ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಮಕ್ಕಳಿಗೆ ಶಾಲೆ ಅರಮನೆಯಂತಿರಬೇಕು. ಶಿಕ್ಷಕರು ಸರ್ಕಾರಿ ಶಾಲೆಯನ್ನು ತಮ್ಮ ಕುಟುಂಬದಂತೆ ಸ್ವೀಕರಿಸಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.ಹೋಬಳಿಯ ತುಳಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲ್ಲಿಜರುಗಿದ ಲಕ್ಷ್ಮೀಪುರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ, ಕನ್ನಡ ಶಾಲೆ ಮುಚ್ಚುವ ಹಂತ ತಲುಪುತ್ತಿರುವುದು ಬೇಸರ. ಸರ್ಕಾರಿ ಶಾಲೆಯಲ್ಲಿ ಎಲ್ಲವೂ ಉಚಿತವಾಗಿ ಸಿಗಲಿದೆ. ಇದರ ಪ್ರಯೋಜನ ಎಲ್ಲಾ ಮಕ್ಕಳಿಗೆ ಸಿಗಬೇಕು ಎಂದರು.
ಶಿಕ್ಷಕರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಸರ್ಕಾರಿ ಶಾಲೆಯಲ್ಲಿ ಸಿಗುವ ಸವಲತ್ತು ತಿಳಿಸಬೇಕು. ಸರ್ಕಾರಿ ನೌಕರರು ಕೂಡ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ತಿಳಿಸಿದರು.ಕ್ಲೇ ಮಾಡಲಿಂಗ್, ಕಂಠಪಾಠ ಸ್ಪರ್ಧೆ, ನೃತ್ಯ, ಮಿಮಿಕ್ರಿ, ಛದ್ಮವೇಷ, ಕಥೆ ಹೇಳುವುದು ಮತ್ತಿತರ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಜೆಡಿಎಸ್ ಮುಖಂಡ ಶೇಖರ್, ಐನೋರಹಳ್ಳಿ ಮಲ್ಲೇಶ್, ಶಿಕ್ಷಣ ಸಂಯೋಜಕ ನವೀನ್‌ಕುಮಾರ್, ಮುಖ್ಯಶಿಕ್ಷಕ ಕೆ.ಎಸ್. ಮಂಜುನಾಥ್, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಸ್.ಆರ್.ಆನಂದಕುಮಾರ್, ಕಾರ್ಯದರ್ಶಿ ಎಲ್.ಎಸ್. ಧರ್ಮಪ್ಪ, ಪದ್ಮೇಶ್, ಲಕ್ಷ್ಮಣಗೌಡ, ಮಲ್ಲಿಕಾರ್ಜುನ್, ಗಿರಿಜಾ, ವಿವಿಧ ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಇದ್ದರು.
ದಕ್ಷಿಣ ವಲಯ ಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆಮಂಡ್ಯ: ತಾಲೂಕಿನ ಹಳೇ ಬೂದನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ದಕ್ಷಿಣ ವಲಯ ಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿ ಅಬಕಾರಿ ಇಲಾಖೆ ನಿವೃತೃ ಅಧೀಕ್ಷಕ ಬಿ.ಟಿ.ಅಂಕಯ್ಯ ಮಾತನಾಡಿ, ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆ ಹೊರ ತರುವ ಸೂಕ್ತ ವೇದಿಕೆಯಾಗಿದೆ ಎಂದು ಬಣ್ಣಿಸಿದರು. ಗ್ರಾಮದ ದಾನಿಗಳು ನೀಡಿರುವ ಭೂಮಿಯಿಂದಾಗಿ ವಿಶಾಲ ಶಾಲಾ ಮೈದಾನ ನಿರ್ಮಾಣವಾಗಿದೆ ಎಂದರು. ಪ್ರತಿಭಾ ಕಾರಂಜಿಗೆ 15ಕ್ಕೂ ಹೆಚ್ಚು ಶಾಲೆಗಳ 400 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವೇದಿಕೆಯಲ್ಲಿ ಮುಖಂಡರಾದ ಕಾರ್ತಿಕ್, ಶೀಲಾಶಿವಪ್ರಸಾದ್, ಕಾವೇರಿ ಬಳಗದ ಚಂದ್ರು, ಪಾಪಣ್ಣ, ನಿವೃತ್ತ ಪ್ರಾಧ್ಯಾಪಕ ಮಧುಕುಮಾರ್, ಹಿರಿಯ ವಿದ್ಯಾರ್ಥಿ ಬಿ.ಟಿ.ಕೃಷ್ಣಪ್ಪ, ಮುಖ್ಯಶಿಕ್ಷಕಿ ಸತ್ಯಭಾಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಿರೀಶ್ ಹಾಗೂ ಶಿಕ್ಷಕರು ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))