ಗಾಂಧೀಜಿಯವರ ಕೆಲವು ನಿಲುವುಗಳು ಇಂದಿಗೂ ನಿಗೂಢ

| Published : Oct 03 2023, 06:00 PM IST

ಗಾಂಧೀಜಿಯವರ ಕೆಲವು ನಿಲುವುಗಳು ಇಂದಿಗೂ ನಿಗೂಢ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಸ್ವಾತಂತ್ರ್ಯದ ಯಶಸ್ಸಿನ ಜೊತಗೇ ದೇಶ ವಿಭಜನೆಯ ಹೊಣೆಗಾರಿಕೆಯನ್ನೂ ಗಾಂಧೀಜಿ ಹೆಗಲಿಗೆ ಕಟ್ಟಬೇಕು: ಸಿರನೂರಕರ
ಭಾರತ ಸ್ವಾತಂತ್ರ್ಯದ ಯಶಸ್ಸಿನ ಜೊತಗೇ ದೇಶ ವಿಭಜನೆಯ ಹೊಣೆಗಾರಿಕೆಯನ್ನೂ ಗಾಂಧೀಜಿ ಹೆಗಲಿಗೆ ಕಟ್ಟಬೇಕು: ಸಿರನೂರಕರ ಕನ್ನಡಪ್ರಭ ವಾರ್ತೆ ಕಲಬುರಗಿ ಮಹಾತ್ಮ ಗಾಂಧೀಜಿ ಸಹಸ್ರಮಾನದ ಪ್ರಭಾವಿ ಮಹಾತ್ಮ ಎಂಬುದರಲ್ಲಿ ದೂಸ್ರಾ ಮಾತಿಲ್ಲ, ಆದರೆ, ದೇಶಕ್ಕೆ ಆಪತ್ತು ತಂದೊಡ್ಡಿದಂತಹ ಅವರ ಕೆಲವು ನಿಲುವುಗಳು ಇಂದಿಗೂ ನಿಗೂಢ ಎಂದಿರುವ ಖ್ಯಾತ ಪತ್ರಕರ್ತ, ಸಂಶೋಧಕ, ಇತಿಹಾಸಕಾರ ಡಾ. ಶ್ರೀನಿವಾಸ ಸಿರನಕೂರ್‌ ದೇಶದ ಸ್ವಾತಂತ್ರ್ಯ ಹೋರಾಟದ ಶ್ರೇಯಸ್ಸಿನ ಜೊತಗೇ ದೇಶ ವಿಭಜನೆಯ ಹೊಣೆಗಾರಿಕೆಯನ್ನೂ ಗಾಂಧೀಜಿ ಹೆಗಲಿಗೆ ಕಟ್ಟಬೇಕು ಎಂದು ಪ್ರತಿಪಾದಿಸಿದ್ದಾರೆ. ಇಲ್ಲಿನ ಶತಮಾನ ಕಂಡ ನೂತನ ವಿದ್ಯಾಲಯ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮ ಗಾಧೀಜಿ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿದರು. ಭಾರತ ಹೊರತು ಪಡಿಸಿ ಹೊರಗಿನ ರಾಷ್ಟ್ರಗಳಿಗೂ ಗಾಂಧೀಜಿ ತಮ್ಮ ಪ್ರಭಾವ ಬೀರಿದವರು. ಗಾಂಧೀಜಿ ಪ್ರಣೀತ ತತ್ವ, ಸಿದ್ಧಾಂತಗಳು ನೆಲ್ಸನ್‌ ಮಂಡೇಲಾ, ಮಾರ್ಟಿನ್‌ ಲೂಥರ್‌ ಕಿಂಗ್‌ ಜ್ಯೂನಿಯರ್‌ ಇವರಂತಹ ವ್ಯಕ್ತಿಗಳ ಮೇಲೂ ಪ್ರಭಾವ ಬೀರಿದ್ದಿದೆ. ಆದರೆ, ಭಾರತ ದೇಶದ ಅಖಂಡತೆ, ಇಲ್ಲಿನ ವ್ಯವಹಾರಗಳ ವಿಚಾರ ಬಂದಾಗ ಗಾಂಧೀಜಿ ಬಹುಮತಕ್ಕೆ ಮನ್ನಣೆ ನೀಡದೆ ತಮ್ಮದೇ ಆದಂತಹ ನಿಲುವು ಕೈಗೊಂಡಿದ್ದರಿಂದ ದೇಶ ಇಂದಿಗೂ ನರಳುವಂತಾಗಿದೆ ಎಂದರು. ಮುಸ್ಲೀಂ ತುಷ್ಟೀಕರಣದಲ್ಲಿ ಎಲ್ಲರಿಗಿಂತ ಮುಂದಿದ್ದ ಗಾಂಧೀಜಿ: ದೇಶ ವಿಭಜನೆಯಾದಲ್ಲಿ ಪಾಕಿಸ್ತಾನದಲ್ಲಿ ಒಬ್ಬರೂ ಹಿಂದು ಇರಬಾರದು, ಭಾರತದಲ್ಲಿ ಒಬ್ಬರು ಮುಸ್ಲೀಮರು ಇರಬಾರದು, ಹಾಗೆ ವಿಭಜನೆಯಾಗಲಿ ಎಂದು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ ಅವರೇ ಹೇಳಿದ್ದರೂ ಅದನ್ನು ಪರಿಗಣಿಸದೆ ಗಾಂಧೀಜಿ ಧರ್ಮ ಆದಾರದಲ್ಲಿ ಮಹಾನ್‌ ಭಾರತ ದೇಶ ವಿಭಜನೆ ಮಾಡಿದರು. ಇದರಿಂದ ಇಂದಿಗೂ ದೇಶ ಭಾರಿ ಬೆಲೆ ತೆರುವಂತಾಗಿದೆ ಎಂದರು. ಗಾಂಧೀಜಿಯವರನ್ನು ಪ್ರಜಾಪ್ರಭುತ್ವವಾಗಿ ಎನ್ನುತ್ತಾರೆ. ಆದರೆ, ದೇಶಕ್ಕೆ ಸ್ವಾತಂತ್ರ್ಯ ಬಂದಾಕ್ಷಣ ಮೊದಲ ಪ್ರಧಾನಿ ಯಾರಾಗಬೇಕುನ್ನುವ ವಿಚಾರದಲ್ಲಿ ಆಗ ದೇಶದಲ್ಲಿದ್ದಂತಹ 13 ಕಾಂಗ್ರೆಸ್‌ ಸಮಿತಿಗಳಲ್ಲಿ 12 ವಲ್ಲಭಭಾಯಿ ಪಟೇಲರ ಹೆಸರು ಹೇಳಿದ್ದರೂ ಕೂಡಾ ಅದನ್ನು ಕಡೆಗಣಿಸಿ, ಗಾಂಧೀಜಿಯವರು ನೆಹರು ಹೆಸರನ್ನೇ ಹೇಳಿ ಪ್ರಧಾನಿ ಪಟ್ಟ ಕಟ್ಟಿದ್ದು ಯಾಕೆ? ಇಲ್ಲೇಕೆ ಪ್ರಜಾಪ್ರಭುತ್ವದ ಮೂಲ ಸಂರಚನೆಯಾದಂತಹ ಬಹಮತಕ್ಕೆ ಗಾಧೀಜಿ ಮಾನ್ಯತೆ ನೀಲಿಲ್ಲ? ಎಂಬುದೇ ಇಂದಿಗೂ ನಿಗೂಢ ಸಂಗತಿ ಎಂದರು. ಮುಸ್ಲಿಂ ತುಷ್ಟೀಕರಣ ಮಾಡುವಲ್ಲಿ ಗಾಂಧೀಜಿ ಒಂದು ಹೆಜ್ಜೆ ಮುಂದೆ ಇದ್ದರು ಎಂಬುದು ಅವರ ಪತ್ರಗಳು, ಅವರು ದೇಶದ ಅನೇಕ ಘಟನೆಗಳ ಕುರಿತಂತೆ ತಳೆದ ನಿಲುವುಗಳಲ್ಲೇ ಸ್ಪಷ್ಟವಾಗಿದೆ ಎಂದು ಅನೇಕ ದಾಖಲೆಗಳನ್ನು ಉಲ್ಲೇಖಿಸಿದ ಡಾ. ಸಿರನೂರಕರ್‌ ಇಡೀ ಹಿಂದೂಸ್ತಾನದ ಜನ ಮುಸ್ಲಿಂ ಆಡಳಿತದ ಮಾತಿಗೆ ಒಪ್ಪಿಗೆ ಸೂಚಿಸಿ, ನಿಜಾಂ ಅರಸರು ಆಡಳಿತ ನಡೆಸಲಿ, ಸಾಮಂತರೆಲ್ಲರೂ ಅವರಿಗೆ ಅಧೀನರಾಗಲಿ ಎಂದು ಗಾಂಧೀಜಿ ತಮ್ಮ ಪತ್ರಿಕೆಗಳಲ್ಲಿ ಅಭಿಮತ ಮಂಡಿಸಿದ್ದಿದೆ. ಇದು ಯಾಕೆ ಹೀಗೆ? ಎಂಬುದು ಈಗಲೂ ಗೊತ್ತಾಗುತ್ತಿಲ್ಲ ಎಂದು ಹಲವು ವಿಷಯಗಳಲ್ಲಿನ ಗಾಂಧೀಜಿ ದ್ವಂದ್ವ ನಿಲುವುಗಳನ್ನು ಪಟ್ಟಿ ಮಾಡಿದರು. ಪಾಕಿಸ್ತಾನ ವಿಭಜನೆಗೆ ಧಾರ್ಮಿಕ ಕಾರಣ ನೀಡುತ್ತ ಮೊಹ್ಮದ್‌ ಅಲಿ ಜಿನ್ನಾ ಅವರನ್ನೇ ಅಲ್ಲಿನ ಮೊದಲ ಪ್ರಧಾನಿಯನ್ನಾಗಿಸಲು, ಮುಖಂಡರನ್ನಾಗಿಸಲು ಮೌಂಟ್‌ ಬ್ಯಾಟನ್‌ಗೆ ಗಾಂಧೀಜಿ ಪ್ರಭಾವ ಬೀರಿದ್ದರೆಂದೂ ಇತಿಹಾಸದಲ್ಲಿ ದಾಖಲಾಗಿದೆ ಎಂದು ಸಿರನೂರಕರ್‌ ಹೇಳಿದರು. ಭಾರತದ ಹೆಣ್ಮಕ್ಕಳ ಅಹವಾಲಿಗೆ ಪ್ರಾಣತ್ಯಾಗದ ಉತ್ತರ ನೀಡಿದ್ರು: ದೇಶದ ಜನರು, ಯುವಕ, ಯುವತಿಯರು ಅನೇಕರು ಪತ್ರ ಬರೆದು ಹಿಂಸೆಯಾಗುತ್ತಿದೆ, ಹೇಗೆ ಸಹಿಸೋಣವೆಂದು ಗಾಂಧೀಜಿಯವರಿಗೆ ಕೇಳಿದಾಗ ಉಸಿರು ಬಿಗಿಡಿ ಹಿಡಿದು ನಾಲಿಗೆ ಕುಚ್ಚಿಕೊಂಡು ಪ್ರಾಣ ಹೋಗುವವರೆಗೂ ಸುಮ್ಮನಿರಿ ಎಂದು ಹೇಳಿದ್ದಾರೆ ಗಾಂಧೀಜಿ. ಮಹಾತ್ಮನ ಈ ಮಾತು ನಾವು ಹೇಗೆ ಸಮರ್ಥಿಸಲು ಸಾಧ್ಯ? ಎಂದು ಪ್ರಶ್ನಿಸಿದರು. ಗಾಂಧೀಜಿ ಸಿದ್ಧಾಂತಗಳಲ್ಲಿ ಸಾಕಷ್ಟು ಭಿನ್ನಮತ ಹೊಂದಿದ್ದರೂ ಕೂಡಾ ನೇತಾಜಿ, ಬೋಸ್‌ ಗಾಂಧೀಜಿಯವರನ್ನು ದೇಶದ ರಾಷ್ಟ್ರಪಿತ ಎಂದರಲ್ಲದೆ, ರವೀಂದ್ರನಥರು ಅವರಿಗೆ ಮಹಾತ್ಮ ಎಂದರು. ಸಹಸ್ರಮಾನದ ವ್ಯಕ್ತಿ ಗಾಂಧೀಜಿ ಎಂಬುದರಲ್ಲಿ ಯಾವುದೇ ವಿವಾದವಲ್ಲವಾದರೂ ಅವರು ಮುಸ್ಲಿಂ ತುಷ್ಟೀಕರಣ, ದೇಶ ವಿಭಜನೆ, ಮೊದಲ ಪ್ರಧಾನಿ ವಿಚಾರದಲ್ಲಿ ತಳೆದ ಹಲವು ನಿಲುವುಗಳು ಇಂದಿಗೂ ಭಾರತ ದೇಶ ಬೆಲೆ ತೆರುವಂತೆ ಮಾಡಿವೆ ಎಂದರು. ಲಾಲ್‌ ಬಹದ್ದೂರ್‌ ಶಾಸ್ತ್ರೀಯವರನ್ನು ದೇಶದ ಪ್ರಗತಿಯ ವಿಧಾತ ಎಂದು ಬಣ್ಣಿಸಿದ ಅವರು