ರಾಮಾಯಣದ ವಿಚಾರಧಾರೆ ಶಿಕ್ಷಣಕ್ಕೆ ಪೂರಕ

| Published : Oct 18 2024, 12:15 AM IST

ರಾಮಾಯಣದ ವಿಚಾರಧಾರೆ ಶಿಕ್ಷಣಕ್ಕೆ ಪೂರಕ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಇಂದಿನ ಸಮಾಜದಲ್ಲಿ ಮಾನವೀಯತೆ, ಸಂಸ್ಕೃತಿ, ಸಂಸ್ಕಾರ ಮರೆತು ವ್ಯವಹರಿಸುತ್ತಿದ್ದೇವೆ ಎಂದು ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಪ್ರಸ್ತುತ ಇಂದಿನ ಸಮಾಜದಲ್ಲಿ ಮಾನವೀಯತೆ, ಸಂಸ್ಕೃತಿ, ಸಂಸ್ಕಾರ ಮರೆತು ವ್ಯವಹರಿಸುತ್ತಿದ್ದೇವೆ ಎಂದು ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಹೇಳಿದರು.

ಇಲ್ಲಿನ ಕನ್ನಡ ಭವನದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನವೀಯತೆ ಮತ್ತು ಸಂಸ್ಕೃತಿಯನ್ನು ಮನುಷ್ಯರಲ್ಲಿ ಮಾತ್ರವಲ್ಲದೆ ಕರುಣೆ ,ಪ್ರೀತಿ, ವಾತ್ಸಲ್ಯ ಮತ್ತು ಉದಾರತೆಯನ್ನು ಪ್ರಾಣಿ, ಪಕ್ಷಿಗಳಲ್ಲೂ ಕಾಣುತ್ತಿದ್ದೇವೆ. ರಾಮಾಯದಲ್ಲಿನ ಕುಟುಂಬದಲ್ಲಿ ಪರಸ್ಪರ ಸೌಹಾರ್ದ ಸಂಬಂಧವನ್ನು ನೋಡಬಹುದು. ರಾಮಾಯಣದಲ್ಲಿ ಬರುವ ವಿಚಾರ ಧಾರೆಗಳು ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿವೆ. ವಾಲ್ಮೀಕಿಯ ಜೀವನವೇ ನಮಗೆ ಆದರ್ಶ ಪ್ರಾಯ ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್‌ ಮಾತನಾಡಿ, ಸಾವಿರಾರು ವರ್ಷಗಳ ಹಿಂದೆ ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಅನುಸರಣೀಯ ಆದರ್ಶಗಳಿವೆ. ಅವರ ಆದರ್ಶ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ರಾಮರಾಜ್ಯ ಸ್ಥಾಪನೆಯಾಗಲಿದೆ ಎಂದರು.

ತಹಸೀಲ್ದಾರ್‌ ಶಿರೀನ್‌ ತಾಜ್‌ ಮಾತನಾಡಿ, ಮಹನೀಯರ ಜಯಂತಿಗಳು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೇ ಎಲ್ಲ ಜನಾಂಗದವರು ಸೇರಿ ಆಚರಿಸಿದಾಗ ಮಹಾತ್ಮರ ಜಯಂತಿಗಳಿಗೆ ನಿಜವಾದ ಅರ್ಥ ಬರುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಸಾಹಿತ್ಯ, ಸಂಸ್ಕೃತಿ, ಕೌಟುಂಬಿಕ ಸಂಬಂಧ, ಮಾತೃ ವಾತ್ಸಲ್ಯ ಮೊದಲಾದ ಆದರ್ಶಗಳನ್ನು ಕಾಣಬಹುದು. 24 ಸಾವಿರ ಶ್ಲೋಕಗಳನ್ನು ಒಳಗೊಂಡಿರುವ ರಾಮಾಯಣ ಬೃಹತ್‌ ಗ್ರಂಥವಾಗಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಡಿ.ಎಸ್‌.ಮುನೀಂದ್ರ ಕುಮಾರ್‌ ಮಾತನಾಡಿ, ವಾಲ್ಮೀಕಿಯ ಬಗ್ಗೆ ಅನೇಕ ದಂತ ಕಥೆಗಳಿದ್ದರೂ ವಾಸ್ತವವಾಗಿ ಅವರು ಬರೆದಿರುವ ರಾಮಾಯಣ ಕಥೆ ಒಪ್ಪಲು ಸಿದ್ದರಿದ್ದಾರೆ. ಆದರೆ ಮಹರ್ಷಿಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ವಾಲ್ಮೀಕಿ ರಾಮಾಯಣ ಪೂಜ್ಯ ಗ್ರಂಥವೆಂದು ಈ ದೇಶದ ಜನರು ಒಪ್ಪಿಕೊಂಡಿದ್ದಾರೆ. ಆದರೂ ವಿವಿಧ ಭಾಷೆಗಳಲ್ಲಿ ವಾಲ್ಮೀಕಿಯ ಬಗ್ಗೆ ಮಹತ್ವವಾದ ಗೌರವ ತರುವಂಥ ಕಥೆಗಳಿವೆ. ವಾಲ್ಮೀಕಿ ಪುರಾಣದ ಪುನಾರವರ್ತಿತ ಸಂಗತಿಯಾಗದೇ ಮರ್ತಮಾನದಲ್ಲಿ ಸಮುದಾಯ ಆತ್ಮವಲೋಕನ ಮಾಡಿಕೊಳ್ಳುವ ವೇದಿಕೆಯಾಗಲಿ. ಆದಿಮೂಲ, ತಳಮೂಲ, ಸಂಸ್ಕೃತಿಯ ತಳಹದಿ ವಾಲ್ಮೀಕಿ ಎಂದರು.

ಡಿಡಿಪಿಐ ಗಿರಿಜಾ, ಬಿಇಓ ಕೆ.ಎನ್‌.ಹನುಮಂತರಾಯಪ್ಪ, ಚಿತ್ತಯ್ಯ, ಮುರುಳಿ,ಲೋಕೋಪಯೋಗಿ ಇಲಾಖೆ ಎಇಇ ರಾಜ್‌ಗೋಪಾಲ್‌, ಪಶು ಸಂಗೋಪನಾ ಸಹಾಯಕ ನಿರ್ದೇಶಕ ಸಿದ್ದನಗೌಡ, ವಲಯ ಅರಣ್ಯಾಧಿಕಾರಿ ಸುರೇಶ್‌, ಮುತ್ತುರಾಜ್‌, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್‌, ಚಿಕ್ಕರಂಗಯ್ಯ, ಲೋಕೇಶ್ವರ್‌, ನಾಯಕ ಜನಾಂಗದ ಅಧ್ಯಕ್ಷ ರಂಗಶ್ಯಾಮಯ್ಯ, ಜಿಲ್ಲಾ ನಿರ್ದೇಶಕ ಜಿ.ಎಸ್‌.ಜಗದೀಶ್‌ ಕುಮಾರ್‌,ಕಾರ್ಯದರ್ಶಿ ಶಂಕರನಾರಾಯಣಬಾಬು ಇದ್ದರು.