ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ನಮ್ಮ ದೇಶದ ಬಗ್ಗೆ ನಾವು ಮೊದಲು ಆಲೋಚಿಸಬೇಕು. ನಾವು ನಮ್ಮ ದೇಶಕ್ಕಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಮಾಜದ ಋಣ ನಮ್ಮ ಮೇಲಿದೆ ಹಾಗಾಗಿ ನಾವು ರಾಷ್ಟ್ರಾಭಿಮುಖವಾಗಿ ಬೆಳೆಯಬೇಕಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪ್ರಾಂತ ಪ್ರಮುಖರಾದ ರಾಮಚಂದ್ರ ಶೆಟ್ಟಿ ತಿಳಿಸಿದರು.ತಿಪಟೂರು ತಾಲೂಕಿನ ಸುಕ್ಷೇತ್ರ ಕೆರೆಗೋಡಿ ರಂಗಾಪುರ ಮಠದಲ್ಲಿ ಆಯೋಜಿಸಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದಕ್ಷಿಣ ಪ್ರಾಂತದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಎರಡು ದಿನಗಳ ಕಾರ್ಯಾಗಾರದಲ್ಲಿ ಮಾತನಾಡಿದರು.
ಸಂಶೋಧನೆಗೆ ಏನು ಬೇಕು ಎಂಬ ಕುತೂಹಲವನ್ನು ನಾವು ಕಳೆದುಕೊಂಡಿದ್ದೇವೆ. ಸಂಶೋಧಕರು ಹೊಸ ದೃಷ್ಟಿಕೋನದಲ್ಲಿ ಎಲ್ಲವನ್ನು ನೋಡವುದನ್ನ ಕಲಿತರೆ ಸಮಾಜದ ಅಭಿವೃದ್ಧಿಗೆ ಪೂರಕವಾದ ಆವಿಷ್ಕಾರಗಳನ್ನು ಕೊಡುಗೆಯಾಗಿ ನಮ್ಮ ಯುವ ಸಂಶೋಧಕರು ನೀಡುವುದಕ್ಕೆ ಸಾಧ್ಯ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರೀಯ ವಿಶ್ವವಿದ್ಯಾನಿಲಯದ ಅಧ್ಯಾಪಕ ಪ್ರೊ. ನಾಗಲಿಂಗಮ್ ಮಾತನಾಡಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆರಂಭವಾಗಿ 75 ವರ್ಷಗಳಾಗಿವೆ. ಅಂದಿನಿಂದ ಇಂದಿನವರೆಗೂ ಹಲವು ಆಯಾಮಗಳಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಉತ್ತಮ ಗೊಳಿಸಲು ಸಹಕರಿಸಿದೆ. ವಿದ್ಯಾರ್ತಿಗಳು ವಿಭಿನ್ನ ರೀತಿಯಲ್ಲಿ ಚಿಂತಿಸಲು ಸಹ ಸಹಾಯವಾಗಿದೆ ಎಂದರು.
ಎಬಿವಿಪಿ ತನ್ನ ಕಾರ್ಯಕರ್ತರಿಗೆ ಉತ್ತಮ ನಾಯಕತ್ವ ಗುಣಗಳ ಜೊತೆಗೆ ಸಮಾಜ ಮುಖಿ, ದೇಶಹಿತದ ಕಾಯಕದಲ್ಲಿ ತೊಡಗಿಸಿಕೊಳ್ಳಲು ಪ್ರೇರಕವಾಗಿದೆ. ಹಾಗಾಗಿ ಎಬಿವಿಪಿ ಕಾರ್ಯಕರ್ತರನ್ನು ಸಮಾಜದಲ್ಲಿ ನೋಡುವ ರೀತಿ ಕೂಡ ಬದಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಾತನಾಡಿದ ಆರ್.ಎಲ್. ರಮೇಶ್ ಬಾಬು, ಎಲ್ಲಾ ಕ್ಷೇತ್ರದಲ್ಲೂ ಬೆಳವಣಿಗೆ ಆದರೆ ಮಾತ್ರ ನಮ್ಮ ಭಾರತ ಉನ್ನತ ಸ್ಥಾನಕ್ಕೆ ತಲುಪುತ್ತದೆ. ನಮ್ಮ ಆಲೋಚನೆ ದೊಡ್ಡದಾಗಿದ್ದಾಗ ಮಾತ್ರ ನಾವು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ, ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತ ಮಟ್ಟದ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡಿದರೆ ಖಂಡಿತ ಆ ಸ್ಥಾನವನ್ನು ಪಡೆಯಲು ಯಶಸ್ವಿಯಾಗುತ್ತಾರೆ ಎಂದರು.