ಚಿತ್ರಕಲಾ ಸ್ಪರ್ಧೆಯಲ್ಲಿ ಬಿ.ಸಿ. ಕೃಷ್ಣಗೆ ಪ್ರಥಮ ಬಹುಮಾನ

| Published : Jan 28 2024, 01:17 AM IST

ಸಾರಾಂಶ

ಸಾವಿರಾರು ಮಂದಿ ಚಿತ್ರಕಲಾ ಪ್ರೇಮಿಗಳು ಮತ್ತು ಸಾರ್ವಜನಿಕರು ಚಿತ್ರಕಲಾ ಪ್ರದರ್ಶನಕ್ಕೆ ಭೇಟಿ ನೀಡಿ ತಮ್ಮ ನೆಚ್ಚಿನ ಚಿತ್ರಗಳನ್ನು ಖರೀದಿಸಿದರು. ಆಹಾರ ಮೇಳಕ್ಕೆ ಎಷ್ಟು ಮಂದಿ ಭೇಟಿ ನೀಡಿದ್ದರೋ, ಅಷ್ಟೇ ಸಂಖ್ಯೆಯಲ್ಲಿ ಚಿತ್ರಸಂತೆಗೂ ಭೇಟಿ ನೀಡಿದ್ದರು. ಕಲಾವಿದರಿಂದ ತಮ್ಮ ಭಾವಚಿತ್ರಗಳನ್ನು ಬರೆಸಿಕೊಂಡು ಸಂಭ್ರಮಿಸಿದರು.

- ಮೈಸೂರು ಹಬ್ಬದ ಅಂಗವಾಗಿ ಚಿಂತ್ರಸೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ---

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಹಬ್ಬದ ಅಂಗವಾಗಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಸೆಂಟ್‌ ಜೊಸೆಫ್‌ ಕಾಲೇಜಿನ ಬಿ.ಸಿ. ಕೃಷ್ಣ ಪ್ರಥಮ ಬಹುಮಾನ ಪಡೆದಿದ್ದಾರೆ.

ನಗರದ ಮಾನಸ ಗಂಗೋತ್ರಿ ಆವರಣದಲ್ಲಿ ನಡೆಯುತ್ತಿರುವ ಈ ಮೈಸೂರು ಹಬ್ಬ ಅಂಗವಾಗಿ ಈ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಎಸ್.ಜೆ.ಸಿ.ಇ ಕಾಲೇಜಿನ ಶ್ರೇಯಸ್ ಜೋಶಿ ದ್ವಿತೀಯ, ಪ್ರಫುಲ್ ರಾಘವೇಂದ್ರ ತೃತೀಯ ಬಹುಮಾನ ಪಡೆದರು.

ವಿಜಯ ವಿಠ್ಠಲ ಕಾಲೇಜಿನ ನಿಖಿಲ್ ರಾಘವೇಂದ್ರ, ನವಕೀಸ್ ಶಾಲೆಯ ಎಂ.ಜಿ. ಪೂರ್ವಿಕಾ, ಡಿಎಂಎಸ್ ಶಾಲೆಯ ಎಂ. ಭರತ್ ಕುಮಾರ್ಸಮಾಧಾನಕರ ಬಹುಮಾನ ಪಡೆದುಕೊಂಡರು.

ಎರಡನೇ ದಿನವಾದ ಶನಿವಾರ ಕೂಡ ಸಾವಿರಾರು ಮಂದಿ ಚಿತ್ರಕಲಾ ಪ್ರೇಮಿಗಳು ಮತ್ತು ಸಾರ್ವಜನಿಕರು ಚಿತ್ರಕಲಾ ಪ್ರದರ್ಶನಕ್ಕೆ ಭೇಟಿ ನೀಡಿ ತಮ್ಮ ನೆಚ್ಚಿನ ಚಿತ್ರಗಳನ್ನು ಖರೀದಿಸಿದರು. ಆಹಾರ ಮೇಳಕ್ಕೆ ಎಷ್ಟು ಮಂದಿ ಭೇಟಿ ನೀಡಿದ್ದರೋ, ಅಷ್ಟೇ ಸಂಖ್ಯೆಯಲ್ಲಿ ಚಿತ್ರಸಂತೆಗೂ ಭೇಟಿ ನೀಡಿದ್ದರು. ಕಲಾವಿದರಿಂದ ತಮ್ಮ ಭಾವಚಿತ್ರಗಳನ್ನು ಬರೆಸಿಕೊಂಡು ಸಂಭ್ರಮಿಸಿದರು.

ಸಂಜೆ ಬಯಲು ರಂಗಮಂದಿರದಲ್ಲಿ ಹಿರೇಮಗಳೂರು ಕಣ್ಣನ್ನೇತೃತ್ವದ ತಂಡದವರು ಹಾಸ್ಯಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಇಡೀ ರಂಗಮಂದಿರದಲ್ಲಿ ಸ್ವಲ್ಪವೂ ಸ್ಥಳಾವಕಾಶ ಇಲ್ಲದಂತೆ ಸಾರ್ವಜನಿಕರು ನೆರೆದಿದ್ದರು. ಅನೇಕಾರು ಮಂದಿ ದೊರದಲ್ಲಿ ನಿಂತೇ ಕಾರ್ಯಕ್ರಮ ವೀಕ್ಷಿಸಿದರು.

ಜಾರ್ಜಿಯನ್‌ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ

ಮೈಸೂರು ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಇಂಡಿಯಾ ಜಾರ್ಜಿಯನ್ ತಂಡದಿಂದ ಜ. 28ರಂದು ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಲಿದೆ.

ಮೈಸೂರು ಫೆಸ್ಟ್ ಕಾರ್ಯಕ್ರಮದಲ್ಲಿ ಅತ್ಯಂತ ಗಮನಾರ್ಹ ಸಾಂಸ್ಕೃತಿಕ ಪ್ರದರ್ಶನ ಇದಾಗಿದ್ದು ವಿಶ್ವ ಪ್ರಸಿದ್ಧ ಸಂಗೀತ ಸ್ಥಳಗಳಲ್ಲಿ ಜಾರ್ಜಿಯಾ ಸಾಂಸ್ಕೃತಿಕ ತಂಡದವರು ಕಾರ್ಯಕ್ರಮ ನಡೆಸಿಕೊಡುವರು.

ಜಾರ್ಜಿಯಾ ಸಂಗೀತವು ವಿಶ್ವದ ವಿಶಿಷ್ಟ ಹಾಗೂ ಆಕರ್ಷಕ ಸಂಗೀತ ಶೈಲಿಗಳಲ್ಲಿ ಹೊಂದಾಗಿದ್ದು. ಮೈಸೂರು ಫೆಸ್ಟ್ ಕಾರ್ಯಕ್ರಮದಲ್ಲಿ ಇವರ ಪ್ರದರ್ಶನವನ್ನು ಕಣ್ಣು ತುಂಬಿಕೊಳ್ಳಬಹುದು.