ಟಿಎಪಿಸಿಎಂಎಸ್ ಚುನಾವಣೆ: 9 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತರು ಆಯ್ಕೆ

| Published : Oct 03 2025, 01:07 AM IST

ಟಿಎಪಿಸಿಎಂಎಸ್ ಚುನಾವಣೆ: 9 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತರು ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರ ತಾಲೂಕು ಟಿಎಪಿಸಿಎಂಎಸ್ ಸಂಸ್ಥೆ 12 ನಿರ್ದೇಶಕ ಸ್ಥಾನಗಳ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 9 ಮಂದಿ ಆಯ್ಕೆಯಾಗುವ ಮೂಲಕ ಸಂಸ್ಥೆಯ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಹಾಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯಗೆ ತೀವ್ರ ಮುಖಭಂಗವಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕು ಟಿಎಪಿಸಿಎಂಎಸ್ ಸಂಸ್ಥೆ 12 ನಿರ್ದೇಶಕ ಸ್ಥಾನಗಳ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 9 ಮಂದಿ ಆಯ್ಕೆಯಾಗುವ ಮೂಲಕ ಸಂಸ್ಥೆಯ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಹಾಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯಗೆ ತೀವ್ರ ಮುಖಭಂಗವಾಗಿದೆ.

ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ- 9 ಹಾಗೂ ಕಾಂಗ್ರೆಸ್-ರೈತಸಂಘ ಬೆಂಬಲಿತ 3 ಮಂದಿ ಚುನಾಯಿತರಾಗಿದ್ದಾರೆ. ಅಧಿಕ ಸ್ಥಾನಗಳನ್ನು ಗೆಲ್ಲಿಸಿಕೊಡುವ ಮೂಲಕ ಕ್ಷೇತ್ರದ ಮತದಾರರು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಕೈ ಬಲಪಡಿಸಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತರಾದ ಪಿ.ಎಲ್.ಆದರ್ಶ- 2175, ಹಿಂದುಳಿದ ವರ್ಗ ಬಿ ಕ್ಷೇತ್ರ ಚಿಕ್ಕಾಡೆ ಗಿರೀಶ್ - 2061, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಎ.ಕೃಷ್ಣ-1762, ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರ ಪ್ರೇಮ ಪುಟ್ಟೇಗೌಡ-1746, ಪರಿಶಿಷ್ಠ ಪಂಗಡ ಕ್ಷೇತ್ರದಿಂದ ನರಸಿಂಹನಾಯ್ಕ-1363 ಆಯ್ಕೆಯಾಗಿದ್ದಾರೆ. ರೈತಸಂಘ ಕಾಂಗ್ರೆಸ್ ಬೆಂಬಲಿತ ಎಚ್.ಎನ್.ಚಿಟ್ಟಿಬಾಬು-1914, ಸುನಂದಮ್ಮ-1431, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಹಾಳಯ್ಯ-1500 ಗೆಲುವು ಸಾಧಿಸಿದ್ದಾರೆ.

ಎ ತರಗತಿಯ ನಾಲ್ಕು ಕ್ಷೇತ್ರದಲ್ಲೂ ಜೆಡಿಎಸ್ ಬೆಂಬಲಿತರಾದ ಸಿ.ಎಂ.ಕಿರಣ್ ಕುಮಾರ್- 18, ಸಿ.ಎಸ್.ಗೋಪಾಲಗೌಡ - 17, ವಡ್ಡರಹಳ್ಳಿ ವಿ.ಎಸ್.ನಿಂಗೇಗೌಡ - 17, ಎಂ.ಸ್ವಾಮಿ - 17 ಮತ ಪಡೆದು ಗೆಲುವು ಸಾಧಿಸಿದ್ದಾರೆ.

ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿ ಮಾತನಾಡಿ, ಚುನಾವಣೆಯಲ್ಲಿ ಕ್ಷೇತ್ರದ ಷೇರುದಾರ ಮತದಾರರು ಜೆಡಿಎಸ್ ಬೆಂಬಲಿತರನ್ನು ಅಧಿಕ ಮತಗಳನ್ನು ನೀಡುವ ಮೂಲಕ ಗೆಲ್ಲಿಸಿ ಸಂಘದ ಅಧಿಕಾರ ಚುಕ್ಕಾಣೆ ಹಿಡಿಯಲು ಸಹಕಾರ ನೀಡಿದ ಜನತೆ ಅಭಿನಂಧನೆಗಳನ್ನು ಸಲ್ಲಿಸುತ್ತೇನೆ ಎಂದರು.

ಕ್ಷೇತ್ರದ ಮತದಾರರು ಕ್ಷೇತ್ರದಲ್ಲಿ ನಡೆದ ಎಲ್ಲಾ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಗೆಲ್ಲಿಸಿ ಅಧಿಕಾರ ಹಿಡಿಯಲು ಸಹಕರಿಸಿದ್ದಾರೆ. ಆಯ್ಕೆಯಾದ ಎಲ್ಲಾ ನಿರ್ದೇಶಕರು ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ದಿಗೆ ಶ್ರಮಿಸಬೇಕು ಎಂದರು.

ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಬಳಿಕ ಕ್ಷೇತ್ರದಲ್ಲಿ ನಡೆದ ಲೋಕಸಭೆ, ಮನ್‌ಮುಲ್, ಪಿಎಲ್‌ಡಿ ಬ್ಯಾಂಕ್, ಡೇರಿ, ಸೊಸೈಟಿ ಹಾಗೂ ಟಿಎಪಿಸಿಎಂಎಸ್ ಚುನಾವಣೆಗಳಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಮೂಲಕ ಮತದಾರರು ಸಿ.ಎಸ್.ಪುಟ್ಟರಾಜು ಅವರ ಕೈಬಲಪಡಿಸಿದ್ದಾರೆ ಎಂದರು.

