ಸಾರಾಂಶ
ಸ್ವಾತಂತ್ರ್ಯದ ಸಲುವಾಗಿ ತನ್ನ ಪ್ರಾಣ ಪಣಕ್ಕಿಟ್ಟು ಹೋರಾಡಿದ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ಧೈರ್ಯ ಸಾಹಸ ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯ ಸೆಲೆಯಾಗಿದೆ ಎಂದು ಡಾ.ಎನ್.ಎಂ. ಅಂಬಲಿ ಹೇಳಿದರು.
ಗದಗ: ಸ್ವಾತಂತ್ರ್ಯದ ಸಲುವಾಗಿ ತನ್ನ ಪ್ರಾಣ ಪಣಕ್ಕಿಟ್ಟು ಹೋರಾಡಿದ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ಧೈರ್ಯ ಸಾಹಸ ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯ ಸೆಲೆಯಾಗಿದೆ ಎಂದು ಡಾ.ಎನ್.ಎಂ. ಅಂಬಲಿ ಹೇಳಿದರು.
ನಗರದ ಕನಕಾಮೃತ ಸೇವಾ ಸಂಸ್ಥೆ ಹಾಗೂ ಕರಿಯಮ್ಮ ದೇವಿ ಮಹಿಳಾ ಮಂಡಲದ ಸಹಯೋಗದಲ್ಲಿ ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥ ಏರ್ಪಡಿಸಿದ್ದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿಶ್ವವಿದ್ಯಾಲಯ ಸ್ಥಾಪಿಸಿ ಅದಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರಿಡಬೇಕು. ಆತನ ಹೆಸರು ಅಜರಾಮರವಾಗಿ ಉಳಿಸುವಂತಹ ಕೆಲಸ ಸರ್ಕಾರ ಮಾಡಬೇಕು. ಅಂದು ರಾಯಣ್ಣ ಹೊತ್ತಿಸಿದ ಸ್ವಾತಂತ್ರ್ಯದ ಕಿಡಿ ದೇಶದೆಲ್ಲೆಡೆ ಹರಡಿ ಸ್ವಾತಂತ್ರದ ಪರಿಕಲ್ಪನೆ ಭಾರತೀಯರಲ್ಲಿ ಮೂಡಿತು. ನಮ್ಮವರಿಂದ ಮೋಸಕ್ಕೆ ಒಳಗಾಗಿ ಸೆರೆಸಿಕ್ಕ ರಾಯಣ್ಣನನ್ನು ಬ್ರಿಟೀಷ್ ಸರ್ಕಾರ ಬಂಧಿಸಿ ಜ. 26 1831ರಂದು ಗಲ್ಲಿಗೇರಿಸಿತು. ಅಂದಿನಿಂದ ಸಂಗೊಳ್ಳಿ ರಾಯಣ್ಣನ ಹುತಾತ್ಮ ದಿನ ಆಚರಿಸುತ್ತ ಬಂದಿದ್ದೇವೆ. ರಾಯಣ್ಣನ ಹೆಸರಿನಲ್ಲಿ ಸರ್ಕಾರ ಹಾಗೂ ಸೇವಾ ಸಂಸ್ಥೆಗಳು ಹಲವಾರು ವಿದಾಯಕ ಕಾರ್ಯಕ್ರಮ ಆಯೋಜಿಸಿ ಯುವಕರಿಗೆ ಸ್ಫೂರ್ತಿ ನೀಡುವ ಜತೆಗೆ ದೇಶಾಭಿಮಾನ ಬೆಳೆಸಬೇಕು ಎಂದರು.
ಈ ವೇಳೆ ಅನಿತಾ ಜಕಬಾಳ, ರೇಣುಕಾ ಕೇಸರಿ, ಡಾ. ಎಸ್.ಎಫ್. ಜಕವಾಳ, ಎಚ್.ಎಸ್. ಕುರಿ, ಆರ್.ಬಿ. ಅಂದಪ್ಪನವರ, ಎಚ್.ಎಸ್. ಕಿಂದ್ರಿ, ಆರ್.ಕೆ. ಗೊರವರ, ಅನಿಲ್ ಸಿಂಗಟಾಲಕೇರಿ, ಎಚ್.ಆರ್. ಶಹಪುರ, ಕೆ.ಬಿ.ಕಂಬಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಪ್ರೊ.ಎಂ.ಎನ್.ಕಾಮನಹಳ್ಳಿ ನಿರೂಪಿಸಿದರು. ಚಕ್ರಣ್ಣವರ ವಂದಿಸಿದರು.