ವಿದ್ಯಾರ್ಥಿಗಳಲ್ಲಿ ಆಲೋಚನಾ ಪ್ರವೃತ್ತಿ ಬೆಳೆಸಲು ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿ: ಶೇಖರಪ್ಪ

| Published : Nov 23 2025, 02:15 AM IST

ವಿದ್ಯಾರ್ಥಿಗಳಲ್ಲಿ ಆಲೋಚನಾ ಪ್ರವೃತ್ತಿ ಬೆಳೆಸಲು ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿ: ಶೇಖರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರುವಿದ್ಯಾರ್ಥಿಗಳು ಮೂಡ ನಂಬಿಕೆಗಳಿಂದ ಹೊರಬರಲು ವಾಸ್ತವಿಕ ನೆಲಗಟ್ಟಿನಲ್ಲಿ ಆಲೋಚಿಸಿದಾಗ ಮಾತ್ರ ವಿಜ್ಞಾನ ಮತ್ತು ವಿಶ್ವದ ಎಲ್ಲ ಸಂಗತಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಶೇಖರಪ್ಪ ಅಭಿಪ್ರಾಯಪಟ್ಟರು.

- ತಾಲೂಕು ಮಟ್ಟದ ಪ್ರೌಢಶಾಲೆಗಳ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕನ್ನಡಪ್ರಭ ವಾರ್ತೆ, ಬೀರೂರು

ವಿದ್ಯಾರ್ಥಿಗಳು ಮೂಡ ನಂಬಿಕೆಗಳಿಂದ ಹೊರಬರಲು ವಾಸ್ತವಿಕ ನೆಲಗಟ್ಟಿನಲ್ಲಿ ಆಲೋಚಿಸಿದಾಗ ಮಾತ್ರ ವಿಜ್ಞಾನ ಮತ್ತು ವಿಶ್ವದ ಎಲ್ಲ ಸಂಗತಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಶೇಖರಪ್ಪ ಅಭಿಪ್ರಾಯಪಟ್ಟರು.ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತು ಪ್ರದರ್ಶನದಿಂದ ಸ್ವಂತ ಆಲೋಚನೆಗಳ ಮೂಲಕ ಮಾರ್ಗದರ್ಶಕರ ಸಹಾಯ ಪಡೆದು ಗುಣಮಟ್ಟದ ಸಾಮಗ್ರಿಗಳನ್ನು ತಯಾರಿಸಿದರೆ ಉತ್ತಮ ಕೌಶಲ್ಯ ಅಳವಡಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ವಿಭಿನ್ನ ಆಲೋಚನೆಗಳು ಮೂಡಬೇಕಾದರೆ ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿ. ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೂರರಷ್ಟು ಫಲಿತಾಂಶ ಪಡೆಯಲು ಎಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶ್ರಮ ವಹಿಸಬೇಕು ಎಂದು ಕರೆ ನೀಡಿದರು.ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ವಿಜ್ಞಾನ ಶಿಕ್ಷಕರು ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಬೋಧನೆ ಸಂರ್ಭದಲ್ಲಿ ನೀಡಬೇಕು ವಿಜ್ಞಾನದ ಆವಿಷ್ಕಾರಗಳು ಇಂದು ಎ.ಐ ಯುಗಕ್ಕೆ ನಾಂದಿ ಹಾಡಿದೆ. ವಿಜ್ಞಾನದ ಬೋಧನೆ ಮಾನವನ ಏಳಿಗೆಗೆ ಬಳಸಬೇಕು. ಇಂದು ಅನೇಕ ಸಂಶೋಧನೆಗಳ ದುರುಪಯೋಗವಾಗುತ್ತಿದ್ದು ಮಾನವ ಜನಾಂಗಕ್ಕೆ ಕಂಟಕವಾಗಿವೆ. ಇಂದು ದೇಶದ ಪ್ರಗತಿಗೆ ವೈಜ್ಞಾನಿಕ ಆವಿಷ್ಕಾರಗಳು ಹೆಚ್ಚು ಹೆಚ್ಚು ನಡೆಯಬೇಕಿದೆ. ಆ ಮೂಲಕ ದೇಶ ಉತ್ಪಾದನಾ ದೇಶವಾಗಿ ಬೆಳೆದು ಅಭಿವೃದ್ಧಿ ಹೊಂದಲು ಸಹಾಯಕ ವಾಗಬೇಕಾಗಿ ಕೃಷಿ ಕ್ಷೇತ್ರದಲ್ಲಿ ಸಾವಯವ ಕೃಷಿ ಅನುಸರಿಸಲು ಸಾವಯವ ಕೀಟನಾಶಕ ಕಳನಾಶಕಗಳ ಆವಿಷ್ಕಾರ ಹಾಗು ರೈತನೇ ಯಂತ್ರೋಪಕರಣಗಳ ಆವಿಷ್ಕಾರದ ಅಗತ್ಯತೆ ಇದೆ ಎಂದರು.

