ಸಾರಾಂಶ
ಪ್ರಸಕ್ತ ಜಾಗತಿಕ ಮಟ್ಟದಲ್ಲಿ ಡ್ರೋನ್‌ಗಳು ಫ್ಯೂಚರಿಸ್ಟ್ ಗ್ಯಾಜೆಟ್‌ಗಳಾಗಿ ನೋಡಲ್ಪಟ್ಟಿವೆ. ವಿವಿಧ ಕೈಗಾರಿಗಳಲ್ಲಿ ಅನಿವಾರ್ಯ ಸಾಧನಗಳಾಗಿ ಮಾರ್ಪಟ್ಟಿವೆ ಎಂದು ಜಿಎಂ ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ, ದಾವಣಗೆರೆ
ಪ್ರಸಕ್ತ ಜಾಗತಿಕ ಮಟ್ಟದಲ್ಲಿ ಡ್ರೋನ್‌ಗಳು ಫ್ಯೂಚರಿಸ್ಟ್ ಗ್ಯಾಜೆಟ್‌ಗಳಾಗಿ ನೋಡಲ್ಪಟ್ಟಿವೆ. ವಿವಿಧ ಕೈಗಾರಿಗಳಲ್ಲಿ ಅನಿವಾರ್ಯ ಸಾಧನಗಳಾಗಿ ಮಾರ್ಪಟ್ಟಿವೆ ಎಂದು ಜಿಎಂ ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಹೇಳಿದರು.ನಗರದ ಜಿಎಂ ಸೆಂಟ್ರಲ್ ಲೈಬ್ರರಿಯಲ್ಲಿ ಜಿಎಂ ವಿಶ್ವವಿದ್ಯಾಲಯದ ರೋಬೋಟಿಕ್ಸ್ ಮತ್ತು ಆಟೋಮೇಷನ್ ಎಂಜಿನಿಯರಿಂಗ್ ವಿಭಾಗದಿಂದ ದ್ವಿತೀಯ ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಎರಡು ದಿನಗಳ ಅಪ್ಲಿಕೇಷನ್ಸ್ ಆಫ್ ಡ್ರೋನ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಡ್ರೋನ್‌ಗಳು ನಾವು ಕೆಲಸ ಮಾಡುವ ಮತ್ತು ಬದುಕುವ ವಿಧಾನ ಕ್ರಾಂತಿಗೊಳಿಸುತ್ತವೆ. ಕೃಷಿಯಿಂದ ಆರೋಗ್ಯ ರಕ್ಷಣೆವರೆಗೆ ದಕ್ಷತೆ, ಸುರಕ್ಷತೆ ಮತ್ತು ನಾವೀನ್ಯತೆ ಹೆಚ್ಚಿಸುವಲ್ಲಿ ಡ್ರೋನ್‌ಗಳು ಗಮನಾರ್ಹ ಪ್ರಗತಿ ಸಾಧಿಸುತ್ತವೆ ಎಂದರು.ಪ್ರಾಚಾರ್ಯ ಡಾ. ಎಂ.ಬಿ. ಸಂಜಯ್ ಪಾಂಡೆ ಮಾತನಾಡಿ, ತಂತ್ರಜ್ಞಾನ ಮುಂದುವರಿದಂತೆ ಮತ್ತು ನಿಯಮಗಳು ವಿಕಸನಗೊಳ್ಳುತ್ತಿದ್ದಂತೆ ನಾವು ಹೇಗೆ ಕೆಲಸ ಮಾಡುತ್ತೇವೆ, ಬದುಕುತ್ತೇವೆ ಮತ್ತು ನಮ್ಮ ಸುತ್ತಲಿನ ಪ್ರಪಂಚದೊಂದಿಗೆ ಸಂವಹನ ನಡೆಸುತ್ತೇವೆ ಎಂಬುದನ್ನು ಮರುರೂಪಿಸುವಲ್ಲಿ ಹೆಚ್ಚು ಅವಿಭಾಜ್ಯ ಪಾತ್ರ ವಹಿಸುತ್ತವೆ ಎಂದರು.
ವೇಹಾನ್ ಸಿ. ಟೆಕ್ನಾಲಜೀಸ್ ಇಂಡಿಯಾ ಪ್ರೈ. ಲಿಮಿಟೆಡ್ ಸಂಸ್ಥೆ ತರಬೇತುದಾರರಾದ ಬಿ.ರಘುನಂದನ, ಆಕಾಶ, ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಟಿ.ಆರ್. ತೇಜಸ್ವಿ ಕಟ್ಟಿಮನಿ, ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.- - - -20ಕೆಡಿವಿಜಿ33ಃ:
ಕಾರ್ಯಾಗಾರವನ್ನು ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಉದ್ಘಾಟಿಸಿದರು.