ಅನಾಥ ಮಕ್ಕಳ ಉದ್ಧಾರಕ್ಕಾಗಿ ಶ್ರಮಿಸಿದ ಶಾಂತವೀರ ಪಟ್ಟಾಧ್ಯಕ್ಷರು

| Published : Mar 16 2024, 01:45 AM IST

ಸಾರಾಂಶ

ಬಡ ಮಕ್ಕಳ, ಅನಾಥ ಮಕ್ಕಳ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ ಮಹಾಯೋಗಿ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು ಎಂದು ಸ್ಥಳೀಯ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ದಾನಯ್ಯ ಮಠಪತಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಬಡ ಮಕ್ಕಳ, ಅನಾಥ ಮಕ್ಕಳ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ ಮಹಾಯೋಗಿ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು ಎಂದು ಸ್ಥಳೀಯ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ದಾನಯ್ಯ ಮಠಪತಿ ಹೇಳಿದರು.

ಅವರು ಪಟ್ಟಣದ ಊರನ ಹಿರಿಯ ಮಠದಲ್ಲಿ ಸಿಂದಗಿಯ ಸಿರಿ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ 44ನೇ ಪುಣ್ಯ ಸ್ಮರಣೋತ್ಸವ ಮತ್ತು ಗದಗ ತೋಂಟದಾರ್ಯ ಡಾ.ಜಗದ್ಗುರು ಸಿದ್ದಲಿಂಗ ಮಹಾಸ್ವಾಮಿಗಳ 6ನೇ ಗುರು ಸ್ಮರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನೊಳ್ಳಿ ಹಿರೇಮಠದ ಪರಮಪೂಜ್ಯಶ್ರೀ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿದರು. ಈ ಸಂದರ್ಭದಲ್ಲಿ ಸಂಶಿಯ ವಿರಕ್ತಮಠದ ಶ್ರೀ ಚನ್ನಬಸವ ದೇವರು ಮತ್ತು ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯರು ಶ್ರೀಗಳ ಕುರಿತಾಗಿ ಮಾತನಾಡಿದರು. ಮಾರ್ಚ್ 19 ರವರೆಗೆ ನಡೆಯುವ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಉಪನ್ಯಾಸಕ ಸಿದ್ದಲಿಂಗ ಕಿಣಗಿ, ಗದಗಯ್ಯ ನಂದಿಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ರೇಣುಕಾ ಗವಾಯಿಗಳು ಹಾಗೂ ಅಡವೀಶ ಬೆಳಗಾವಿ ಅವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಶ್ರೀಮಠದ ಭಕ್ತಾದಿಗಳು ಭಾಗವಹಿಸಿದ್ದರು.