ಸಾರಾಂಶ
ಹಾವೇರಿ: ಮನುಷ್ಯನ ಪರಿಪೂರ್ಣ ಬದುಕಿಗೆ ಪದವಿ, ಪಾವಿತ್ರ್ಯತೆ ಜತೆಗೆ ಹೃದಯ ವೈಶಾಲ್ಯತೆ ಸೃಷ್ಟಿಗೆ ಶರಣರ ವಚನಗಳು ಮಾರ್ಗಸೂಚಿ ಆಗಬಲ್ಲವು ಎಂದು ಹೊಸಮಠದ ಶಾಂತಲಿಂಗ ಸ್ವಾಮೀಜಿ ತಿಳಿಸಿದರು.
ಇಲ್ಲಿಯ ಹೊಸಮಠದ ಬಸವಕೇಂದ್ರ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ಶರಣ ಸಂಗಮ ಹಾಗೂ ಮಠದಂಗಳದಲ್ಲಿ ಮಹಾಮನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಮನುಷ್ಯನ ಸಂತೃಪ್ತ ಬದುಕಿಗೆ ಮೌಲ್ಯಗಳು ಅತಿ ಮುಖ್ಯ. ಅದೇ ಕಾರಣಕ್ಕೆ ಕವಿಗಳು, ಸಂತರು, ಮಹಾಂತರು, ವಿಜ್ಞಾನಿಗಳು ಮೌಲ್ಯಯುತ ಸಂದೇಶ ನೀಡಿದರು. ಬಸವಾದಿ ಶರಣರೂ ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಅದ್ಭುತ ಸಂದೇಶ ನೀಡಿದ್ದಾರೆ. ಅವುಗಳ ಅನುಕರಣೆ ಇಂದಿನ ಅಗತ್ಯ. ನಮ್ಮ ಬದುಕು ಭರವಸೆಗಳನ್ನು ಬೆನ್ನೆತ್ತಬೇಕು ಹೊರತು ದುರಾಸೆಗಳನ್ನಲ್ಲ. ಸುಂದರ ಬದುಕು ನಮ್ಮದಾಗಿಸಲು ವಚನಗಳು ದಾರಿದೀಪಗಳು ಎಂದರು.
ಶಿಕ್ಷಕ ಮಾಲತೇಶ ನಾಯ್ಕೋಡ ಉಪನ್ಯಾಸ ನೀಡಿ, ಶರಣರ ಸಂದೇಶಗಳನ್ನು ಅಳವಡಿಸಿಕೊಂಡ ಕುಟುಂಬ ನೆಮ್ಮದಿ ಬದುಕು ಕಾಣಲು ಸಾಧ್ಯ ಎಂದರು.ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀನಿವಾಸ್ ಟಿ. ಮಾತನಾಡಿದರು. ಜಯಶ್ರೀ ಕೊರಗರ, ಶಾಂತಾ ಭಜಂತ್ರಿ, ಸರೋಜಾ ಅಗಡಿ, ರಾಜೇಶ್ವರಿ ಬಿಷ್ಟನಗೌಡ್ರ, ಜಯಮ್ಮ ಅಗಡಿ ಅವರನ್ನು ಶ್ರೀಮಠದಿಂದ ಸನ್ಮಾನಿಸಿ, ಗೌರವಿಸಲಾಯಿತು.ಇದಕ್ಕೂ ಮುನ್ನ ಜರುಗಿದ ವಚನ ಗೋಷ್ಠಿಯಲ್ಲಿ ಬಸವರಾಜ ಸಣ್ಣಂಗಿ, ರಂಜನಾ ಭಟ್, ರೇಣುಕಾ ಗುಡಿಮನಿ, ಜುಬೇದಾ ನಾಯ್ಕ್, ಅಂಬಿಕಾ ಹಂಚಾಟೆ, ಚಂಪಾ ಹುಣಸಿಕಟ್ಟಿ, ಜ್ಯೋತಿ ಬಶೆಟ್ಟಿ, ಅಪ್ಸರಾ ತುಮ್ಮಿನಕಟ್ಟಿ, ಮಲ್ಲೇಶ ದಂಡಿನ, ಭೂಮಿಕಾ ರಜಪೂತ, ವಿನುತಾ ಅಂಗಡಿ, ಮೇಘನಾ ಟಿ.ಎಸ್. ಮತ್ತು ಲಿಪಿಕಾ ಟಿ.ಎಸ್. ಪಾಲ್ಗೊಂಡಿದ್ದರು.ಜಿ.ಎಂ. ಓಂಕಾರಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಳಿಕಟ್ಟಿ ಗೂಳಪ್ಪ ಅಧ್ಯಕ್ಷತೆ ವಹಿಸಿದ್ದರು. ಅನಿತಾ ಉಪಲಿ ನಿರೂಪಿಸಿದರು. ಸತೀಶ ಎಂ.ಬಿ. ಸ್ವಾಗತಿಸಿದರು. ಚಂದ್ರು ದೊಡ್ಡಮನಿ ವಂದಿಸಿದರು.ಪದವಿ ವಿದ್ಯಾರ್ಥಿಗಳಿಗೆ ಸಂಶೋಧನಾ ಜ್ಞಾನ ಅಗತ್ಯ
ರಾಣಿಬೆನ್ನೂರು: ಇಂದಿನ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿ ಕಡಿಮೆಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಸಂಶೋಧನೆಯಲ್ಲಿ ಆಸಕ್ತಿ ಬೆಳೆಸಿಕೊಂಡಲ್ಲಿ ಜೀವನದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂದು ಕರ್ನಾಟಕ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಹುಸೇನ್ ನಧಾಪ್ ತಿಳಿಸಿದರು.ನಗರದ ಬಿಎಜೆಎಸ್ಎಸ್ ಮಹಿಳಾ ಮಹಾವಿದ್ಯಾಲಯದಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಇಂಟರ್ನ್‌ಶಿಫ್ ರಿಪೋರ್ಟ್ ರೈಟಿಂಗ್ ಎಂಬ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದರು.ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಕೇವಲ ಅಂಕ ಗಳಿಕೆ ಹಿಂದೆ ಬಿದ್ದಿರುವ ವಿದ್ಯಾರ್ಥಿಗಳು ಶೈಕ್ಷಣಿಕ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಸಂಶೋಧನಾ ಜ್ಞಾನ ಅತ್ಯಗತ್ಯವಾಗಿದೆ ಎಂದರು.ನಿವೃತ್ತ ಪ್ರಾ. ಹಾಗೂ ಆಡಳಿತ ಮಂಡಳಿ ಸದಸ್ಯ ಕೆ.ಕೆ. ಹಾವಿನಾಳ ಕಾರ್ಯಾಗಾರ ಉದ್ಘಾಟಿಸಿದರು. ಪ್ರಾ. ಸುರೇಶ ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಬಿಎಡ್ ಕಾಲೇಜಿನ ಪ್ರಾ. ಡಾ. ಎಂ.ಎಂ. ಮೃತ್ಯುಂಜಯ, ಉಪ ಪ್ರಾಚಾರ್ಯ ದೇವರಾಜ ಹಂಚಿನಮನಿ, ಉಪನ್ಯಾಸಕರಾದ ಸಂತೋಷ ಭಜಂತ್ರಿ, ಡಾ. ಸುನೀಲ ಹಿರೇಮನಿ, ಡಾ. ಚಂದ್ರಶೇಖರ ಎಂ.ಕೆ., ಡಾ. ಪುಷ್ಪಾಂಜಲಿ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.