ಇಂದು ಹೊಸಕೋಟೆ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

| Published : Mar 02 2024, 01:47 AM IST

ಸಾರಾಂಶ

ಹೊಸಕೋಟೆ: ನಗರದ ತಾಲೂಕು ಕಚೇರಿ ಆವಣದಲ್ಲಿ ಮಾ.2ರಂದು ಶನಿವಾರ ನಡೆಯಲಿರುವ ಹೊಸಕೋಟೆ ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರ ಈಗಾಗಲೇ ಸಜ್ಜುಗೊಂಡಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಂ.ಮುನಿರಾಜು ತಿಳಿಸಿದರು.

ಹೊಸಕೋಟೆ: ನಗರದ ತಾಲೂಕು ಕಚೇರಿ ಆವಣದಲ್ಲಿ ಮಾ.2ರಂದು ಶನಿವಾರ ನಡೆಯಲಿರುವ ಹೊಸಕೋಟೆ ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರ ಈಗಾಗಲೇ ಸಜ್ಜುಗೊಂಡಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಂ.ಮುನಿರಾಜು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿಗಳು, ವಿಮರ್ಶಕರು, ಪತ್ರಕರ್ತರು ಆದ ದೊಡ್ಡಹುಲ್ಲೂರು ರುಕ್ಕೋಜಿ ಕನ್ನಡದ ತೇರು ಎಳೆಯಲಿದ್ದಾರೆ. ಸಾಹಿತ್ಯ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ಸಂವಾದ, ವಿಚಾರಗೋಷ್ಠಿಗಳು ನಡೆಯಲಿವೆ ಎಂದರು.

ಸಮ್ಮೇಳನ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣದೊಂದಿಗೆ ಪ್ರಾರಂಭವಾಗಲಿದೆ. ರಾಷ್ಟ್ರಧ್ವಜಾರೋಹಣವನ್ನ ತಹಸೀಲ್ದಾರ್ ವಿಜಯ್ ಕುಮಾರ್, ಕನ್ನಡ ಧ್ವಜಾರೋಹಣವನ್ನು ಡಿವೈಎಸ್ಪಿ ಮಲ್ಲೇಶ್, ಪರಿಷತ್ ಧ್ವಜಾರೋಹಣವನ್ನ ಕಸಾಪ ಅಧ್ಯಕ್ಷ ಹೆಚ್.ಎಂ.ಮುನಿರಾಜು ನೆರವೇರಿಸಲಿದ್ದಾರೆಂದರು.

ಬೆಳಿಗ್ಗೆ 9 ಗಂಟೆಗೆ ತಾಲೂಕು ಕಚೇರಿ ಆವರಣದಿಂದ ಬೆಳ್ಳಿಸಾರೋಟದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಡೊಳ್ಳು ಕುಣಿತ ವೀರಗಾಸೆ, ಕೀಲುಕುದುರೆ ಇತರೆ ಕಲಾತಂಡಗಳೊಂದಿಗೆ ಜೆಸಿ ವೃತ್ತ, ಕೆಇಬಿ ವೃತ್ತದ ಮೂಲಕ ಸಾಗಿ ತಾಲೂಕು ಕಚೇರಿ ಆವರಣ ತಲುಪಲಿದೆ.

ಬಳಿಕ ವೇದಿಕೆ ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆಎಚ್ ಮುನಿಯಪ್ಪ, ಸಂಸದ ಬಿ.ಎನ್.ಬಚ್ಚೇಗೌಡ, ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಉದ್ಘಾಟಿಸಲಿದ್ದಾರೆ. ಶಾಸಕ ಶರತ್ ಬಚ್ಚೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಕಸಾಪ ಜಿಲ್ಲಾಧ್ಯಕ್ಷ ಬಿ.ಎಂ.ಕೃಷ್ಣಪ್ಪ ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಬಾಕ್ಸ್................ಪ್ರಚಲಿತ ವಿದ್ಯಮಾನಗಳ ಸಂವಾದ

