಸ್ಥಿತರಿದ್ದರು.

ಕಾಸರಗೋಡು: ಪ್ರಸಿದ್ಧ ವಿದ್ಯಾಸಂಸ್ಥೆ ಜಾಮಿಯಾ ಸಅದಿಯ್ಯ ಇದರ 55ನೇ ವಾರ್ಷಿಕ ಸನದುದಾನ ಸಮ್ಮೇಳನದ ಲೋಗೋ ಶುಕ್ರವಾರ ಬಿಡುಗಡೆ ಮಾಡಲಾಯಿತು.ಕೇರಳ ವಿಧಾನಸಭೆ ಸ್ಪೀಕರ್ ಲೋಗೋ ಬಿಡುಗಡೆ ಮಾಡಿದರು. ಈ ಸಂದರ್ಭ ಶಾಸಕ ಅಡ್ವಕೇಟ್ ಸಿ.ಎಚ್ ಕುಞಂಬು, ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ, ಸೆಯ್ಯಿದ್ ಜಾಫರ್ ಸ್ವಾದಿಕ್ ಮಾನಿಕ್ಕೋತ್, ಇಸ್ಮಾಯಿಲ್ ಸಅದಿ ಪಾರಪ್ಪಳ್ಳಿ ಸೇರಿ ಪ್ರಮುಖರು ಉಪಸ್ಥಿತರಿದ್ದರು.

ಬೆಂಗಳೂರು ಜಿಲ್ಲಾ ವತಿಯಿಂದ ತರ್ತೀಲ್ ಕುರ್‌ಆನ್ ಸ್ಪರ್ಧೆ

ಎಸ್ಸೆಸ್ಸೆಫ್‌ ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ನಡೆಸುವ ತರ್ತೀಲ್ ಕುರ್ ಆನ್ ಸ್ಪರ್ಧೆಯು ಜುಲೈ 7 ರಂದು ಮಧ್ಯಾಹ್ನ 12 ಗಂಟೆಗೆ ಮರ್ಕಿಂನ್ಸ್ ಆಡಿಟೋರಿಯಂ ಹಲಸೂರಿ ನಲ್ಲಿ ನಡೆಯಲಿದೆ. ಜೂನಿಯರ್ ಸೀನಿಯರ್ ಮತ್ತು ಜನರಲ್ ವಿಭಾಗದಲ್ಲಿ ಎಂಟು ಸ್ಪರ್ದೆಗಳು ನಡೆಯಲಿದ್ದು, ಜಿಲ್ಲೆಯ ಒಟ್ಟು 7 ಡಿವಿಷನ್ ಗಳಿಂದ ಸ್ಪರ್ದಾರ್ಥಿಗಳು ಭಾಗವಹಿಸಲಿದ್ದಾರೆ. ಸಂಜೆ 4 ಗಂಟೆಗೆ ನಡೆಯುವ ಫ್ಯಾಮಿಲಿ ಮೀಟ್ ಕಾರ್ಯಕ್ರಮಕ್ಕೆ ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಜಾಫರ್ ನೂರಾನಿ, ಜಿಲ್ಲಾ ಕ್ಯೂಡಿ ಕಾರ್ಯದರ್ಶಿ ಫಾರೂಖ್ ಅಮಾನಿ ನೇತೃತ್ವ ನೀಡಲಿದ್ದಾರೆ.