ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಶಾಸಕ ವಿಜಯಾನಂದ ಕಾಶಪ್ಪನವರ ಬಸವಜಯ ಮೃತ್ಯುಂಜಯ ಶ್ರೀಗಳನ್ನು ಉಚ್ಚಾಟನೆ ಮಾಡಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗ್ಲೀಕರ ಹೇಳಿದರು.ಸ್ಥಳೀಯ ಜಿ.ಎಲ್.ಬಿ.ಸಿ ಅತಿಥಿಗೃಹದಲ್ಲಿ ಪಂಚಮಸಾಲಿ ಶ್ರೀಗಳಾದ ಬಸವಜಯ ಮೃತ್ಯುಂಜಯ ಶ್ರೀಗಳ ಉಚ್ಚಾಟನೆ ಖಂಡಿಸಿ ಮುಧೋಳ ತಾಲೂಕು ಹಾಗೂ ರಬಕವಿ ಬನಹಟ್ಟಿ ತಾಲೂಕು ಪಂಚಾಮಸಾಲಿಗಳು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟ್‌ನಲ್ಲಿ ಮೊದಲಿನಿಂದ ಕಾಶಪ್ಪನವರು ಹಾಗೂ ಶ್ರೀಗಳು ಕೂಡ ಸದಸ್ಯರು ಸಹ ಇರಲಿಲ್ಲ, ಆದರೆ ಇತ್ತಿತ್ತಲಾಗಿ ಅವರ ದುಷ್ಟಕೂಟಗಳೆಲ್ಲ ಸೇರಿ ಟ್ರಸ್ಟ್ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದಕ್ಕೆ ಕೇವಲ ಅವರ ಬೆಂಬಲಿಗರು ಮಾತ್ರ ಸೇರಿ ಮಾಡಿದ ಟ್ರಸ್ಟ್ ಆಗಿದೆ. ಪಂಚಮಸಾಲಿ ಪೀಠ ಕೂಡಲಸಂಗಮ ಸ್ಥಾಪನೆಯಾಗಿ ಕೆಲವು ದಿನಗಳ ನಂತರ ಈ ಸೃಷ್ಟಿ ರಚನೆಯಾಗಿದೆ. ಅದಕ್ಕಾಗಿ ಶ್ರೀಗಳಿದ್ದರೆ ಪೀಠ ಅವರಿಲ್ಲದ್ದಿದ್ದರೆ ಆ ಪೀಠಕ್ಕೆ ಯಾವುದೇ ಬೆಲೆ ಇಲ್ಲ, ಕಾಶಪ್ಪನವರ ನಮ್ಮ ಸಮಾಜದ ಯಾವುದೇ ಸ್ಥಾನದಲ್ಲಿಲ್ಲ. ಸಮಾಜಕ್ಕೆ ಒಬ್ಬ ಸಾಮಾನ್ಯ ವ್ಯಕ್ತಿ, ಈ ಪರಿಸ್ಥಿತಿಯಲ್ಲಿ ಶ್ರೀಗಳನ್ನು ಉಚ್ಚಾಟಿಸಲು ಅವರಿಗೆ ಯಾವುದೇ ಹಕ್ಕಿಲ್ಲ. ಶ್ರೀಗಳ ಪೀಠ ಕೂಡಲಸಂಗಮ ಬೇರೆ ಪೀಠದ ಮಾತಿಲ್ಲ ಎಂದು ಹೇಳಿದರು.
