ಸಾರಾಂಶ
ಚಾಂದಿನಿ ಚೌಕ್‌ನಲ್ಲಿ ಮುಸ್ಲಿಂ ಬಾಂಧವರ ಮನೆಗಳಿಗೆ ಭೇಟಿ ನೀಡಿ ಮತಯಾಚನೆ
ಕನ್ನಡಪ್ರಭ ವಾರ್ತೆ ಅರಸೀಕೆರೆಭಾರತದ ಕನಸಿಗೆ ಕೊಡಲಿ ಏಟು ನೀಡಲು ಹೊರಟಿರುವ ದುಷ್ಟ ಶಕ್ತಿಗಳ ಬಗ್ಗೆ ಸದಾ ಜಾಗೃತರಾಗಿರಬೇಕು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕೃಪೆಯಿಂದ ಬೆಳದವರು ಎಲ್ಲವನ್ನು ಮರೆತು ಮನಬಂದಂತೆ ಮಾತನಾಡುತ್ತಿದ್ದು ಕಾಲವೇ ಅವರಿಗೆ ಉತ್ತರಿಸಲಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ನಗರದ ಮಟನ್ ಮಾರ್ಕೆಟ್ ಹಾಗೂ ಚಾಂದಿನಿ ಚೌಕ್‌ನಲ್ಲಿ ಹಲವು ಮುಸ್ಲಿಂ ಬಾಂಧವರ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿ ಮಾತನಾಡಿದರು.‘ನನ್ನ ಗುರುತು ತೆನೆ ಹೊತ್ತ, ನಾನು ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಹಾಗೂ ಎಚ್.ಡಿ.ರೇವಣ್ಣ ಮಗ ಎಂದು ಹೇಳಿ ನನಗೆ ಮತನೀಡಿ’ ಎಂದು ಮತಯಾಚನೆ ಮಾಡಿದರು.
‘ಜೆಡಿಎಸ್ ಪಕ್ಷದಲ್ಲಿ ಸುಮಾರು 25 ವರ್ಷದಿಂದ ಯಾರನ್ನು ಬೆಳೆಸಿದ್ದೆವು ಅವರು ನಮಗೆ ಮೋಸ ಮಾಡಿ ಹೋಗಿದ್ದಾರೆ. ಈ ಸಾರಿ ಅಂಥವರ ಮಾತಿಗೆ ಯಾರು ಮರಳಾಗಬೇಡಿ. ದೇಶದ ಸಮಗ್ರತೆ ಹಾಗೂ ಐಕ್ಯತೆಗಾಗಿ ಉಭಯ ಪಕ್ಷಗಳ ಮುಖಂಡರು ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು’ ಎಂದು ಮನವಿ ಮಾಡಿದರುಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಯಾದ ಸಂಸದ ಪ್ರಜ್ವಲ್ ರೇವಣ್ಣ ರವರ ಸಮ್ಮುಖದಲ್ಲಿ ಈ ವೇಳೆ ನೂರಾರು ಮಂದಿ ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮಾಜಿ ಸಚಿವ ಬಿ ಶಿವರಾಂ ಅಪ್ಪಟ ಅಭಿಮಾನಿಗಳಾದ ನಗರಸಭಾ ಮಾಜಿ ಸದಸ್ಯ ಯುನೂಸ ಹಾಗೂ ಹಾಸನ ಜಿಲ್ಲಾ ಯೂತ್ ಕಾಂಗ್ರೆಸ್ ಮುಖಂಡ ಸಮೀರ್ ಸ್ನೇಹಿತರ ಬಳಗದವರು ಮತ್ತು ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತ ಬಂಧುಗಳು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.ನಂತರ ಮಾಧ್ಯಮದ ಜೊತೆ ಮಾತನಾಡಿ, ‘ನಗರಸಭಾ ಮಾಜಿ ಸದಸ್ಯ ಯೂನುಸ್ ನಮ್ಮ ತಂದೆ ಕಾಲದಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದು. ಶಾಸಕ ಕೆ ಎಂ ಶಿವಲಿಂಗೇಗೌಡ 2023 ನೇ ಸಾಲಿನಲ್ಲಿ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಬಂದ ನಂತರ ನಮ್ಮನ್ನು ಕಡೆಗಣಿಸಿ ಏಕ ಪಕ್ಷ ಹಾಗೂ ಸರ್ವಾಧಿಕಾರ ನಿರ್ಧಾರ ಸಹ ಮಾಡುತ್ತ ಇದುವರೆಗೂ ಬಂದಿರುವ ಕಾರಣ ನಮಗೆ ಮನಸಾಕ್ಷಿ ಒಪ್ಪದ ಕಾರಣ ಇಂದು ನಾವು ನೂರಾರು ಕಾಂಗ್ರೆಸ್ ಕಾರ್ಯಕರ್ತ ಬಂಧುಗಳು ಹಾಸನ ಸಂಸದರಾದ ಪ್ರಜ್ವಲ್ ರೇವಣ್ಣ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗಿರುತ್ತೇವೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಚಂದ್ರಶೇಖರ್, ನಗರಸಭಾ ಸದಸ್ಯರಾದ ಸುಜಾತ ರಮೇಶ್, ಜೆಡಿಎಸ್ ಮುಖಂಡರು ಗಂಡಸಿ ಮಂಜು, ವಸಿಂ, ಇಮ್ರಾನ್, ನವಾಜ್, ಗಣೇಶ್, ಕೆವಿಎನ್ ಶಿವು ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತ ಬಂಧುಗಳು. ರೈತ ಬಾಂಧವರು, ಸಾರ್ವಜನಿಕ ಬಂಧುಗಳು, ಇನ್ನಿತರರು ಉಪಸ್ಥಿತರಿದ್ದರು.ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅರಸೀಕೆರೆಯ ಮಟನ್ ಮಾರ್ಕೆಟ್ ಹಾಗೂ ಚಾಂದಿನಿ ಚೌಕ್‌ನಲ್ಲಿ ಹಲವು ಮುಸ್ಲಿಂ ಬಾಂಧವರ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.