ಸಹಸ್ರನಾಮ ಕೋಟಿ ಜಪಯಜ್ಞ ಸಂಪನ್ನ

| Published : Oct 13 2024, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಸಿಂದಗಿಯ ಸಾರಂಗಮಠದಲ್ಲಿ ನವರಾತ್ರಿ ಪ್ರಯುಕ್ತ ಅ.3ರಿಂದ 12ರ ವರೆಗೆ ಹಮ್ಮಿಕೊಂಡಿದ್ದ ಲಲಿತಾ ಸಹಸ್ರನಾಮ ಕೋಟಿ ಜಪಯಜ್ಞ ಕಾರ್ಯಕ್ರಮ ಶನಿವಾರ ಮುಕ್ತಾಯಗೊಂಡಿತು. ನಿತ್ಯ ಸಂಜೆ 5ರಿಂದ 7ಗಂಟೆವರೆಗೆ ಸುಮಾರು 10 ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ 1 ಸಾವಿರು ಭಕ್ತರು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಸಿಂದಗಿಯ ಸಾರಂಗಮಠದಲ್ಲಿ ನವರಾತ್ರಿ ಪ್ರಯುಕ್ತ ಅ.3ರಿಂದ 12ರ ವರೆಗೆ ಹಮ್ಮಿಕೊಂಡಿದ್ದ ಲಲಿತಾ ಸಹಸ್ರನಾಮ ಕೋಟಿ ಜಪಯಜ್ಞ ಕಾರ್ಯಕ್ರಮ ಶನಿವಾರ ಮುಕ್ತಾಯಗೊಂಡಿತು. ನಿತ್ಯ ಸಂಜೆ 5ರಿಂದ 7ಗಂಟೆವರೆಗೆ ಸುಮಾರು 10 ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ 1 ಸಾವಿರು ಭಕ್ತರು ಪಾಲ್ಗೊಂಡಿದ್ದರು.

ಈ ಬಗ್ಗೆ ಸಾರಂಗಮಠದ ಡಾ.ಪ್ರಭುಸಾಂಗದೇವ ಶಿವಾಚಾರ್ಯ ಮಾಹಿತಿ ನೀಡಿದ್ದು, ಲಲಿತಾ ಸಹಸ್ರನಾಮ ಕೋಟಿ ಜಪಯಜ್ಞ ಕಾರ್ಯಕ್ರಮ ದೇವಿಯ ಅನುಗ್ರಹ ಮತ್ತು ಲಿಂ.ಶ್ರೀ ಚನ್ನವೀರ ಸ್ವಾಮಿಗಳ ಆಶೀರ್ವಾದದಿಂದ ವ್ಯವಸ್ಥಿತವಾಗಿ ನಡೆಯಿತು. ಸಿಂದಗಿಯ ಸಾರಂಗಮಠದ ನವರಾತ್ರಿ ಕಾರ್ಯಕ್ರಮದಲ್ಲಿ ಈ ಲಲಿತಾ ಸಹಸ್ರಾಮ ಕಾರ್ಯಕ್ರಮ ಒಂದು ಇತಿಹಾಸ. ಸುಮಾರು 2 ಗಂಟೆಗಳ ಕಾಲ ತಾಯಂದಿರು ತನ್ಮಯ ಭಾವದಿಂದ ಭಾಗವಹಿಸಿದ್ದು ಖುಷಿ ತಂದಿದೆ. ಆಧ್ಯಾತ್ಮಕ ಕಾರ್ಯಕ್ರಮದಿಂದ ಆತ್ಮ, ಮನಸ್ಸು, ಶುದ್ದಯಾಗುತ್ತದೆ. ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಶ್ರೀಮಠದ ಪರವಾಗಿ ಅಭಿನಂಧನೆ ಸಲ್ಲಿಸುತ್ತೇವೆ.ಕೋಟ್‌

ನಿತ್ಯ ಲಿಲಿತ ಸಹಸ್ರನಾಮ ಕಾರ್ಯಕ್ರಮದಲ್ಲಿ ಭಾಗಹಿಸಿದ್ದು ಖುಷಿ ತಂದಿದೆ. ಇಂದಿನ ವೈಜ್ಞಾನಿಕ ಕಾಲದಲ್ಲಿ ಭಕ್ತಿ, ಭಾವಗಳ, ಆಧ್ಯಾತ್ಮಿಕ ವಿಚಾರಗಳು ದೂರವಾಗುತ್ತಿವೆ. ಸಾವಿರ ಜನರನ್ನು ಒಂದೆಡೆ ಸೇರಿಸಿ ಆಧ್ಯಾತ್ಮಿಕ ಜ್ಞಾನ ನೀಡುವುದು ಇಂದು ಸುಲಭದ ಮಾತಲ್ಲ. ಅದು ಸಾಧಕರಿಗೆ ಮಾತ್ರ ಸಲ್ಲುತ್ತೆ. ಆಧ್ಯಾತ್ಮಿಕ ಶಕ್ತಿಯ ಅನುಭವವಾಗಿದೆ. ಡಾ.ಪ್ರಭುಸಾರಂಗದೇವ ಪೂಜ್ಯರಿಗೆ ಎಲ್ಲರ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ. ಅರುಣಾ ಅರವಿಂದ, ಮನಗೂಳಿ