ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಶಾಲೆಗಳಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ ಕಡ್ಡಾಯವಾಗಿ ನೈತಿಕ ಶಿಕ್ಷಣ ಕಲಿಸಿ, ಅವರು ಅನುಸರಿಸಬೇಕಾದ ಜವಾಬ್ದಾರಿಯನ್ನೂ ತಪ್ಪದೆ ತಿಳಿಸಿಕೊಡಿ ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಶಿಕ್ಷಣ ಇಲಾಖೆಗೆ ಸಲಹೆ ಮಾಡಿದರು.ನಗರದ ಕನ್ನಡ ಭವನದಲ್ಲಿ ನಿವೃತ್ತ ಡಿಡಿಪಿಐಟಿ.ಎಸ್.ಆಂಜನಪ್ಪನವರು ರಚಿಸಿರುವ ಮಕ್ಕಳನ್ನು ಬದುಕಲು ಬಿಡಿ ಕೃತಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಮಕ್ಕಳನ್ನು ನಾವು ಶೈಕ್ಷಣಿಕ ಕೂಲಿಗಳನ್ನಾಗಿ ಮಾಡುತ್ತಿದ್ದೇವೆ. ಅವರಿಗೆ ಪಠ್ಯದ ಜ್ಞಾನದಜೊತೆಗೆ ನೈತಿಕ ಶಿಕ್ಷಣ ಅತ್ಯಗತ್ಯವಾಗಿದೆ. ಸಂಸ್ಕಾರವಂತ ಮಕ್ಕಳನ್ನು ಶಾಲೆ, ಕಾಲೇಜುಗಳು ರೂಪಿಸುವುದು ಪ್ರಸ್ತುತ ದಿನದ ಅವಶ್ಯವಾಗಿದೆ ಎಂದು ಹೇಳಿದರು.ಇಂದಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಹಲವು ಆಕ್ಷೇಪಣೆಗಳಿವೆ. ಶಿಕ್ಷಕರಾಗಿ, ಶಿಕ್ಷಣ ಇಲಾಖೆ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಟಿ.ಎಸ್.ಆಂಜನಪ್ಪನವರೂ ತಮ್ಮ ಕೃತಿಯಲ್ಲಿ ಶೈಕ್ಷಣಿಕ ವ್ಯವಸ್ಥೆಯ ಲೋಪಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇಲಾಖೆ ಆತ್ಮಾವಲೋಕನ ಮಾಡಿಕೊಂಡುಇಂತಹ ಲೋಪಗಳನ್ನು ತಿದ್ದಿಕೊಳ್ಳಬೇಕಾದ ಅಗತ್ಯವಿದೆ. ಶಿಕ್ಷಣ ಇಲಾಖೆಗೆ ಸಮಾಜವನ್ನು ಕಟ್ಟುವ ದೊಡ್ಡ ಹೊಣೆಗಾರಿಕೆ ಇದೆ. ಶಿಕ್ಷಕರು, ಇಲಾಖೆ ಅಧಿಕಾರಿಗಳು ಎಚ್ಚರಿಕೆ, ಕಾಳಜಿಯಿಂದ ತಮ್ಮಕಾರ್ಯ ನಿರ್ವಹಿಸಬೇಕಾಗಿದೆ ಎಂದು ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಕೃತಿ ಕುರಿತು ಮಾತನಾಡಿದ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಟಿ.ಮುರಳಿಕೃಷ್ಣಪ್ಪ, ಸುದೀರ್ಘ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಟಿ.ಎಸ್.