ಮಧ್ಯಾಹ್ನ 3 ಗಂಟೆಗೆ ಶಿಕ್ಷಕರು ಸಾಹಿತಿಯು ಆದ ಚಲಪತಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ 4ಕ್ಕೆ ನೀರಾವರಿ ಕುರಿತಾದ ಕೆಸಿ ವ್ಯಾಲಿ, ಹೆಚ್‌ಏನ್ ವ್ಯಾಲಿ ನೀರಿನ ಬಗ್ಗೆ ಹಾಗೂ ಪರಿಸರ ಬಗ್ಗೆ, ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರಿನ ಬಗ್ಗೆ ಸಂವಾದ ಹಾಗೂ ವಿಚಾರಗೋಷ್ಠಿ ಜರುಗಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಹೆಚ್‌ಎಂ ಮುನಿರಾಜು ತಿಳಿಸಿದರು.ಬಾಕ್ಸ್ ............ಸಮ್ಮೆಳನಾಧ್ಯಕ್ಷರ ಪರಿಚಯ:

ರುಕ್ಕೋಜಿರವರು 1985ರಲ್ಲಿ ಹೊಸಕೋಟೆ ತಾಲೂಕಿನ ದೊಡ್ಡಹುಲ್ಲೂರಿನಲ್ಲಿ ಜನಿಸಿದರು. ರಂಗಭೂಮಿ, ಚಲನಚಿತ್ರ, ಬರವಣಿಗೆ ಇವರ ಆಸಕ್ತಿಯ ಕ್ಷೇತ್ರವಾಗಿ ವಾರಪತ್ರಿಕೆ ಪತ್ರಕರ್ತರಾಗಿ, ಚಲನಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ, ರಚಿಸಿ ಪ್ರಶಸ್ತಿ ಗಳಿಸಿದ್ದಾರೆ. ವರನಟ ಡಾ.ರಾಜ್ ಕುಮಾರ್ ಅವರ ನಿಕಟವರ್ತಿಯಾಗಿದ್ದ ಇವರು, ಡಾ.ರಾಜ್ ಕುಮಾರ್ ಸಮಗ್ರ ಜೀವನ ಚರಿತ್ರೆಯನ್ನು ಅಭೂತಪೂರ್ವವಾಗಿ ಚಿತ್ರಸಹಿತವಾಗಿ ರಚಿಸಿ ಎರಡು ಮಹಾ ಸಂಪುಟಗಳಲ್ಲಿ ಹೊರತರುವ ಮೂಲಕ ದಾಖಲೆ ನಿರ್ಮಿಸಿದ್ದು ಈ ಕೃತಿಗೆ ಕೇಂದ್ರ ಸರ್ಕಾರದ ಸ್ವರ್ಣ ಕಮಲ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕರ್ನಾಟಕ ಸರ್ಕಾರದ ಚಲನಚಿತ್ರ ಸಾಹಿತ್ಯ ಪ್ರಶಸ್ತಿ, ಕಸಾಪದ ಡಾ.ರಾಜ್ ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

(ಪರಿಚಯಕ್ಕೆ ಅವರ ಫೋಟೋ ಮಗ್‌ಶಾಟ್‌ ಬಳಸಿ)(ಫೋಟೋ: 1 ಹೆಚ್‌ಎಸ್‌ಕೆ 3- ರುಕ್ಕೋಜಿ ಭಾವಚಿತ್ರ.)

ಫೋಟೋ : 1 ಹೆಚ್‌ಎಸ್‌ಕೆ 2

ಹೊಸಕೋಟೆ ನಗರದಲ್ಲಿ ನಡೆಯಲಿರುವ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಸಾಹಿತಿ ದೊಡ್ಡಹುಲ್ಲೂರು ರುಕ್ಕೋಜಿ ಅವರನ್ನು ಕಸಾಪ ಪದಾಧಿಕಾರಿಗಳು ಅಭಿನಂದಿಸಿದರು.