ಬೇಲೂರು ಹೆಬ್ಬಾಳಿನ ಸರ್ಕಾರಿ ಹೈಸ್ಕೂಲಿನಲ್ಲಿ ಶೌಚಾಲಯವೇ ಇಲ್ಲ, ವಿದ್ಯಾರ್ಥಿಗಳ ಪರದಾಟ

| Published : Feb 19 2024, 01:34 AM IST

ಬೇಲೂರು ಹೆಬ್ಬಾಳಿನ ಸರ್ಕಾರಿ ಹೈಸ್ಕೂಲಿನಲ್ಲಿ ಶೌಚಾಲಯವೇ ಇಲ್ಲ, ವಿದ್ಯಾರ್ಥಿಗಳ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ಹೆಬ್ಬಾಳು ಸರ್ಕಾರಿ ಹೈಸ್ಕೂಲಿನಲ್ಲಿ ಶೌಚಾಲಯವಿಲ್ಲದೆ ವಿದ್ಯಾರ್ಥಿಗಳು ಗಿಡ, ಪೊದೆ ಸೇರಿದಂತೆ ಶಾಲೆಯ ಮುಂದಿನ ಕೆರೆಯಲ್ಲಿ ಶೌಚಕ್ಕೆ ತೆರಳುತ್ತಿದ್ದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಾಲಾ ಅಭಿವೃದ್ಧಿ ಸಮಿತಿ ವಿರುದ್ಧ ಪೋಷಕರ ಆಕ್ರೋಶ

ಕನ್ನಡಪ್ರಭ ವಾರ್ತೆ ಬೇಲೂರು

ಶಾಲಾ ಅಭಿವೃದ್ಧಿ ಸಮಿತಿಯ ದಿವ್ಯ ನಿರ್ಲಕ್ಷ್ಯದಿಂದ ಹೆಬ್ಬಾಳು ಸರ್ಕಾರಿ ಹೈಸ್ಕೂಲಿನಲ್ಲಿ ಶೌಚಾಲಯವಿಲ್ಲದೆ ವಿದ್ಯಾರ್ಥಿಗಳು ಗಿಡ, ಪೊದೆ ಸೇರಿದಂತೆ ಶಾಲೆಯ ಮುಂದಿನ ಕೆರೆಯಲ್ಲಿ ಶೌಚಕ್ಕೆ ತೆರಳುತ್ತಿದ್ದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಾಲೂಕಿನ ಹೆಬ್ಬಾಳು ಸರ್ಕಾರಿ ಪ್ರೌಢಶಾಲೆ ತಾಲೂಕಿನಲ್ಲಿ ತನ್ನದೇಯಾದ ಸ್ಥಾನ ಪಡೆದುಕೊಂಡು ಬಂದಿದೆ. ಆದರೆ ಇತ್ತಿಚಿನ ದಿನದಲ್ಲಿ ಇಲ್ಲಿನ ಅಂಗಳವನ್ನೇ ಶೌಚಾಲಯವಾಗಿ ರೂಪಿಸಿಕೊಂಡಿರುವುದು ನಾಗರಿಕ ಸಮಾಜ ತಲೆತಗ್ಗಿಬೇಕಾದ ಸ್ಥಿತಿ ಬಂದಿದೆ. ಇನ್ನು ಇಲ್ಲಿನ ಬಾಲಕಿಯರ ಶೌಚಾಲಯ ಜೀರ್ಣಾವಸ್ಥೆಯಲ್ಲಿದ್ದು ಅ ಹೆಣ್ಣು ಮಕ್ಕಳು ಬೇರೆ‌ ದಾರಿ ಕಾಣದೇ ಇ-ಶೌಚಾಲಯ ಬಳಕೆ ಮಾಡುವ ಅನಿವಾರ್ಯತೆ ಎದುರಾಗಿದೆ. ಕಳೆದ ಒಂದು ವರ್ಷದಿಂದ ಬಾಲಕರ ಶೌಚಾಲಯ ದುಸ್ಥಿತಿಯಲ್ಲಿದ್ದು ಶಾಲೆಯ ಮುಖ್ಯ ಶಿಕ್ಷಕರು ಇತ್ತ ಕಡೆ ಗಮನ ನೀಡುತ್ತಿಲ್ಲ, ಬಾಲಕರು ಒಟ್ಟಾಗಿಯೇ ಶಾಲೆಯ ಮುಂದಿನ ಕೆರೆ ಅಂಗಳಲ್ಲಿ ಬಂದು ಮಲ-ಮೂತ್ರ ವಿಸರ್ಜನೆ ಮಾಡಬೇಕಿದೆ. ಈ ಸಂದರ್ಭದಲ್ಲಿ ಕೆರೆ ಹತ್ತಿರ ವಿದ್ಯಾರ್ಥಿಗಳು ಅನಾಹುತ ನಡೆದರೆ ಯಾರು ಉತ್ತರ ನೀಡುತ್ತಾರೆ ಎಂದು ಪೋಷಕರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಹೆಬ್ಬಾಳು ಸರ್ಕಾರಿ ಪ್ರೌಢ ಶಾಲೆ ಇಂದಿಗೂ ಮೂಲ ದಾಖಲಾತಿಯನ್ನು ಹೊಂದಿಲ್ಲ, ಕಾರಣ ಸರ್ವೆ ನಂ. ೫೨ ರ ೮.೭ ಎಕ್ಕರೆಯಲ್ಲಿಯೇ ತನ್ನ ದಾಖಲಾತಿ ಗುರುತಿಸಿಕೊಂಡಿದೆ. ಆದರೆ ಇಲ್ಲಿಯ ತನಕ ಮೂಲ ದಾಖಲಾತಿ ಇಲ್ಲದಿರುವುದು ಇಲ್ಲಿನ ಆಡಳಿತ ಮಂಡಳಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸಂಬಂಧಪಟ್ಟವರು ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಿ ಸರ್ಕಾರಿ ಶಾಲೆಯನ್ನು ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

‘ಹೆಬ್ಬಾಳು ಸರ್ಕಾರಿ ಹೈಸ್ಕೂಲು ವಿದ್ಯಾರ್ಥಿಗಳು ಬಯಲು ಶೌಚಾಲಯಕ್ಕೆ ಹೊಗುತ್ತಿರುವುದು ಖಂಡನೀಯ. ಈ ಬಗ್ಗೆ ನಾನು ಸೋಮವಾರ ಶಾಲೆಗೆ ಖುದ್ದು ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ನೀಡಿ ಶಾಲೆ ಉಳಿಸಬೇಕಿದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇನೆ’ ಎಂದು ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಹೇಳಿದರು.ಬೇಲೂರು ತಾಲೂಕಿನ ಹೆಬ್ಬಾಳು ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಕೆರೆ ಬದಿಯಲ್ಲಿ ಶೌಚಕ್ಕೆ ತೆರಳುವುದು.