ಜಾಗತಿಕ ಉದ್ಯಮವಾಗಿ ಮಾರ್ಪಟ್ಟಿರುವ ಕುರಿ, ಮೇಕೆ ಸಾಕಾಣಿಕೆ: ಡಾ.ಪ್ರಕಾಶ್ ನಡೂರ್

| Published : Jan 10 2025, 12:47 AM IST

ಜಾಗತಿಕ ಉದ್ಯಮವಾಗಿ ಮಾರ್ಪಟ್ಟಿರುವ ಕುರಿ, ಮೇಕೆ ಸಾಕಾಣಿಕೆ: ಡಾ.ಪ್ರಕಾಶ್ ನಡೂರ್
Share this Article
  • FB
  • TW
  • Linkdin
  • Email

ಸಾರಾಂಶ

ಕುರಿ ಮತ್ತು ಮೇಕೆ ಸಾಕಾಣಿಕೆಯು ಜಾಗತಿಕ ಕೃಷಿ ಉದ್ಯಮವಾಗಿ ಬೆಳೆಯುತ್ತಿರುವ ವಲಯವಾಗಿದೆ ಎಂದು ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯ ಡೀನ್‌ ಡಾ.ಪ್ರಕಾಶ್ ನಡೂರ್ ತಿಳಿಸಿದರು. ಆನಂದಪುರದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಉದ್ಯಮಶೀಲತೆಯ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.

ಪ್ರಾಣಿ ಸಾಕುವ ಉದ್ಯಮಶೀಲತೆಯ ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಆನಂದಪುರ

ಕುರಿ ಮತ್ತು ಮೇಕೆ ಸಾಕಾಣಿಕೆಯು ಜಾಗತಿಕ ಕೃಷಿ ಉದ್ಯಮವಾಗಿ ಬೆಳೆಯುತ್ತಿರುವ ವಲಯವಾಗಿದೆ ಎಂದು ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯ ಡೀನ್‌ ಡಾ.ಪ್ರಕಾಶ್ ನಡೂರ್ ತಿಳಿಸಿದರು.

ಅವರು ಸಮೀಪದ ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯ ನಾವಿಕ್ ಕೃಷಿ ನವೋದ್ಯಮ ಪೋಷಣ ಕೇಂದ್ರ, ರಾಷ್ಟ್ರೀಯ ಪಶು ರೋಗ ಶಂಕುಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ ಹಾಗೂ ರೈತ ತರಬೇತಿ ಸಂಸ್ಥೆ ಇರುವಕ್ಕಿ ಜಂಟಿಯಾಗಿ ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಉದ್ಯಮಶೀಲತೆಯ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೈಜ್ಞಾನಿಕವಾಗಿ ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುವುದರಿಂದ ಉತ್ತಮ ಲಾಭ ಪಡೆಯುವುದರ ಜೊತೆಗೆ ಉದ್ಯಮಿದಾರರಾಗಬಹುದು. ಕುರಿ ಮತ್ತು ಮೇಕೆ ಸಾಕಾಣಿಕೆಯ ಸಾಮರ್ಥ್ಯವನ್ನು ಕಡಿಮೆ ಆರಂಭಿಕ ಹೂಡಿಕೆ ಇಂದ ಹೆಚ್ಚಿನ ಆರ್ಥಿಕ ಲಾಭದೊಂದಿಗೆ ಕುಟುಂಬದ ಆದಾಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕುರಿ ಮತ್ತು ಮೇಕೆ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿದ್ದು ರೈತರು ಉತ್ತಮ ಕುರಿ ತಳಿಗಳನ್ನು ಆಯ್ಕೆ ಮಾಡಿಕೊಂಡು ಸರಿಯಾದ ಸಮಯಕ್ಕೆ ಕುರಿ ಮತ್ತು ಮೇಕೆಗಳಿಗೆ ಲಸಿಕೆಗಳನ್ನು ಹಾಕಿಸಬೇಕು.ಹಾಗೆ ಮಾರುಕಟ್ಟೆಯನ್ನು ರೂಪಿಸಿಕೊಳ್ಳುವುದರಿಂದ ಅತಿ ಹೆಚ್ಚಿನ ಲಾಭದಾಯಕ ಉದ್ಯಮವಾಗಲಿದೆ ಎಂದರು.

ಇರುವಕ್ಕಿ ಕೆಳದಿ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಕೆ. ಟಿ ಗುರುಮೂರ್ತಿ ಮಾತನಾಡಿ, ಯುವಕರು ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಮಾಡುವುದರಿಂದ ಉದ್ಯಮಿದಾರರಾಗಲು ಉತ್ತಮ ಭವಿಷ್ಯವಿದೆ. ಕುರಿಗಳ ಆಯ್ಕೆ, ಮೇವು ನಿರ್ವಹಣೆ, ಶೆಡ್ ನಿರ್ಮಾಣ, ಸರಿಯಾದ ಸಮಯಕ್ಕೆ ಕುರಿ ಹಾಗೂ ಮೇಕೆಗಳಿಗೆ ಲಸಿಕೆ ಹಾಕಿಸುವುದರ ಅತಿ ಮುಖ್ಯ. ಕುರಿ ಮತ್ತು ಮೇಕೆ ಸಾಕಾಣಿಕೆ ಉತ್ತಮ ಲಾಭದಾಯಕ ವಾಗಲಿದೆ ಎಂದರು.

ಉಪ ಕುಲಪತಿ ಡಾ. ಕೆ.ಸಿ ಶಶಿಧರ್ ಮಾತನಾಡಿ, ಕುರಿ ಮತ್ತು ಮೇಕೆಗಳ ಸಾಕಾಣಿಕೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದು ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಪಡೆದು ಇದರಿಂದ ಯುವಕರು ಕುರಿ ಮತ್ತು ಮೇಕೆ ಸಾಕಾಣಿಕ ಮಾಡುವುದರೊಂದಿಗೆ ಉದ್ಯೋಗ ಸೃಷ್ಟಿ ಮಾಡುವಂತೆ ಕರೆ ನೀಡಿದರು.

ಡಾ. ಬಿ.ಸಿ ಹನುಮಂತ ಸ್ವಾಮಿ, ಡಾ.ದಿವ್ಯ ತರಬೇತಿಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಈ ತರಬೇತಿ ಕಾರ್ಯಗಾರದಲ್ಲಿ ಸಹ ಪ್ರಾಧ್ಯಾಪಕರು ಭಾಗವಹಿಸಿದ್ದು, 65ಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು ಹಾಗೂ ಯುವ ರೈತರು ಭಾಗವಹಿಸಿದ್ದರು.