ಸಾರಾಂಶ
ಮಾನ್ವಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹತ್ತಿರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಮರ್ಪಿಸಿ ಜಯಂತಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಾನ್ವಿ
ಇಂದಿನ ಯುವ ಸಮುದಾಯ ಶಿವಾಜಿ ಮಹಾರಾಜರ ತ್ಯಾಗ, ಬಲಿದಾನಗಳನ್ನು, ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ದೇಶದಲ್ಲಿ ಶಾಂತಿ, ನೆಮ್ಮದಿಯನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ ಎಂದು ಛತ್ರಪತಿ ಶಿವಾಜಿ ಯುವಸೇನೆ ತಾಲೂಕು ಘಟಕದ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹತ್ತಿರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಮರ್ಪಿಸಿ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜರ ದೇಶಭಕ್ತಿ ಅಪಾರವಾದದ್ದು. ಅವರು ದೇಶವನ್ನು ಪರಕೀಯರ ಆಡಳಿತದಿಂದ ಮುಕ್ತಗೊಳಿಸಿ ಹಿಂದೂ ಧರ್ಮ ರಾಷ್ಟಧರ್ಮದ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಅಪ್ರತಿಮ ದೇಶಭಕ್ತ, ಸಾಹಸಿ ಪರಕ್ರಮಿಯಾಗಿದ್ದರು ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪಗೌಡ ನಕ್ಕುಂದಿ, ಶ್ರೀಕಾಂತ ಪಾಟೀಲ ಗೂಳಿ, ಚಂದ್ರು ನಾಯಕ, ಅಯ್ಯಪ್ಪ ನಾಯಕ, ವೀರೇಶ ಮಡಿವಾಳ, ಹನುಮೇಶ ನಾಯಕ, ತಿಮೇಶ್ ನಾಯಕ, ಕೊಂಡಯ್ಯ ನಾಯಕ, ಸ್ವಾಮಿ ಗುತ್ತೇದಾರ್, ಶಿವಲಿಂಗಯ್ಯ ಸ್ವಾಮಿ, ಕುಮಾರ್ ಮೇಧಾ,ಯಲ್ಲಯ್ಯ ನಾಯಕ, ವಿನೋದ್ ನಾಯಕ, ಸಾಗರ್, ಶರಣಪ್ಪ ಮೇದಾ, ಬಸವರಾಜ್ ಮಡಿವಾಳ,ಕೃಷ್ಣ ಕೆ.ಪಿ ,ಟಿ, ಶ್ರೀನಿವಾಸ್, ಮರಿಸ್ವಾಮಿ ಮದ್ಲಾಪೂರ, ವಿಶ್ವನಾಥ, ಮಂಜುನಾಥ, ಸಂದೀಪ್ ದ್ಯಾಸನೂರ್, ಅಂಬರೀಶ್ ಮಡಿವಾಳ ,ಸಂತೋಷ್ ಪಾಟೀಲ್, ರಾಮಾಂಜನೇಯ, ನರಸಿಂಹ ಕೆಇಬಿ, ವೆಂಕಟೇಶ್, ಹನುಮಂತ, ಶಂಕರ್ ಬಂಡಿ, ರಾಜಾ,ವೆಂಕಿ ಯಾದವ್ ನೀರಮಾನ್ವಿ ಸೇರಿದಂತೆ ಇನ್ನಿತರರು ಇದ್ದರು.