ಹೊನ್ನಾಳಿ ಸರ್ಕಾರಿ ನೌಕರರ ಸಂಘಕ್ಕೆ 34 ನಿರ್ದೇಶಕರ ಆಯ್ಕೆ

| Published : Nov 06 2024, 12:47 AM IST

ಹೊನ್ನಾಳಿ ಸರ್ಕಾರಿ ನೌಕರರ ಸಂಘಕ್ಕೆ 34 ನಿರ್ದೇಶಕರ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾಳಿ ತಾಲೂಕು ಸರ್ಕಾರಿ ನೌಕರರ ಸಂಘ ನೂತನ ನಿರ್ದೇಶಕರಾಗಿ ಆಯ್ಕೆಯಾದವರನ್ನು ಅಭಿನಂದಿಸಲಾಯಿತು.

ಹೊನ್ನಾಳಿ: ರಾಜ್ಯ ಸರ್ಕಾರಿ ನೌಕರರ ಸಂಘದ ಹೊನ್ನಾಳಿ ತಾಲೂಕು ಘಟಕಕ್ಕೆ ಅ.28ರಂದು ನಡೆದ ಚುನಾವಣೆಯಲ್ಲಿ 21 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ. ಒಟ್ಟು 34 ಸ್ಥಾನಗಳ ಪೈಕಿ 13 ಮಂದಿ ಅವಿರೋಧ ಆಯ್ಕೆಯಾಗಿದ್ದು, ಉಳಿದ 21 ಕ್ಷೇತ್ರಕ್ಕೆ ಚುನಾವಣೆ ನಡೆಸಲಾಯಿತು ಎಂದು ಚುನಾವಣಾಧಿಕಾರಿ ಎಂ. ತಿಪ್ಪೇಶಪ್ಪ ತಿಳಿಸಿದ್ದಾರೆ.

ಅವಿರೋಧ ಆಯ್ಕೆ: ಅತೀಕ್‌ ಉಲ್ಲಾ- ಕೃಷಿ ಇಲಾಖೆ, ಶರತ್‌ಕುಮಾರ್- ಪಿಡಬ್ಲ್ಯುಡಿ, ನಾಗರಾಜ್- ಪಂಚಾಯತ್‌ರಾಜ್ ಎಂಜಿನಿಯರಿಂಗ್, ನಾಗರಾಜ ನಾಯ್ಕ್‌- ಸರ್ಕಾರಿ ಪದವಿ ಕಾಲೇಜು, ಸತೀಶ್ ಡಿ.ಒ.- ಸಮಾಜ ಕಲ್ಯಾಣ, ಶಿವಪದ್ಮ- ಆರೋಗ್ಯ ಇಲಾಖೆ, ಅಭಿಜಿತ್ ಚವ್ಹಾಣ್- ತೋಟಗಾರಿಕೆ, ಪ್ರಸನ್ನಕುಮಾರ್- ಖಜಾನೆ, ಮೇಘನಾ- ಭೂಮಾಪನಾ, ಸುಮಾ- ಮೀನುಗಾರಿಕೆ, ನಾಗರಾಜ್ ಎ.ಎಸ್.- ಆಹಾರ ಇಲಾಖೆ, ಮುರುಡೇಶ್- ಅಬಕಾರಿ ಮತ್ತು ವಾಣಿಜ್ಯ ಇಲಾಖೆ, ರಾಘವೇಂದ್ರ- ತಾ.ಪಂ. ಅವಿರೋಧ ಆಯ್ಕೆಯಾದವರು ಎಂದಿದ್ದಾರೆ.

ಚುನಾವಣೆ ವಿಜೇತರು:

ಪುರುಷೋತ್ತಮ್- ಶಿಕ್ಷಣ ಇಲಾಖೆ, ಕುಮಾರ ನಾಯ್ಕ್- ಶಿಕ್ಷಣ, ಮಹಮ್ಮದ್ ರಫಿ- ಶಿಕ್ಷಣ, ರಾಜಕುಮಾರ್- ಶಿಕ್ಷಣ, ಬಸವರಾಜಪ್ಪ- ಪ್ರೌಢಶಿಕ್ಷಣ, ಅನಿಲ್ ಕುಮಾರ್- ಪ್ರೌಢಶಿಕ್ಷಣ, ಚೇತನ- ಆರೋಗ್ಯ, ತಿಪ್ಪೇಸ್ವಾಮಿ- ಆರೋಗ್ಯ, ರಾಜಾರಾಮ್-ಆರೋಗ್ಯ, ಎಂ.ವಿ.ರವಿ- ಗ್ರಾಮೀಣಾಭಿವೃದ್ಧಿ- ಪಂಚಾಯತ್‌ರಾಜ್, ಅರುಣ್- ಪಂಚಾಯತ್‌ರಾಜ್, ಬೀರೇಶ್- ನ್ಯಾಯಾಂಗ, ಚಂದ್ರಪ್ಪ- ಕಂದಾಯ, ದೊಡ್ಡೇಶ್- ಕಂದಾಯ, ಧರ್ಮಪ್ಪ- ಕಂದಾಯ, ಕುಮಾರ್ ಬಾರ್ಕಿ- ಬಿಸಿಎಂ, ವೀರಯ್ಯ- ಪದವಿಪೂರ್ವ ಕಾಲೇಜು, ಕುಮಾರ್ ಟಿ.- ಸಾರ್ವಜನಿಕ ಶಿಕ್ಷಣ, ಡಾ.ವಿಶ್ವನಟೇಶ್- ಪಶುಪಾಲನಾ, ಹರೀಶ್ ಡಿ.- ಅರಣ್ಯ ಇಲಾಖೆ, ಫಾತಿಮಾ ಎಚ್.- ಸಿಡಿಪಿಒ ಇಲಾಖೆ ಸೇರಿದಂತೆ ಒಟ್ಟು 21 ಜನ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಆಯ್ಕೆಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಸಹಾಯಕ ಚುನಾವಣಾಧಿಕಾರಿಗಳಾಗಿ ಅಪ್ಸರಾ ಅಹ್ಮದ್ ಕಾರ್ಯನಿರ್ವಹಿಸಿದರು.