ಸಾರಾಂಶ
ಪ್ರೇಮಿಗಳ ದಿನಾಚರಣೆ ದಿನ ಯಾರಾದರೂ ಯುವಕರು ಗುಂಪು ಗುಂಪಾಗಿ ಆಚರಣೆ ಮಾಡುವುದು ಕಂಡು ಬಂದರೆ ಶ್ರೀರಾಮ ಸೇನೆ ಕಾರ್ಯಕರ್ತರು ಖಂಡಿಸಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ಮುಂದಾಗಬೇಕಾಗುತ್ತದೆ ಎಂದು ಶ್ರೀರಾಮಸೇನೆ ರಾಜ್ಯ ಕಾರ್‍ಯಕಾರಿಣಿ ಸದಸ್ಯ ಹಾಗೂ ಜಿಲ್ಲಾಧ್ಯಕ್ಷ ಹೇಮಂತ್ ಜಾನೆಕೆರೆ ಎಚ್ಚರಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಶ್ರೀರಾಮಸೇನೆ ರಾಜ್ಯ ಕಾರ್‍ಯಕಾರಿಣಿಯ ಹೇಮಂತ್ ಜಾನೆಕೆರೆ ಎಚ್ಚರಿಕೆಕನ್ನಡಪ್ರಭ ವಾರ್ತೆ ಹಾಸನ
ಯುವ ಪೀಳಿಯನ್ನು ಉತ್ತಮ ದಾರಿಗೆ ಕೊಂಡೂಯ್ಯುವ ನಿಟ್ಟಿನಲ್ಲಿ ಪ್ರೇಮಿಗಳ ದಿನಾಚರಣೆ ದಿನ ಯಾರಾದರೂ ಯುವಕರು ಗುಂಪು ಗುಂಪಾಗಿ ಆಚರಣೆ ಮಾಡುವುದು ಕಂಡು ಬಂದರೆ ಶ್ರೀರಾಮ ಸೇನೆ ಕಾರ್ಯಕರ್ತರು ಖಂಡಿಸಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ಮುಂದಾಗಬೇಕಾಗುತ್ತದೆ ಎಂದು ಶ್ರೀರಾಮಸೇನೆ ರಾಜ್ಯ ಕಾರ್‍ಯಕಾರಿಣಿ ಸದಸ್ಯ ಹಾಗೂ ಜಿಲ್ಲಾಧ್ಯಕ್ಷ ಹೇಮಂತ್ ಜಾನೆಕೆರೆ ಎಚ್ಚರಿಸಿದರು.ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಶ್ರೀ ರಾಮ ಸೇನಾ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಫೆ. ೧೪ ರಂದು ಗೋ ಆಲಿಂಗನ ಮತ್ತು ಮಾತಾ, ಪಿತೃ ಪ್ರಜಾ ದಿನ ಹಾಗೂ ವುಲ್ಮಾಮ ದಾಳಿಯಲ್ಲಿ ಹುತಾತ್ಮ ವೀರ ಯೋಧರಿಗೆ ಸಂತಾಪ ನಮನಗಳನ್ನು ನಡೆಸಲಾಗುತ್ತಿದೆ ಎಂದರು.
ಸನಾತನ ಹಿಂದು ಧರ್ಮದ ಉಳಿವಿಗಾಗಿ ಹಲವಾರು ವರ್ಷ ನಿರಂತರವಾಗಿ ಗುಡಿ ಗೋಪುರಗಳ ಉಳಿವಿಗಾಗಿ ಮತಾಂತರ, ಲವಜಿಹಾದ್, ಗೋ ಹತ್ಯೆ ಇಂತಹ ಹಲವಾರು ಧರ್ಮ ವಿರೋಧಿ ಚಟುವಟಿಕೆಗಳನ್ನು ವಿರೋಧಿಸುತ್ತ ಶ್ರೀ ರಾಮಸೇನೆ ಸಂಘಟನೆ ನಿರಂತರವಾಗಿ ಹೋರಾಟ ನಡೆಸುತ್ತ ಬಂದಿದೆ ಎಂದು ಹೇಳಿದರು.ಸನಾತನ ಹಿಂದೂ ಧರ್ಮವು ಯುವ ಪೀಳಿಗೆಯನ್ನು ರಕ್ಷಿಸುವ ಹಾಗೂ ಧರ್ಮ ಪಾಲನೆ ಮಾಡುವಂತೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನಡೆಸುತ್ತಿದ್ದೇವೆ. ಈ ಹಿನ್ನೆಲೆ ಫೆ.೧೪ರ ಬುಧವಾರ ಪ್ರೇಮಿಗಳ ದಿನ ಯುವಕರು ಗುಂಪು ಗುಂಪಾಗಿ ಆಚರಣೆ ಮಾಡಿದಲ್ಲಿ ಶ್ರೀರಾಮಸೇನೆ ಅದನ್ನು ಖಂಡಿಸಿ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶ್ರೀರಾಮಸೇನೆಯ ಅರಸೀಕೆರೆ ತಾಲೂಕು ಎಸ್.ವರುಣ್, ಹಾಸನ ನಗರ ಅಧ್ಯಕ್ಷ ನಿತಿನ್, ತಾಲೂಕು ಅಧ್ಯಕ್ಷ ಪ್ರದೀಪ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ನಂದನ್, ದೀಪು, ಸಚಿನ್ ಇದ್ದರು.ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮಸೇವೆ ಕಾರ್ಯಕರ್ತರು.