ಜೈ ಜವಾನ್‌, ಜೈ ಕಿಸಾನ್‌ ಘೋಷಣೆಗಳು ಇಂದಿಗೂ ತಾರಕ, ಪ್ರೇರಕ ಮಂತ್ರವಾಗಿವೆ. ಇಂದಿನ ನಾಯಕತ್ವ ಶಾಸ್ತ್ರೀಜಿಯವರ ದಾರಿಯಲ್ಲೇ ಸಾಗುತ್ತಿದೆ, ಹೀಗಾಗಿಯೇ ಭಾರತ ವಿಶ್ವಗುರುವಾಗುವ ದಾರಿಯಲ್ಲಿದೆ ಎಂದರು. ಎನ್‌ವಿ ಶಂಸ್ಥೆಯ ಅಧ್ಯಕ್ಷ ಡಾ. ಗೌತಮ ಜಾಗಿರ್ದಾರ್‌, ಕಾರ್ರಯದರ್ಶಿ ಅಭಜಿತ ದೇಶಮುಖ, ದೀಲಿಪ್‌ ಬಾಲಘಾಟ್‌, ಪ್ರಾಚಾರ್ಯ ಶ್ರೀಕಾಂತ ಎಕ್ಕೇಳ್ಳಿಕರ್‌ ವೇದಿಕೆಯಲ್ಲಿದ್ದರು. ಡಾ. ವಿಷ್ಣು ಗುಂಡಗುರ್ತಿ ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ಗಂಧೀಜಿ ಕುರಿತಾದ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ಕಾಲೇಜಿನ ಮಕ್ಕಳಿಗೆ ಬಹಬಮಾನ ವಿತರಿಸಲಾಯ್ತ. ಬಾಕ್ಸ್‌.. ಕಲಬುರಗಿಗೂ ಗಾಂಧೀಜಿಗೂ 1820ರಿಂದಲೇ ನಂಟಿತ್ತು ಗಾಧೀಜಿಯವರ ಕಲಬುರಗಿ ನಂಟಿನ ಬಗ್ಗೆ ಮಾತನಾಡಿದ ಸಿರನೂರಕರ್‌, ಕಲಬುರಗಿ ಕೋಮು ಗಲಭೆಯನ್ನು ಗಾಂಧಿಜಿ 1920ರಲ್ಲೇ ತಮ್ಮ ಯಂಗ್‌ ಇಂಡಿಯಾ, ಹರಿಜನ ಪತ್ರಿಕೆಗಳಲ್ಲಿ ಖಂಡಿಸಿ ಬರೆದಿದ್ದರು. 1927ರ ಮಾ.23ರಂದು ಬೇದು ಹೋದವರು, ಎನ್‌ವಿ ಕಾಲೇಜಿನ ಕನ್ಯಾ ಶಾಲೆಯ ಅರಳಿ ಕಟ್ಟೆಯ ಮೇಲೆ ಕುಳಿತು ಮಹಿಳಾ ಸ್ವಯಂ ಸೇವಕರ ಸಭೆ ಮಾಡಿದ್ದರೆಂದು ಹಳೆಯ ನೆನಪುಗಳನ್ನು ಮೆಲಕು ಹಾಕಿದರು. ಕಲಬುರಗಿ, ಯಾದಗಿರಿ, ಸುರಪುರ ಸೇರಿದಂತೆ ಹಲವೆಡೆ ಗಾಂಧೀಜಿ ವಿಚಾರಗಳನ್ನು ಹಂಚುವ ಕೆಲಸವಾಗಿತ್ತು, ಅದಕ್ಕಾಗಿಯೇ ಗಾಂಧೀಜಿ ಹೆಸರಲ್ಲೇ ಗ್ರಂಥಾಲಯಗಳಿದ್ದವು. ಈ ಭಾಗದಲ್ಲಿ ಗಾಂಧೀಜಿ ಪ್ರಭಾವ ತುಂಬಾ ಇದೆ ಎಂದರಲ್ಲದೆ ಗಾಂಧೀಜಿ ಬಂದು ಹೋಗಿರುವ ಎನ್‌ವಿ ಕನ್ಯಾ ಶಾಲೆಯ ಈ ನೆಲ ಪರಮ ಪವಿತ್ರ, ಇಲ್ಲಿ ಪುತ್ಥಳಿ ಸ್ಥಾಪನೆ ಅತ್ಯಂತ ಯೋಗ್ಯ ಕೆಲಸವೆಂದರು.