ಈ ಗೆಲುವು ಸ್ಥಳೀಯವಾಗಿ ನಾಯಕತ್ವ ಕಟ್ಟಿಕೊಳ್ಳಲು ಸಹಕಾರ ನೀಡಿದೆ. ಈ ಫಲಿತಾಂಶದಿಂದ ಸ್ಥಳೀಯ ನಾಯಕತ್ವ ರೂಪಿಸಿಕೊಳ್ಳಲು ಸಹಕಾರಿಯಾಗಿವೆ. ಚುನಾವಣೆಯಲ್ಲಿ ಆಯ್ಕೆಯಾಗಿರುವ ಎಲ್ಲಾ ನಿರ್ದೇಶಕರು ಸಹ ಮುಂದೆ ಸಂಘದ ಅಭಿವೃದ್ಧಿಗೆ ಪೂಕರವಾಗಿ ಕೆಲಸ ಮಾಡುವ ಮೂಲಕ ಸಿ.ಎಸ್.ಪುಟ್ಟರಾಜು ಅವರ ಕೈಬಲಪಡಿಸಬೇಕು ಸಲಹೆ ನೀಡಿದರು.

ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಸೇರಿದಂದೆ ಜೆಡಿಎಸ್ ಬೆಂಬಲಿತ ಎಲ್ಲಾ ನಿರ್ದೇಶಕರು, ಪಕ್ಷದ ಮುಖಂಡರು ಕಾರ್‍ಯಕರ್ತರು ಹಾಜರಿದ್ದರು.

ಹಾಲಿ ಅಧ್ಯಕ್ಷನಿಗೆ ಸೋಲು, ಮಾಜಿ ನೌಕರನಿಗೆ ಗೆಲುವು

ಪಾಂಡವಪುರ: ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡಿ.ಶ್ರೀನಿವಾಸ್ ಸೋಲು ಅನುಭವಿಸಿದರೆ, ಮಾಜಿ ನೌಕರ ಟಿ.ಎಸ್.ಹಾಳಯ್ಯ ಗೆಲುವು ಸಾಧಿಸುವ ಮೂಲಕ ನೌಕರರೊಬ್ಬರು ನಿರ್ದೇಶಕರಾಗಿ ಆಯ್ಕೆಯಾಗಿ ಹೊಸ ದಾಖಲೆ ಬರೆದರು.

ಎ ತರಗತಿಯಿಂದ ಸ್ಪರ್ಧಿಸಿದ್ದ ಉಳಿದ ಅಭ್ಯರ್ಥಿಗಳಾದ ಎಲ್.ಬಿ.ರವಿ 5 ಮತಗಳು, ಸಿ.ಎಸ್.ರಜನೀಕಾಂತ್ 4 ಮತಗಳು, ರಂಗಸ್ವಾಮಿ 5 ಮತಗಳು, ಎಸ್.ಕೆ.ಪ್ರಭಾಕರ್ 5 ಮತಗಳನ್ನು ಪಡೆದರು.

ಉಳಿದಂತೆ ಬಿ ತರಗತಿಯಿಂದ ಆರ್.ಚನ್ನಕೇಶವ 235, ಎಂ.ಚಿಕ್ಕಣ್ಣ 266 , ಕೆ.ಜೆ.ದುರ್ಗೇಶ್ 342, ಡಿ.ಕೆ.ದೇವೇಗೌಡ 1815, ಕೆಎಸ್.ನವಿನಾಯಕ 1035, ಬೊಮ್ಮರಾಜು 1456, ಎಸ್.ಎಲ್.ಮಂಜುನಾಥ 418, ಕೆ.ಎನ್.ಮಂಜುಳಾ 302, ಲಕ್ಷ್ಮಮ್ಮ 386, ಎಚ್.ಎಸ್.ಲಲಿತಾ 338, ವೀರಭದ್ರಸ್ವಾಮಿ 166, ಎಂ.ಬಿ.ಶೀಲಾ 134, ಸಿ.ಎಂ.ಶ್ರೀಕಾಂತ್ 1709, ಡಿ.ಶ್ರೀನಿವಾಸ 1700, ಎಸ್.ಪಿ.ಶ್ರೀನಿವಾಸ್ 1299, ಆರ್.ಸುಮಿತ್ರಾ 1239, ಎನ್.ಸೋಮಶೇಖರ 632, ಸಿ.ಬಿ.ಹರೀಶ್ 1444 ಮತಗಳನ್ನು ಪಡೆದು ಸೋಲು ಕಂಡರು.

ಚುನಾವಣೆಯಲ್ಲಿ ಒಟ್ಟು 4892 ಮತಗಳ ಪೈಕಿ 4244 ಮತಗಳು ಚಲಾವಣೆಗೊಂಡು ಶೇ.86.75ರಷ್ಟು ಮತದಾನ ನಡೆಯಿತು. ತಹಸೀಲ್ದಾರ್ ಬಸವರಡ್ಡೆಪ್ಪ ಚುನಾವಣಾಧಿಕಾರಿಯಾಗಿಯೂ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಚುನಾವಣೆ ಫಲಿತಾಂಶದ ನಂತರ ವಿಜೇತರಾದ ಜೆಡಿಎಸ್ ಬೆಂಬಲಿತ ನಿರ್ದೇಶಕರನ್ನು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಅಭಿನಂದಿಸಿದರು. ಹಾರೋಹಳ್ಳಿ ಗಿರೀಶ್ ಇತರರಿದ್ದರು.