ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕನಗರದಲ್ಲಿ ಮನೆ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಗೋಕಾಕ ಶಹರ ಠಾಣೆ ಪೋಲಿಸರು ಯಶಸ್ವಿಯಾಗಿದ್ದು ಬಂಧಿತರಿಂದ ₹ 7.68 ಲಕ್ಷ ಮೌಲ್ಯದ 64 ಗ್ರಾಂ ಚಿನ್ನಾಭರಣ ಮತ್ತು 590 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಗೋಕಾಕ
ನಗರದಲ್ಲಿ ಮನೆ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಗೋಕಾಕ ಶಹರ ಠಾಣೆ ಪೋಲಿಸರು ಯಶಸ್ವಿಯಾಗಿದ್ದು ಬಂಧಿತರಿಂದ ₹ 7.68 ಲಕ್ಷ ಮೌಲ್ಯದ 64 ಗ್ರಾಂ ಚಿನ್ನಾಭರಣ ಮತ್ತು 590 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ನಗರದ ಲಕ್ಷ್ಮೀ ಬಡಾವಣೆಯಲ್ಲಿ ನ.2ರಂದು ದಾಖಲಾದ ಕಳ್ಳತನ ಪ್ರಕರಣದ ಜಾಡು ಹಿಡಿದ ಪೊಲೀಸರು ನ. 2ರಂದು ನಂದೀಶ ಹನಮಂತ ಸಕ್ರಪ್ಪನವರ ಎಂಬ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಬಳಿಕ, ಆತನ ಸಹಚರರಾದ ನವೀನ ಅಶೋಕ ಮುಂಡರಗಿ, ರಮೇಶ ಶಂಕರೆಪ್ಪ ಅಗಡಿ ಎಂಬುವರನ್ನು ಬಂಧಿಸಿದ್ದಾರೆ.
ಸದರಿ ಪ್ರಕರಣ ಪತ್ತೆಗಾಗಿ ಎಸ್ಪಿ ಭೀಮಾಶಂಕರ ಗುಳೇದ ಅವರು ಸಿಪಿಐ ಸುರೇಶಬಾಬು ನೇತೃತ್ವದಲ್ಲಿ ತಂಡ ರಚಿಸಿದ್ದು ಕಳ್ಳತನ ಪ್ರಕರಣ ತನಿಖೆ ನಡೆಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರಿಂದ ಬಂಗಾರದ ಚೋಕರ್ ನಕ್ಲೇಸ್ 1, ಸಣ್ಣ ಮಂಗಳಸೂತ್ರ 1, ಚಿನ್ನದ ಬಳೆಗಳು ಸೇರಿ ಒಟ್ಟು 64 ಗ್ರಾಂ ತೂಕದ ₹ 7.68 ಮೌಲ್ಯದ ಚಿನ್ನದ ಆಭರಣ ಮತ್ತು ₹ 92 ಸಾವಿರ ಮೌಲ್ಯದ 590 ಗ್ರಾಂ ಬೆಳ್ಳಿ ಆಭರಣ ವಶಕ್ಕೆ ಪಡೆದಿದ್ದಾರೆ.ಕಾರ್ಯಾಚರಣೆಯಲ್ಲಿ ಸಿಪಿಐ ಸುರೇಶಬಾಬು, ಪಿಎಸ್‌ಐ ಕಿರಣ ಮೋಹಿತೆ, ನಿಖಿಲ ಕಾಂಬಳೆ, ಸಿಬ್ಬಂದಿ ಕುಮಾರ ಈಳಿಗೇರ, ಜೆ.ಎಚ್.ಗುಡ್ಲಿ, ಎ.ಸಿ.ಕಾಪಶಿ, ಎಮ್.ಎಲ್.ಹುಚ್ಚಗೌಡರ, ಎಸ್.ಎಸ್.ಕುರಬೇಟ ಹಾಗೂ ಟೆಕ್ನಿಕಲ್ ಸೆಲ್‌ನ ಸಚೀನ ಪಾಟೀಲ, ವಿನೋದ ಠಕ್ಕನವರ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))