ಸಮಾಜದ ಮುಖಂಡರಾದ ಹನುಮಂತ ಶಿರೋಳ ಮತ್ತು ಪರಪ್ಪ ಹುದ್ದಾರ ಮಾತನಾಡಿ, ಬಸವಜಯ ಮೃತ್ಯುಂಜಯ ಶ್ರೀಗಳ ಉಚ್ಚಾಟನೆಯನ್ನು ನಾವು ಒಪ್ಪಲು ಸಾಧ್ಯವೇ ಇಲ್ಲ. ಪೀಠದಿಂದ ಬಸವಜಯ ಮೃತ್ಯುಂಜಯ ಶ್ರೀಗಳಲ್ಲ, ಶ್ರೀಗಳಿದ್ದಾಗ ಮಾತ್ರ ಆ ಪೀಠ. ಆದ್ದರಿಂದ ಅವರನ್ನು ಉಚ್ಚಾಟನೆ ಮಾಡಿದ್ದೇನೆ ಎನ್ನುವುದು ಸರಿಯಲ್ಲ. ಕೂಡಲಸಂಗಮಕ್ಕೆ ಶ್ರೀಗಳು ಬಂದ ನಂತರ ಸಮಾಜ ಸಂಘಟನೆ ಮಾಡುತ್ತಿದ್ದಾರೆ. ಇಡೀ ಕರ್ನಾಟಕದ ಪಂಚಮಸಾಲಿಗಳೆಲ್ಲ ಅವರನ್ನೇ ಜಗದ್ಗುರುಗಳೆಂದು ಒಪ್ಪಿಕೊಂಡಿದ್ದೇವೆ. ಎಲ್ಲ ತಾಲೂಕುಗಳ ಹಿರಿಯರನ್ನು ಸೇರಿಸಿ ಮಾಡಿದ್ದರೆ ಅದು ಒಂದು ಸಮಾಜದ ಟ್ರಸ್ಟ್ ಆಗುತ್ತಿತ್ತು. ಕೇವಲ ತಮ್ಮ ಸುತ್ತಮುತ್ತಲಿರುವ ಕೆಲವರನ್ನು ಸೇರಿಸಿಕೊಂಡು ಮಾಡಿದ ಟ್ರಸ್ಟ್ ಹಾಗೂ ನಮ್ಮ ಪೀಠಕ್ಕೆ ಯಾವುದೇ ಸಂಬಂಧವಿಲ್ಲ. ಕಾಶಪ್ಪನವರ ಅವರು ಬೊಮ್ಮಾಯಿ ಸರ್ಕಾರ ಸಮಾಜಕ್ಕೆ ೨ಡಿ ಮೀಸಲಾತಿ ನೀಡಿದಾಗ ಆ ಆದೇಶ ಪ್ರತಿ ಹರಿದು ಹಾಕಿ ನಾನು ಸಮಾಜದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು. ಅಂದಿನಿಂದಅವರು ನಮಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿದ್ದಾರೆ. ಇಂಥ ಸ್ಥಿತಿಯಲ್ಲಿ ಶ್ರೀಗಳನ್ನು ಉಚ್ಚಾಟನೆ ಮಾಡಿದ್ದೇನೆ ಎನ್ನುವುದು ಸಮಂಜಸವಲ್ಲ ಎಂದು ಹೇಳಿದರು.ಪಂಚಮಸಾಲಿ ನಗರ ಘಟಕದ ಅಧ್ಯಕ್ಷ ಬಸಪ್ಪ ಕೊಪ್ಪದ, ಮತ್ತು ಮಹಾದೇವ ಮರಾಪುರ, ಚನಬಸು ಯರಗಟ್ಟಿ, ಡಾ.ಅಶೋಕ ದಿನ್ನಿಮನಿ, ಚನ್ನಪ್ಪ ಪಟ್ಟಣಶೆಟ್ಟಿ, ವಿನೋದಗೌಡ ಉಳ್ಳಾಗಡ್ಡಿ, ಈರಪ್ಪ ದಿನ್ನಿಮನಿ, ಮಲ್ಲಪ್ಪ ಕೌಜಲಗಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಬಸು ನಾಗನೂರ, ಮಹಾಲಿಂಗಪ್ಪ ಕಂಠಿ, ಅಲ್ಲಪ್ಪ ಕಲ್ಲೋಳಿ, ಸಂದೀಪ ಸುರಗೊಂಡ, ಪಂಡಿತ ಖೋತ, ರವಿ ಗಿರಿಸಾಗರ, ಶ್ರೀಶೈಲ ಬಿರಾದಾರ ಇತರರು ಇದ್ದರು.