ಆಂಜನಪ್ಪನವರು ಶಾಲಾ ಮಕ್ಕಳನ್ನು ಸೂಕ್ಷ್ಮ ಮನಸ್ಸಿನಿಂದ ಗಮನಸಿದ್ದಾರೆ. ಶಿಕ್ಷಣ ಇಲಾಖೆಯ ಅಭಾಸಗಳನ್ನು ತಮ್ಮ ಮಕ್ಕಳನ್ನು ಬದುಕಲು ಬಿಡಿ ಕೃತಿಯಲ್ಲಿ ನಿಷ್ಠುರವಾಗಿ ಹೇಳಿದ್ದಾರೆ. ಅಧಿಕಾರದಲ್ಲಿದ್ದಾಗ ಹೇಳಲಾಗದನ್ನು ಈಗ ಹೇಳಿದ್ದಾರೆ. ಇವರ ಅಭಿಪ್ರಾಯಗಳನ್ನು ಇಲಾಖೆ ಗಂಭೀರವಾಗಿ ಪರಾಮರ್ಶಿಸಿ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು ಎಂಬುದು ನಮ್ಮೆಲ್ಲರ ಆಶಯ ಎಂದರು.ಡಾ.ಎಸ್.ನಾಗಣ್ಣಕೃತಿ ಬಿಡುಗಡೆ ಮಾಡಿ, ಟಿ.ಎಸ್.ಆಂಜನಪ್ಪನವರು ಕೃತಿಯಲ್ಲಿ ಇಲಾಖೆಯ ಕಟು ಸತ್ಯಗಳನ್ನು ಬಿಚ್ಚಿ ಹೇಳಿದ್ದಾರೆ. ಇಲಾಖೆ ಅಧಿಕಾರಿ ವರ್ಗ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ವಿದ್ಯೆಗೆ ಪ್ರಾಮುಖ್ಯತೆ ಇರುವ ಶಿಕ್ಷಣ ಇಲಾಖೆಯಲ್ಲಿ ಯಾವತ್ತೂ ಆದರ್ಶಕ್ಕೆ ಅವಕಾಶ ಇರಬೇಕು. ಇಲ್ಲಿಜಾತಿಯತೆ, ಭ್ರಷ್ಟಾಚಾರ ನುಸುಳಿಯದಂತೆ ಎಚ್ಚರ ವಹಿಸಬೇಕು. ಇಂತಹ ಬದಲಾವಣೆ ಆಗದಿದ್ದರೆ ಭವಿಷ್ಯ ಆತಂಕಕಾರಿಯಾಗುತ್ತದೆ ಎಂದು ಹೇಳಿದರು.
ಲೇಖಕ ಟಿ.ಎಸ್.ಆಂಜನಪ್ಪ ಮಾತನಾಡಿ, ಮೂಲ ಶಿಕ್ಷಕನಾದ ತಾವು 34 ವರ್ಷ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಬಹುತೇಕ ಇಲಾಖೆಯ ಎಲ್ಲಾ ವಿಭಾಗಗಳ ಆಡಳಿತ ವ್ಯವಸ್ಥೆ, ಅವಸ್ಥೆಗಳನ್ನು ಖುದ್ದು ಅನುಭವಿದೆ. ಇಲಾಖೆಯ ಆಡಳಿತ ಒತ್ತಡ, ಆ ಸಂದರ್ಭದ ನಿರ್ಧಾರಗಳು ಇವೆಲ್ಲವೂ ಮಕ್ಕಳ ಮೇಲೆ ನಾನಾ ರೀತಿಯ ಪರಿಣಾಮ ಬೀರುವುದನ್ನು ತಾವು ಗಮನಿಸಿದ್ದಾಗಿ ಹೇಳಿದ ಅವರು, ಕೆಲವು ಬಾರಿ ಶಾಲಾ ಮಕ್ಕಳು ಮುಕ್ತವಾಗಿ ಕಲಿಯಲು, ನಲಿಯಲು ನಾವೇ ಬಿಡುವುದಿಲ್ಲ ಇಂತಹ ಅನೇಕ ಕಿರಿಕಿರಿಗಳು ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾಗಬೇಕು ಎಂಬುದು ತಮ್ಮ ಆಶಯ ಎಂದು ಹೇಳಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ ಮಾತನಾಡಿದರು. ಕಾರ್ಯಕ್ರಮಕ್ಕೆ ಮೊದಲು ಇತ್ತೀಚೆಗೆ ನಿಧನರಾದ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.)
;Resize=(128,128))
;Resize=(128,128))