ಸಾರಾಂಶ
ಔರಾದ್ ಪಟ್ಟಣದ ಬಸವ ಗುರುಕುಲ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಹತ್ತನೇ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾಧವ ಬಿಜಾಪುರೆ ಮಾತನಾಡಿದರು.
ಔರಾದ್: ವಿದ್ಯಾರ್ಥಿಗಳು ನಿರ್ಧಿಷ್ಟ ಮಾನಸಿಕತೆಯಿಂದ ಹೊರಬಂದು ವಿಭಿನ್ನವಾಗಿ ಚಿಂತಿಸಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಮಾಧವ ಬಿಜಾಪುರೆ ಹೇಳಿದರು.
ಪಟ್ಟಣದ ಬಸವ ಗುರುಕುಲ ಪ್ರೌಢಶಾಲೆಯಲ್ಲಿ ಸೋಮವಾರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ ಹತ್ತನೇ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕಲ್ಪಿತ ಮನಸ್ಥಿತಿಯಿಂದ ಹೊರಬಂದು ಸ್ವಾತಂತ್ರ್ಯವ ಆಲೋಚನೆಗಳಿಗೆ ಮಹತ್ವ ನೀಡಿ ನಾವು ಬದಲಾದಾಗ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ ಎಂದರು.ಪ್ರಾಂಶುಪಾಲ ನವೀಲಕುಮಾರ ಉತ್ಕಾರ್, ಮನ್ಮತ್ತಪ್ಪ ಹುಗ್ಗೆ, ಮುಖ್ಯಶಿಕ್ಷಕಿ ನರ್ಮರಲ ಶೇರಿ, ಸಂಪನ್ಮೂಲ ಶಿಕ್ಷಕ ರಾಜಕುಮಾರ ಡೊಂಗ್ರೆ, ಪಂಡರಿನಾಥ ಪವಾರ್ ಮಾತನಾಡಿದರು.
ಮುಖ್ಯಗುರುಗಳಾದ ಇಂದುಮತಿ ಎಡವೆ, ಅಮರ ದ್ಯಾಡೆ, ಶಿಕ್ಷಕರಾದ ಸತೀಶ್ ಸೂರ್ಯವಂಶಿ, ಬಸವರಾಜ್ ಬಂತೆ, ಶರಣಪ್ಪ ನೌಬಾದೆ, ಶಿವಪುತ್ರ ಧರಣಿ, ನಾಗನಾಥ್ ಶಂಕು, ಸಂತೋಷ್ ಮೇತ್ರೆ ಸೇರಿದಂತೆ ಇತರರು ಇದ್ದರು.