ಹಿಂದೆ ಅಸಾಧ್ಯವಾದುದ್ದನ್ನು ಇಂದು ಸಾಧ್ಯವಾಗಿಸಿದ್ದು ವಿಜ್ಞಾನ

| Published : Mar 16 2024, 01:48 AM IST

ಹಿಂದೆ ಅಸಾಧ್ಯವಾದುದ್ದನ್ನು ಇಂದು ಸಾಧ್ಯವಾಗಿಸಿದ್ದು ವಿಜ್ಞಾನ
Share this Article
  • FB
  • TW
  • Linkdin
  • Email

ಸಾರಾಂಶ

ಮಾನವನ ಬದುಕು ವಿಜ್ಞಾನ ಮತ್ತು ಮೆದುಳಿನ ಕನಸಿನ ಕೂಸುಯೆಂದೇ ಹೇಳಬೇಕು. ಹಿಂದೆ ಅಸಾಧ್ಯವಾದುದ್ದನ್ನು ಇಂದು ಸಾಧ್ಯವಾಗಿಸಿದ್ದು, ವಿಜ್ಞಾನ.

ಬೀದರ್: ಮಾನವನ ಬದುಕು ವಿಜ್ಞಾನ ಮತ್ತು ಮೆದುಳಿನ ಕನಸಿನ ಕೂಸುಯೆಂದೇ ಹೇಳಬೇಕು. ಹಿಂದೆ ಅಸಾಧ್ಯವಾದುದ್ದನ್ನು ಇಂದು ಸಾಧ್ಯವಾಗಿಸಿದ್ದು, ವಿಜ್ಞಾನ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ ನುಡಿದರು.

ನಗರದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕರ್ನಾಟಕ ಕಾಲೇಜಿನ ವಿಜ್ಞಾನ ಕ್ಲಬ್ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ವಿಶಾಲವಾದ ಜಗತ್ತು ಇಂದು ಸಣ್ಣ ಹಳ್ಳಿಯಾಗಿದೆ. ಬಾನಲ್ಲಿ ಬಾನಾಡಿಯಂತೆ ಹಾರಬಹುದು, ನೀಲಿ ಸಾಗರದ ಆಳದಲ್ಲಿ ಮೀನಿನಂತೆ ಈಜಬಹುದು. ಇದೆಲ್ಲಾ ಸಾಧ್ಯವಾದದ್ದು, ವಿಜ್ಞಾನಿಗಳ ನಿರಂತರ ಪರಿಶ್ರಮದ ಫಲದಿಂದ. ಯಂತ್ರಗಳ ಸಹಾಯದಿಂದ ಬದುಕು ಸರಳವಾಗಿದೆ. ವಿಜ್ಞಾನದ ಸಹಾಯದಿಂದ ಜೀವನ ಅತ್ಯದ್ಭುತವೆನಿಸುತ್ತದೆ ಎಂದರು.

ವಿಜ್ಞಾನ ನಮಗೆ ವೈಜ್ಞಾನಿಕವಾಗಿ ವಿಚಾರ ಮಾಡಲು ತರಬೇತಿ ನೀಡಿದೆ. ದೈನಂದಿನ ಬದುಕಿಗೆ ಬೆಳಕು ಚೆಲ್ಲಲಿರುವ ವಿಜ್ಞಾನದ ಮೇಲ್ಮೈಯನ್ನು ಅರಿಯಲು ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ವಿಜ್ಞಾನ ದಿನ ಸರ್.ಸಿ.ವಿ.ರಾಮನ್ ಭಾರತ ಮಾತೆಯ ಮುಡಿಗೆ 1930ರಲ್ಲಿ ನೋಬೆಲ್ ಪ್ರಶಸ್ತಿ ಗರಿ ಮುಡಿಸಿದ ಏಷ್ಯಾದ ಮೊದಲಿಗರು. ವಿಜ್ಞಾನ ಕೇವಲ ಪ್ರಯೋಗಾಲಯಗಳಲ್ಲಿ ಮಾತ್ರ ಕಾಣದೇ ಬದಲಾಗಿ ಇಡೀ ವಿಶ್ವದಲ್ಲಿ ಕಾಣಬೇಕು ಎಂದರು.

ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಹಂಗರಗಿ ಅಧ್ಯಕ್ಷತೆವಹಿಸಿ ಮಾತನಾಡಿ, ವಿಜ್ಞಾನಿಗಳು ಬಾಹ್ಯಕಾಶ, ಪರಮಾಣು ವಿಜ್ಞಾನ ಮಾಹಿತಿ ವಿಜ್ಞಾನ ಜೈವಿಕ ತಂತ್ರಜ್ಞಾನ, ವೈದಿಕ ಕ್ಷೇತ್ರ ಸೇರಿದಂತೆ ದೇಶದ ವಿಜ್ಞಾನಿಗಳು ಕೊಟ್ಟಿರುವ ಕೊಡುಗೆ ಮಹತ್ವವೆಂಬುದರಲ್ಲಿ ಎರಡು ಮಾತಿಲ್ಲ. ಈ ದಿನ ಎಲ್ಲಾ ವಿಜ್ಞಾನಿಗಳಿಗೆ ಸರ್ಪಣೆಯಾಗಿದೆ. ಕಾಲೇಜಿನ ವಿಜ್ಞಾನ ಕ್ಲಬ್ ಸಹಾಯದಿಂದ ಪ್ರತಿ ವರ್ಷ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುವುದು ಪರಿಷತ್ತಿನಿಂದ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ವೈಜ್ಞಾನಿಕ ಅರಿವು ಪರಿಸರ ನಿರ್ವಹಣೆಯ ಅರಿವು ಸೈಕಲ್ ಬಳಕೆ ಇಂಧನ ಉಳಿವು, ಸೌರಶಕ್ತಿ ಬಳಕೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.