ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ಹಿರಿಯ ವಕೀಲರು ಕಿರಿಯ ವಕೀಲರಿಗೆ ಮಾರ್ಗದರ್ಶಕರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೈದ್ಯ ಶ್ರೀಕಾಂತ್ ಹೇಳಿದ್ದಾರೆ.ವಕೀಲರ ಸಂಘದಿಂದ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ವಕೀಲರ ವೃತ್ತಿ ನೋಬೆಲ್ ವೃತ್ತಿಯಾಗಿದೆ. ಎಲ್ಲರೂ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಹೆಚ್ಚುವರಿ ಸಿವಿಲ್ ನ್ಯಾಯಧೀಶರಾದ ಊರ್ಮಿಳ ಡಾ.ಬಾಬು ರಾಜೇಂದ್ರಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿ ಮಾತನಾಡಿ ವಕೀಲರ ದಿನಾಚರಣೆಗೆ ಶುಭ ಕೋರಿದರು.ಅಪರ ಸರ್ಕಾರಿ ವಕೀಲ ಟಿ.ಜೆ.ಜಗದೀಶ್ ಮಾತನಾಡಿ ಆರೋಗ್ಯ ಬಹುಮುಖ್ಯ, ಎಲ್ಲರೂ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು, ಆರೋಗ್ಯವೇ ಭಾಗ್ಯ, ಆರೋಗ್ಯ ಇದ್ದರೆ ಮಾತ್ರ ವಕೀಲರು ವೃತ್ತಿ ಮಾಡಲು ಸಾಧ್ಯ ಎಂದರು.
ಹಿರಿಯ ವಕೀಲ ಎಸ್.ಎನ್.ಮಲ್ಲೇಗೌಡ ಮಾತನಾಡಿ ನಾವು ವೃತ್ತಿಯನ್ನು ಗೌರವಿಸಬೇಕು. ವೃತ್ತಿಯನ್ನು ಉತ್ತಮವಾಗಿ ನಿರ್ವಹಿಸಿ ಕಕ್ಷಿದಾರರಿಗೆ ನ್ಯಾಯ ಕೊಡಲು ಶ್ರಮ ಪಡಬೇಕು. ಕಿರಿಯ ವಕೀಲರು ಹಿರಿಯ ವಕೀಲರ ಮಾರ್ಗದರ್ಶನ ಪಡೆದು ಅವರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.ಹಿರಿಯ ವಕೀಲ ಕೆ.ಎಲ್.ಲಿಂಗರಾಜು ಮಾತನಾಡಿ ಮಾಜಿ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರಪ್ರಸಾದ್ ರವರ ಜನ್ಮದಿನವನ್ನು ವಕೀಲರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಅವರ ಮಾರ್ಗದರ್ಶನ ವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರು ಪರಮೇಶ್ ಅವರನ್ನು ಸನ್ಮಾನಿಸಲಾಯಿತು.ವಕೀಲರ ಸಂಘದ ಅಧ್ಯಕ್ಷ ಸಿ.ನಿಂಗಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಕೀಲ ಬಿ.ಪಿ.ವಿಕಾಸ್,
ವಕೀಲರಾದ ಎನ್.ವೀರಭದ್ರಪ್ಪ, ಶಿವಶಂಕರನಾಯ್ಕ , ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಸುರೇಶ್ ಚಂದ್ರ, ನಿರಂಜನಮೂರ್ತಿ9ಕೆಟಿಆರ್.ಕೆ.05ಃ ತರೀಕೆರೆಯಲ್ಲಿ ವಕೀಲರ ಸಂಘದಿಂದ ಏರ್ಪಡಿಸಿದ್ದ ವಕೀಲರ ದಿನಾಚರಣೆ ಉದ್ಘಾಟನೆಯನ್ನು ನ್ಯಾ.ವೈದ್ಯ ಶ್ರೀಕಾಂತ್ ನೆರವೇರಿಸಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಊರ್ಮಿಳ, ವಕೀಲರ ಸಂಘದ ಅಧ್ಯಕ್ಷ ಸಿ.ನಿಂಗಪ್ಪ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಸುರೇಶ್ ಚಂದ್ರ ಮತ್ತಿತರರು ಇದ್ದಾರೆ.