ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪ್ರಕರಣಗಳಿಲ್ಲ: ಡಿಎಚ್‌ಒ ಡಾ.ರಾಜೇಶ್‌

| Published : Dec 20 2023, 01:15 AM IST

ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪ್ರಕರಣಗಳಿಲ್ಲ: ಡಿಎಚ್‌ಒ ಡಾ.ರಾಜೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಪ್ರತಿದಿನ 70ರಿಂದ 100 ಮಂದಿಗೆ ಕೋವಿಡ್ ರ್ಯಾಪಿಡ್‌ ಆ್ಯಂಟಿ ಟೆಸ್ಟ್‌ (ರಾಟ್) ಹಾಗೂ ಆರ್‌ಟಿಸಿಅರ್ ಟೆಸ್ಟ್ ಮಾಡಲಾಗುತ್ತಿದೆ. ಇದುವರೆಗೂ ಯಾವುದೇ ಪಾಸಿಟಿವ್ ಬಂದಿಲ್ಲ. ಆದರೂ ಜನರು ಆತಂಕಪಡದೇ ಎಚ್ಚರಿಕೆಯಿಂದ ಇರಬೇಕಾದ ಸಮಯವಿದು ಎಂದು ಡಿಎಚ್‌ಒ ಡಾ.ರಾಜೇಶ್‌ ಸುರಗೀಹಳ್ಳಿ ಸುದ್ದಿಗಾರರಿಗೆ ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ.

ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರತಿದಿನ 70ರಿಂದ 100 ಮಂದಿಗೆ ಕೋವಿಡ್ ರ್ಯಾಪಿಡ್‌ ಆ್ಯಂಟಿ ಟೆಸ್ಟ್‌ (ರಾಟ್) ಹಾಗೂ ಆರ್‌ಟಿಸಿಅರ್ ಟೆಸ್ಟ್ ಮಾಡಲಾಗುತ್ತಿದ್ದು, ಇದುವರೆಗೂ ಯಾವುದೇ ಪಾಸಿಟಿವ್ ಬಂದಿಲ್ಲ ಎಂದು ಡಿಎಚ್‌ಒ ಡಾ.ರಾಜೇಶ್‌ ಸುರಗೀಹಳ್ಳಿ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೂ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಕೇರಳ ಪ್ರವಾಸಕ್ಕೆ ಹೋಗಿ ಬಂದ ಅಯ್ಯಪ್ಪಸ್ವಾಮಿ ಭಕ್ತರ ಮೇಲೆ ನಿಗಾ ಇಡಲು ಆಶಾ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ. ಕೊರೋನಾ ರೋಗಲಕ್ಷಣ ಇರುವ ವ್ಯಕ್ತಿಗಳನ್ನು ಕ್ಷೇತ್ರ ಸಿಬ್ಬಂದಿ ತಕ್ಷಣವೇ ಅವರ ಪರೀಕ್ಷೆ ಮಾಡಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ತೆರೆದು ಪರೀಕ್ಷೆ ನಡೆಸುವ ಬಗ್ಗೆ ಇದುವರೆಗೂ ಮಾರ್ಗದರ್ಶನ ಬಂದಿಲ್ಲ. ಜಿಲ್ಲಾ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ 950 ಆಕ್ಸಿಡೆಂಟ್ ಬೆಡ್‌, 150 ವೆಂಟಿಲೇಟರ್ ಬೆಡ್‌ಗಳಿವೆ. ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 45ಕ್ಕೂ ಹೆಚ್ಚು ಐಸಿಯು ಬೆಡ್‌ಗಳು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 35ಕ್ಕೂ ಹೆಚ್ಚು ಐಸಿಯು ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಶಿವಮೊಗ್ಗ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಆಕ್ಸಿಜನ್ ಪ್ಲಾಂಟ್‌ಗಳ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ, ಭದ್ರಾವತಿ, ಶಿಕಾರಿಪುರದಲ್ಲಿ ಆಕ್ಸಿಜನ್ ಜನರೇಷನ್ ಮಾಡುವ ಪ್ಲಾಂಟ್‌ಗಳಿವೆ. ಜೊತೆಗೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸ್ಟೋರೇಜ್ ಪ್ಲಾಂಟ್‌ಗಳಿವೆ ಎಂದು ತಿಳಿಸಿದರು.

- - - -19ಎಸ್‌ಎಂಜಿಕೆಪಿ11:

ಡಾ.ರಾಜೇಶ್‌ ಸುರಗೀಹಳ್ಳಿ