ರಾಸಾಯನಿಕ ಮುಕ್ತ ಕೃಷಿ ಜನರ ಆರೋಗ್ಯ ಕಾಪಾಡಲು ಸಹಾಯಕ. ಎಲ್ಲಾ ವಿದ್ಯರ್ಥಿಗಳು ವೈಜ್ಞಾನಿಕ ಆವಿಷ್ಕಾರಗಳ ಬಗ್ಗೆ ಕುತೂಹಲ ಮತ್ತು ಆಸಕ್ತಿ ಹೊಂದಿ ವಿಜ್ಞಾನಿಗಳಾಗಲು ಪ್ರಯತ್ನಿಸಬೇಕು ಎಂದು ನುಡಿದರು.ಬೀರೂರು ಶೈಕ್ಷಣಿಕ ವಲಯದ ನೋಡಲ್ ಅಧಿಕಾರಿ ಡಯಟ್ ನ ಶಿವಕುಮಾರ್ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತು ಪ್ರರ್ಶನ ಮುಂದಿನ ಸಂಶೋಧನೆಗೆ ಬುನಾದಿ ಆಗುತ್ತದೆ. ವಿಜ್ಞಾನ ಇಂದು ವಿಶ್ವದಲ್ಲಿ ಅಗಾದವಾಗಿ ಮುಂದುವರಿದಿದ್ದರೂ ಸಹ ಭಾರತದಂತಹ ದೇಶದಲ್ಲಿ ಇಂದಿಗೂ ಸಹ ಮೂಢನಂಬಿಕೆ ಪ್ರಚಲಿತದಲ್ಲಿವೆ. ಇದನ್ನು ಇಂದಿನ ಸಮೂಹಕ್ಕೂ ಹಿಂದಿನ ತಲೆಮಾರು ಹೇರುತ್ತಿರುವುದು ಸರಿಯಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವೈಚಾರಿಕ ಹಾಗೂ ವೈಜ್ಞಾನಿಕ ಪ್ರಜ್ಞೆ ಇರುತ್ತದೆ ಅವರ ಪ್ರತಿಭೆ ವಿಕಸನಗೊಳ್ಳಲು ವಿಜ್ಞಾನ ವಸ್ತು ಪ್ರದರ್ಶನ ಅವಕಾಶ ಮಾಡಿಕೊಟ್ಟಿದೆ. ವಿದ್ಯಾರ್ಥಿಗಳು ಮೂಡನಂಬಿಕೆ ಗಳಿಂದ ಹೊರಬಂದು ಕಠಿಣ ಪರಿಶ್ರಮದಿಂದ ಯಶಸ್ಸು ಪಡೆಯುವತ್ತ ಗಮನಹರಿಸಬೇಕು ಎಂದರು.ವಿಜ್ಞಾನ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪ್ರತಿ ವಿಚಾರದಲ್ಲಿಯೂ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಆಗ ಮಾತ್ರ ವಿದ್ಯಾರ್ಥಿಗಳು ಕುತೂಹಲಕಾರಿ ವಿಷಯ ಕಲಿಯಲು ಸಾಧ್ಯ. ಮುಂದಿನ ದಿನ ಗಳಲ್ಲಿ ಉತ್ತಮ ವಿಜ್ಞಾನಿ ದೊರೆಯಬಹುದು ಆದರೆ ಉತ್ತಮ ಶಿಕ್ಷಕ ದೊರೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಶಿಕ್ಷಕ ವೃತ್ತಿ ಉಳಿಸುವ ಜವಾಬ್ದಾರಿ ಎಲ್ಲರ ಹೆಗಲ ಮೇಲಿದೆ. ವಿಜ್ಞಾನ ವಸ್ತು ಪ್ರದರ್ಶನ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವ, ಕ್ರಿಯಾಶೀಲತೆ ಸೃಜನಶೀಲತೆ, ಭಾರತ ದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ಕೊಂಡು ಕೊಳ್ಳುವ ಮನೋಭಾವನೆಗೆ ಅಡಿಪಾಯ ಈ ವಸ್ತು ಪ್ರದರ್ಶನದಿಂದ ವಿದ್ಯಾರ್ಥಿಗಳಿಗೆ ಸಿಗುತ್ತದೆ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಉಮೇಶ್, ವಿಜ್ಞಾನ ವಸ್ತು ಪ್ರರ್ಶನದ ಜಿಲ್ಲಾ ನೋಡಲ್ ಅಧಿಕಾರಿ ಶಿವಕುಮಾರ, ತಾಲೂಕು ನೋಡಲ್ ಅಧಿಕಾರಿ ಹಾಗೂ ಶಿಕ್ಷಣ ಸಂಯೋಜಕ ಮಂಜಪ್ಪ ದೊಡ್ಮನಿ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಪದಾಧಿಕಾರಿದ ಶಶಿಕುಮಾರ್ ರಘು ತೀರ್ಪುಗಾರರಾದ ರವಿಕುಮಾರ್ ಚಂದ್ರಪ್ರ ಉಪಸ್ಥಿತರಿದ್ದರು.

21ಬೀರೂರು ಬೀರೂರು ಪಟ್ಟಣದ ಗುರುಭವನದಲ್ಲಿ 2025- 26ನೇ ಸಾಲಿನ ತಾಲೂಕು ಮಟ್ಟದ ಪ್ರೌಢಶಾಲೆಗಳ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಕ್ಷೇತ್ರ ಸಮನ್ವಯ ಅಧಿಕಾರಿ ಶೇಖರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.